More

    ಇಲ್ಲಿ ಶಾಲೆಗೆ ಹೋಗಬೇಕಂದ್ರೆ ವಿದ್ಯಾರ್ಥಿಗಳು ಪ್ಯಾಂಟ್‌ ಕಳಚಲೇಬೇಕು!

    ರಾಯಚೂರು: ಶಾಲೆಗೆ ಹೋಗುವ ಮಕ್ಕಳು ಇಲ್ಲಿ ಹರಸಾಹಸವೇ ಮಾಡಬೇಕು. ಪ್ರತಿದಿನ ಹಳ್ಳ ದಾಟಿ ಹೋಗುವ ಇವರ ಗೋಳು ಕೇಳೋರಿಲ್ಲ.

    ಪ್ಯಾಂಟ್ ಕಳಚಿ ಅರೆಬೆತ್ತಲೆಯಾಗಿ ಹಳ್ಳ ದಾಟಿ ಶಾಲೆಗಳಿಗೆ ತೆರಳುವ ದುಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದ್ದು, ಶಿಕ್ಷಣ ಪಡೆಯಲು ಹೋಗುವ ವಿದ್ಯಾರ್ಥಿಗಳು ಪಡುವ ಪಾಡು ನೋಡಿದರೆ ಎಂತಹವರ ಮನಕಲಕುವಂತಿದೆ.

    ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿ ಪ್ರತಿದಿನ ಕಂಡುಬರುವ ದೃಶ್ಯವಿದು. ದೇವರಗುಡಿ ಗ್ರಾಮದಿಂದ ಸಿಂಧನೂರು ಪಟ್ಟಣಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಈ ಹಳ್ಳವನ್ನೂ ದಾಟಿಗೆ ಶಾಲೆ-ಕಾಲೇಜುಗಳಿಗೆ ತೆರಳಬೇಕು.

    ಕೈಯಲ್ಲಿ ಬ್ಯಾಗ್​,ಚಪ್ಪಲಿ ಹಾಗೂ ಧರಿಸಿದ್ದ ಪ್ಯಾಂಟ್​​ ಅನ್ನೇ ಕಳಚಿ ತಲೆಮೇಲೆ ಹೊತ್ತು ಹಳ್ಳದಾಟಿ ಶಾಲೆಗೆ ಹೋಗುತ್ತಿದ್ದಾರೆ. ರಸ್ತೆ ಸಂಪರ್ಕ ಇಲ್ಲದಿರುವುದರಿಂದಲೇ ಹಲವರು ಶಾಲೆಯಿಂದ ದೂರ ಉಳಿದಿದ್ದಾರೆ ಎಂದು ಸಿಂಧನೂರು ಶಾಸಕರ ವಿರುದ್ಧ ದೇವರಗುಡಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಈವರೆಗೆ 200 ಕೋಟಿಗೂ ಅಧಿಕ​ ಡೋಸ್​ ಕೋವಿಡ್​ ಲಸಿಕೆ ನೀಡಿಕೆ: ಮತ್ತೆ ಮೈಲಿಗಲ್ಲು ಸಾಧಿಸಿದ ಭಾರತ

    ಉಪರಾಷ್ಟ್ರಪತಿ ಚುನಾವಣೆ: ವಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts