More

    ಇದು ಕಿಕ್ಕಿಳಿಸೋ ವಿಷಯ: ರಾಷ್ಟ್ರೀಯ-ರಾಜ್ಯ ಹೆದ್ದಾರಿ ಬಳಿ ಮದ್ಯದಂಗಡಿಗೆ ಪರವಾನಗಿ ಕೊಡಬೇಡಿ ಎಂದ ಸುಪ್ರೀಂ ಕೋರ್ಟ್​

    ನವದೆಹಲಿ: ಇದು ಮದ್ಯಪ್ರಿಯರಿಗೆ ಮತ್ತು ಮದ್ಯದ ವ್ಯಾಪಾರಿಗಳಿಗೆ ಕಿಕ್​ ಇಳಿಸುವ ವಿಷಯ ಎಂದರೂ ತಪ್ಪೇನಲ್ಲ. ಏಕೆಂದರೆ, ಪ್ರಯಾಣದ ವೇಳೆ ದಾರಿ ಮಧ್ಯೆ ಮದ್ಯಪಾನ ಮಾಡುವ ಹಾಗೂ ಪ್ರಯಾಣಿಕರನ್ನೇ ಗುರಿಯಾಗಿಸಿ ಮದ್ಯದ ವ್ಯಾಪಾರ ಗಿಟ್ಟಿಸಿಕೊಳ್ಳುವುದನ್ನು ತಡೆಯಲು ಮಹತ್ವದ ನಿರ್ದೇಶನವೊಂದು ಹೊರಬಿದ್ದಿದೆ.

    ಸುಪ್ರೀಂಕೋರ್ಟ್​ ಇಂಥದ್ದೊಂದು ನಿರ್ದೇಶನ ನೀಡಿದ್ದು, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬಳಿ ಇನ್ನುಮುಂದೆ ಹೊಸದಾಗಿ ತಲೆ ಎತ್ತಲಿರುವ ಮದ್ಯದ ಅಂಗಡಿಗಳಿಗೆ ಕಡಿವಾಣ ಬೀಳಲಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್​ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನಿರ್ದೇಶನವೊಂದನ್ನು ನೀಡಿದೆ.

    ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡುವುದನ್ನು ನಿಲ್ಲಿಸಿ ಎಂದು ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಎಲ್ಲ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ನೀಡಿದೆ. ಒಂದು ವೇಳೆ ಸ್ಥಳೀಯಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ 20 ಸಾವಿರಕ್ಕಿಂತ ಜನಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ ಈಗಿರುವ 500 ಮೀಟರ್​ ಅಂತರವನ್ನು 220 ಮೀಟರ್​ ಅಂತರಕ್ಕಿಳಿಸಿ ಪರವಾನಗಿ ನೀಡಬಹುದು ಎಂದೂ ಹೇಳಿದೆ.

    ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿ ಮದ್ಯದಂಗಡಿ ನಡೆಸದಂತೆ ನಿಷೇಧಿಸಿ 2016ರ ಡಿಸೆಂಬರ್​ನಲ್ಲೇ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಲ್ಲದೆ, ಹೆದ್ದಾರಿ ಬದಿಯಲ್ಲಿ ಮದ್ಯದ ಕುರಿತ ಜಾಹೀರಾತು ಕಾಣಿಸಬಾರದು ಎಂದೂ ಹೇಳಿತ್ತು. ಆದರೆ ಈಗಾಗಲೇ ಪರವಾನಗಿ ಹೊಂದಿರುವ ಮದ್ಯದಂಗಡಿಗಳು ಅವುಗಳ ಅವಧಿ ಇರುವವರೆಗೆ ಕಾರ್ಯನಿರ್ವಹಿಸಲು ಅವಕಾಶ ಇದೆ. (ಏಜೆನ್ಸೀಸ್)

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ಕೋಳಿತ್ಯಾಜ್ಯದಿಂದ ತಯಾರಿತ ಈ ಬಯೋಡೀಸೆಲ್​ ಕೊಡುತ್ತೆ 38 ಕಿ.ಮೀ. ಮೈಲೇಜ್: ಸಂಶೋಧಕನಿಗೆ ಸಿಕ್ಕಿತು ಪೇಟೆಂಟ್​

    ಸಿಎಂ ಬಿಎಸ್​ವೈ ಕಡೆಯಿಂದ ಕೊಡಲಾದ ಲಕೋಟೆ​ಯಲ್ಲೇನಿತ್ತು?; ಸ್ವಾಮೀಜಿಯೊಬ್ಬರಿಂದ ಸ್ಪಷ್ಟನೆ ಹೊರಬಿತ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts