More

    ಕಾನೂನಿಗೆ ಅಗೌರವ ತೋರಿದರೆ ಅನುಕಂಪ ಇಲ್ಲ : ಅರ್ಜಿ ರದ್ದುಗೊಳಿಸಲು ಹೈಕೋರ್ಟ್ ನಕಾರ

    ಬೆಂಗಳೂರು: ಜಾಮೀನು ಆದೇಶವನ್ನು ಹರಿದು ಬಿಸಾಡಿ, ನ್ಯಾಯಾಧೀಶರನ್ನು ನಿಂದಿಸಿದ ಪೊಲೀಸ್ ಅಧಿಕಾರಿಯ ವಿರುದ್ಧದ ಕಾನೂನು ಪ್ರಕ್ರಿಯೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

    ಕರ್ತವ್ಯ ನಿರ್ವಹಿಸುವಾಗ ಅಪರಾಧ ಎಸಗಿರುವುದರಿಂದ ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ ಅಡಿ ಸೂಕ್ತ ಅನುಮತಿ ಪಡೆಯದೆ ಮ್ಯಾಜಿಸ್ಟ್ರೇಟ್ ಸಂಜ್ಞೇಯ ಪರಿಗಣಿಸಲಾಗದು ಎಂದಿರುವ ಪೊಲೀಸ್ ಅಧಿಕಾರಿ ವಿ. ಹರೀಶ್ ವಾದವನ್ನು ನ್ಯಾಯಮೂರ್ತಿ ಕೆ. ನಟರಾಜನ್ ತಿರಸ್ಕರಿಸಿದ್ದಾರೆ.

    ಕೆಲ ಕಾಲ ವಾದ -ಪ್ರತಿವಾದ ಆಲಿಸಿದ ನ್ಯಾಯಾಲಯ, ಜಾಮೀನು ಆದೇಶ ಪ್ರತಿ ಹರಿದು ಎಸೆದಿರುವುದು, ನ್ಯಾಯಾಧೀಶರನ್ನು ಕೆಟ್ಟ ಶಬ್ದಗಳಿಂದ ನಿಂದಿಸಿರುವುದು ಜತೆಗೆ, ‘ನನ್ನ ಠಾಣೆಯಲ್ಲಿ ತಾನೇ ನ್ಯಾಯಾಧೀಶನಾಗಿದ್ದು, ನಾನೇ ಪ್ರಕರಣವನ್ನು ನಿರ್ಧರಿಸುತ್ತೇನೆ. ಜಾಮೀನು ಆದೇಶ ತನ್ನ ಕೂದಲಿಗೆ ಸಮ’ಎಂದು ಹೇಳಿಕೆ ನೀಡಿರುವುದಕ್ಕೂ ಹಾಗೂ ಅಧಿಕೃತ ಕರ್ತವ್ಯ ನಿರ್ವಹಣೆಗೂ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ. ಇಂಥ ಅಧಿಕಾರಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೋರ್ಟ್ ಹೇಳಿದೆ.

    ಏನಿದು ಪ್ರಕರಣ?
    ಸಬ್ ಇನ್‌ಸ್ಪೆಕ್ಟರ್ ವಿ. ಹರೀಶ್ ದೂರುದಾರರ ಪರವಾಗಿ ನ್ಯಾಯಾಲಯ ಜಾರಿ ಮಾಡಿದ್ದ ನಿರೀಕ್ಷಣಾ ಜಾಮೀನು ಆದೇಶ ಪ್ರತಿಯನ್ನು ಅವರ ಪರ ವಕೀಲರು ನೀಡಿದ ವೇಳೆ ಹರಿದು ಹಾಕಿದ್ದರು. ಬಳಿಕ ಜಾಮೀನು ಮಂಜೂರು ಮಾಡಿದ್ದ ಸತ್ರ ನ್ಯಾಯಾಲಯದ ನ್ಯಾಯಾಧೀಶರನ್ನು ನಿಂದಿಸಿ, ದೂರುದಾರರ ವಿರುದ್ಧ ರೌಡಿ ಶೀಟ್ ತೆಗೆಯುವುದಲ್ಲದೇ ಎನ್‌ಕೌಂಟರ್ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದರು.

    ದೂರುದಾರರ ಸ್ವಯಂ ಹೇಳಿಕೆ ದಾಖಲಿಸಿಕೊಂಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹರೀಶ್‌ಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹರೀಶ್ ಹೈಕೋರ್ಟ್ ಮೇಟ್ಟಿಲೇರಿದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts