More

    ಪುತ್ತೂರು ಪೇಟೆ ಸವಾರಿಯಿಲ್ಲದೆ ಜಾತ್ರೆ

    ಪುತ್ತೂರು: ಲಾಕ್‌ಡೌನ್‌ನಿಂದಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ತಂತ್ರಿ, ಅರ್ಚಕರು, ಸೀಮಿತ ಸಿಬ್ಬಂದಿಯಿಂದ ಭಕ್ತರಿಲ್ಲದೆ ನಡೆಯುತ್ತಿದೆ.

    ಶುಕ್ರವಾರ ಸಂಜೆ ಒಳಾಂಗಣ ಉತ್ಸವದಲ್ಲಿ ಪೇಟೆ ಸವಾರಿಯ ಕಟ್ಟೆಪೂಜೆಗಳನ್ನು ದೇವಳದ ವಸಂತ ಕಟ್ಟೆಪೂಜೆಯಲ್ಲೇ ನೆರವೇರಿಸಲಾಯಿತು. ದೇವಳದಲ್ಲಿ ನಡೆಯುವ ಕಟ್ಟೆ ಪೂಜೆ ಸಮಯಕ್ಕೆ ಆಯಾಯ ಮನೆಗಳ ಮುಂದಿರುವ ಅಥವಾ ಸಾರ್ವಜನಿಕ ಕಟ್ಟೆಯಲ್ಲೇ ಸಂಜೆ ದೀಪಾರಾಧನೆ ನಡೆಯಿತು.

    ಜಾತ್ರೆ ಸಂದರ್ಭ ಪ್ರತಿದಿನ ಸಂಜೆ ದೇವರ ಉತ್ಸವದ ಬಳಿಕ ದೇವಳದ ಹೊರಾಂಗಣದಲ್ಲಿರುವ ಖಂಡನಾಯಕನ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆದು ಪೇಟೆ ಸವಾರಿ ನಡೆಯುವುದು ಸಂಪ್ರದಾಯ. ಪ್ರತಿ ದಿನ ಸುಮಾರು 13ರಿಂದ 14 ಕಟ್ಟೆಗಳಲ್ಲಿ ದೇವರು ಪೂಜೆ ಸ್ವೀಕರಿಸುತ್ತಾರೆ. ಈ ಬಾರಿ ಉತ್ಸವಗಳು ಒಳಾಂಗಣಕ್ಕೆ ಸೀಮಿತವಾಗಿದ್ದು, ಹೊರಾಂಗಣದಲ್ಲಿರುವ ಖಂಡನಾಯಕನ ಕಟ್ಟೆಯಲ್ಲಿ ಜಾತ್ರೆ ಸಂದರ್ಭ ಪ್ರತಿದಿನ ನಡೆಯುವ ಕಟ್ಟೆಪೂಜೆ ಸೇವೆಗೂ ಅವಕಾಶವಿಲ್ಲ. ಒಂದೊಂದು ಪೇಟೆ ಸವಾರಿ ದಿನ ನಿಗದಿಯಾಗಿರುವ ಕಟ್ಟೆಗಳ ಮುಂದೆ ಕಟ್ಟೆಪೂಜೆ ಸೇವಾಕರ್ತರು ಸಂಜೆ 7.30ಕ್ಕೆ ಮನೆ ಬಳಿಯ ಕಟ್ಟೆಗಳಲ್ಲಿ ದೀಪ ಬೆಳಗಿಸಿ ಪ್ರಾರ್ಥಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts