More

    ಬಾಡಿಗೆ ಪಾವತಿಸದ ಮಳಿಗೆಗೆ ನಗರಸಭೆಯಿಂದ ಬೀಗ

    ರಾಯಚೂರು: ಬಾಡಿಗೆ ಪಾವತಿಸದಿರುವ ಹಾಗೂ ಟೆಂಡರ್ ಅವ ಮುಗಿದರೂ ಮಳಿಗೆಗಳನ್ನು ಖಾಲಿ ಮಾಡದ ನಗರದ ಮಹಿಳಾ ಸಮಾಜದ ಮುಂಭಾಗದಲ್ಲಿರುವ ಮಳಿಗೆಗಳನ್ನು ನಗರಸಭೆ ಸಿಬ್ಬಂದಿ ಶನಿವಾರ ಬೀಗ ಹಾಕಿ ತೆರವು ಕಾರ್ಯಾಚರಣೆ ನಡೆಸಿದರು.
    2023ರಲ್ಲಿಯೇ ಟೆಂಡರ್ ಅವ ಮುಗಿದಿದ್ದರಿಂದ ನಗರಸಭೆಯಿಂದ ಬಾಡಿಗೆದಾರರಿಗೆ ಬಾಕಿ ಬಾಡಿಗೆ ಪಾವತಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ನೋಟಿಸ್ ನೀಡಿದ್ದರು. ಆದರೆ ಬಾಡಿಗೆಯೂ ಪಾವತಿಸದೆ, ಮಳಿಗೆ ಖಾಲಿ ಮಾಡದೆ ಮುಂದುವರಿದಿದ್ದರು.
    ನಗರಸಭೆಯಿಂದ ಮಳಿಗೆ ಬಾಡಿಗೆ ಪಡೆದ ಬಹುತೇಕರು ಮತ್ತೊಬ್ಬರಿಗೆ ಬಾಡಿಗೆ ನೀಡಿದ್ದು, ಇಂದು ನಗರಸಭೆ ಅಕಾರಿಗಳು ಮಳಿಗೆ ಖಾಲಿ ಮಾಡಿಸಲು ಬಂದಾಗ ಬಹುತೇಕರು ವಿರೋಧ ವ್ಯಕ್ತಪಡಿಸಿದರು. ಅದರಲ್ಲೂ ತೆಂಗನಕಾಯಿ ವ್ಯಾಪಾರಿ ಅಕಾರಿಗಳೊಂದಿಗೆ ಹೆಚ್ಚಿನ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಆತನ ಕೈಯಲ್ಲಿದ್ದ ಮಚ್ಚು ಕೆಳಗಿಡುವಂತೆ ಸ್ಥಳದಲ್ಲಿದ್ದವರು ಹೇಳಿದರು.
    ಬಹಳಷ್ಟು ಮಳಿಗೆಯಲ್ಲಿದ್ದವರು ತೆರವುಗೊಳಿಸಲು ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸ್ ಬಂದೋಬಸ್ತ್‌ನಲ್ಲಿ ಮಳಿಗೆಗಳಿಗೆ ನಗರಸಭೆ ಸಿಬ್ಬಂದಿ ಬೀಗ ಹಾಕಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗುರುಸಿದ್ಧಯ್ಯ ಹಿರೇಮಠ, ಸಿಪಿಐ ಉಮೇಶ ಕಾಂಬ್ಳೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts