More

    FACT CHECK| ಹೆಚ್ಚು ನೀರು ಕುಡಿದರೆ ಕರೊನಾ ಬರಲ್ವಾ? ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ವೈರಸ್​ ಹೊರಟು ಹೋಗುತ್ತಾ?

    ನವದೆಹಲಿ: ಕರೊನಾ ಬಗ್ಗೆ ಮಾಹಿತಿ ಹಂಚಿಕೆ ಎಷ್ಟರ ಪ್ರಮಾಣದಲ್ಲಿ ಆಗುತ್ತಿದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವದಂತಿಗಳು ಹರಡಿಕೊಳ್ಳುತ್ತಿವೆ. ಹಾಗೆ ಮಾಡಿದರೆ ಕರೊನಾ ಹೋಗತ್ತೆ, ಹೀಗೆ ಮಾಡಿದರೆ ಕರೊನಾ ಬರಲ್ಲ ಎನ್ನುವಂತಹ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದೇ ರೀತಿಯಲ್ಲಿ ಹೆಚ್ಚು ನೀರು ಕುಡಿದರೆ ಕರೊನಾ ವೈರಸ್​ ಬರುವುದಿಲ್ಲ, ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಕರೊನಾ ವೈರಸ್​ ಹೊರಟು ಹೋಗುತ್ತದೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು. ಇದೀಗ ಆ ಸುದ್ದಿ ಸತ್ಯವೋ ಅಥವಾ ಸುಳ್ಳೋ ಎನ್ನುವುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.

    ಕರೊನಾ ವೈರಸ್​ ಶ್ವಾಸಕೋಶಕ್ಕೆ ತಲುಪುವುದಕ್ಕೂ ಮೊದಲು ಮನುಷ್ಯನ ಗಂಟಲಿನಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಇರುತ್ತದೆ. ಈ ಸಮಯದಲ್ಲಿ ಕೆಮ್ಮು, ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯುವುದರಿಂದ ಮತ್ತು ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಕರೊನಾ ವೈರಸ್ ಅ​ನ್ನು ಹೊರಹಾಕಬಹುದು ಎನ್ನುವ ಸಂದೇಶವುಳ್ಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಲಕ್ಷಾಂತರ ಜನರು ಅದನ್ನು ನಂಬಿಕೊಂಡು ಅದರಂತೆ ಮಾಡಿದ್ದರು ಕೂಡ. ಆದರೆ ಇದು ಸುಳ್ಳು ಮಾಹಿತಿ ಎನ್ನುವುದು ಫ್ಯಾಕ್ಟ್​ ಚೆಕ್​ ವೆಬ್​ಸೈಟ್​ ಮಾಡಿರುವ ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.

    ಕರೊನಾ ವೈರಸ್​ ಗಂಟಲಿನಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ ಇರುತ್ತದೆ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲ. ಹಿರಿಯರ ಕಾಲದಿಂದಲೂ ಕೆಮ್ಮಿಗೆ ಮತ್ತು ಗಂಟಲು ನೋವಿಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವ ಅಭ್ಯಾಸ ಬಂದಿದೆ. ಆದರೆ ಇದರಿಂದ ಕರೊನಾ ದೂರಾಗುತ್ತದೆ ಎನ್ನುವುದಕ್ಕೂ ಕೂಡ ಯಾವುದೇ ದಾಖಲೆ ಇಲ್ಲ. ಯಾವುದೇ ವೈದ್ಯರೂ ಸಹ ಇಂತದ್ದೊಂದು ಮಾಹಿತಿಯನ್ನು ನೀಡಿಲ್ಲ. ಕರೊನ ವೈರಸ್​ ಬಗ್ಗೆ ವದಂತಿಗಳನ್ನು ನಂಬದೆ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಂದು ವೆಬ್​ಸೈಟ್​ ತಿಳಿಸಿದೆ. (ಏಜೆನ್ಸೀಸ್​)

    ಕರೊನಾದಿಂದಾಗಿ ಸತ್ತ ವೃದ್ಧನಿಗೆ ಸಾಯುವ ಮೊದಲೇ ಬಂದಿತ್ತು ಸತ್ತಿರುವ ಸಂದೇಶ

    ಕರೊನಾ ಸಂಕಷ್ಟ ವಿವರಿಸಿದ್ದಾರೆ ಫಿಲಿಪೈನ್ಸ್​ನಲ್ಲಿರುವ ಕರುನಾಡ ಕುವರಿಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts