More

    21 ರಾಜ್ಯಗಳ ಆಯ್ಕೆ 1, ಯಾರಿಗೂ ಬೇಕಿಲ್ವಾ ಆಯ್ಕೆ 2?

    ನವದೆಹಲಿ: ದೇಶದ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಆಯ್ಕೆ ಒಂದನ್ನು ಆರಿಸಿಕೊಂಡಿದ್ದರೆ, ಆಯ್ಕೆ ಎರಡು ಇದುವರೆಗೂ ಯಾರಿಗೂ ಬೇಕಾಗಿಲ್ಲ!

    ಹೌದು.. ಈಗ ಪ್ರಸ್ತಾಪಿಸುತ್ತಿರುವುದು ಜಿಎಸ್​ಟಿ ಸಂಬಂಧಿತ ವಿಚಾರ. ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ನೀಡಬೇಕಾಗಿರುವ ಜಿಎಸ್​ಟಿ ಪಾಲಿನ ಕೊರತೆ ನೀಗಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯಗಳ ಮುಂದೆ ಎರಡು ಆಯ್ಕೆಗಳನ್ನು ಇಡಲಾಗಿದೆ. ಕರೊನಾ ಹಾಗೂ ಲಾಕ್​ಡೌನ್​ ಕಾರಣದಿಂದ ಸದ್ಯ ಜಿಎಸ್​ಟಿ ಪಾಲಿನ ಹಣ ಕೊಡುವ ಪರಿಸ್ಥಿತಿ ಇರದ ಕಾರಣ ಕೇಂದ್ರ ಈ ಎರಡು ಆಯ್ಕೆಗಳನ್ನು ನೀಡಿದೆ.

    ಇದುವರೆಗೆ ಕರ್ನಾಟಕ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಗೋವಾ, ಅಸ್ಸಾಂ, ಬಿಹಾರ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಒಡಿಶಾ, ಪುದುಚೆರಿ, ಸಿಕ್ಕಿಂ, ತ್ರಿಪುರ, ಜಮ್ಮು-ಕಾಶ್ಮೀರ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್​, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳು ಆಯ್ಕೆ 1 ಆರಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಉಳಿದ ರಾಜ್ಯಗಳು ಇನ್ನಷ್ಟೇ ಆಯ್ಕೆ ದೃಢಪಡಿಸಬೇಕಿದೆ.

    ಜಿಎಸ್​ಟಿ ಪಾಲಿನ ಅಂದಾಜು 97,000 ಕೋಟಿ ರೂ. ಕೊರತೆ ನೀಗಿಸಿಕೊಳ್ಳಲು ಹಣಕಾಸು ಇಲಾಖೆ ಸಂಯೋಜಿತ ವಿಶೇಷ ಗವಾಕ್ಷಿ ಮೂಲಕ ರಾಜ್ಯಗಳು ಬ್ಯಾಂಕ್​ ಸಾಲ ತೆಗೆದುಕೊಳ್ಳುವುದು ಆಯ್ಕೆ 1. ಇನ್ನು ಜಿಎಸ್​ಟಿ ಪರಿಹಾರದ ಪೂರ್ತಿ ಮೊತ್ತ, ಕೋವಿಡ್​ ಪರಿಹಾರವೂ ಸೇರಿದ 2.35 ಲಕ್ಷ ಕೋಟಿ ರೂಪಾಯಿಯನ್ನು ರಾಜ್ಯಗಳೇ ಸಾಲ ವ್ಯವಸ್ಥೆ ಮಾಡಿಕೊಳ್ಳುವುದು ಆಯ್ಕೆ 2. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts