More

    ಅನಿವಾಸಿ ಭಾರತೀಯರಿಗೆ ಬೇಕಿದೆ ಪ್ರತ್ಯೇಕ ಸಚಿವಾಲಯ

    ಶಿವಮೊಗ್ಗ: ಹೆಚ್ಚು ಸಂಬಳದ ಆಸೆಗೆಂದು ವಿದೇಶಕ್ಕೆ ತೆರಳುವವರು ಸಂಕಷ್ಟ ಎದುರಿಸಿದ ಅನೇಕ ನಿದರ್ಶನಗಳಿವೆ. ಅಂತಹವರಿಗೆ ತ್ವರಿತವಾಗಿ ಸ್ಪಂದಿಸಲು, ಅನಿವಾಸಿ ಭಾರತೀಯರಿಗೆ ನೆರವಾಗಲು ಪ್ರತ್ಯೇಕ ಸಚಿವಾಲಯ ಆರಂಭಿಸಬೇಕಾದ ಅವಶ್ಯಕತೆಯಿದೆ ಎಂದು ಅನಿವಾಸಿ ಭಾರತೀಯ ಫೋರಂನ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

    ಕೆಲವು ನಕಲಿ ಏಜೆನ್ಸಿಗಳು ವಿದೇಶದಲ್ಲಿ ಹೆಚ್ಚು ವೇತನದ ಆಸೆ ತೋರಿಸಿ ಜನರನ್ನು ವಂಚಿಸುತ್ತಿವೆ. ವಿದೇಶಕ್ಕೆ ತೆರಳಿದ ಬಳಿಕ ಅಲ್ಲಿ ಜನ ಸಂಕಷ್ಟ ಎದುರಿಸುವಂತಾಗಿದೆ. ಕಷ್ಟದಲ್ಲಿರುವವರಿಗೆ ಏನು ಮಾಡಬೇಕು ಎಂಬುದು ತೋಚದೇ ಅವರ ಬದುಕು ನರಕ ಸದೃಶವಾಗುತ್ತಿದೆ. ಹೀಗಾಗಿ ಪ್ರತ್ಯೇಕ ಸಚಿವಾಲಯ ಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಏಜೆನ್ಸಿಗಳ ಮೂಲಕ ವಿದೇಶಗಳಿಗೆ ತೆರಳುವವರು ಜಾಗರೂಕರಾಗಿಬೇಕು. ವಿಯೆಟ್ನಾಂ, ಕಾಂಬೋಡಿಯಾಕ್ಕೆ ತೆರಳುವವರು ಎಚ್ಚರ ವಹಿಸಬೇಕು. ಅಲ್ಲಿ ಸರಿಯಾದ ಕೆಲಸ, ವೇತನ ಇಲ್ಲದೇ ತೊಂದರೆ ಎದುರಿಸಬೇಕಾಗುತ್ತೆ. ಸಾಗರದ ವ್ಯಕ್ತಿಯೊಬ್ಬರಿಗೆ ಇದೇ ರೀತಿ ಆಗಿದ್ದು ನಮ್ಮ ಸಮಿತಿಯ ಗಮನಕ್ಕೆ ಬಂದಿದೆ ಎಂದರು.
    ಶಿವಮೊಗ್ಗ ಜಿಲ್ಲೆಯಿಂದ ಹಕ್ಕಿಪಿಕ್ಕಿ ಸಮುದಾಯದ ಅನೇಕ ಮಂದಿ ಆಫ್ರಿಕಾದ ದೇಶಗಳಿಗೆ ಹೋಗಿ ಕಷ್ಟಕ್ಕೆ ಸಿಲುಕಿದ ನಿದರ್ಶನಗಳಿವೆ. ಅಂತಹ ಸಂದರ್ಭದಲ್ಲಿ ನಮ್ಮ ಸಮಿತಿಯಿಂದ ಅವರಿಗೆ ಅಗತ್ಯ ನೆರವು ಒದಗಿಸಿ ತಾಯ್ನಡಿಗೆ ಕರೆ ತಂದಿದ್ದೇವೆ. ವಿಶ್ವದ ವಿವಿಧ ದೇಶಗಳಲ್ಲಿ ಉದ್ಯೋಗಕ್ಕೆಂದು ನೆಲೆಸಿರುವ ಕನ್ನಡಿಗರನ್ನು ಸೇರಿಸಿ ಪ್ರವಾಸಿ ದಿವಸ್ ಆಚರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಭೂಪಾಲ, ಎನ್.ಡಿ.ಪ್ರವೀಣ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts