More

    ಮಾಸಾಶನ ಅರ್ಜಿ ಸಲ್ಲಿಸಲು ಕಲಾವಿದರ ನಿರಾಸಕ್ತಿ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಯಕ್ಷಗಾನ ಕಲಾವಿದರು ಮಾಸಾಶನ ಪಡೆಯುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಲು ನಿರಾಸಕ್ತಿ ತೋರುತ್ತಿರುವುದರಿಂದ ಯಕ್ಷಗಾನ ಅಕಾಡೆಮಿ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಮಾಶಾಸನ ವಿಳಂಬವಾಗದೆ ಸಿಗಬೇಕು ಎನ್ನುವ ಉದ್ದೇಶದಲ್ಲಿ ಆಯ್ಕೆ ಸಮಿತಿ ಮೂರು ತಿಂಗಳಿಗೊಮ್ಮೆ ಆಯಾ ಜಿಲ್ಲೆಯಲ್ಲಿ ಸಭೆ ನಡೆಸಿ, ಕಲಾವಿದರಿಗೆ ನೆರವಾಗಬೇಕೆನ್ನುವ ಸದುದ್ದೇಶಕ್ಕೆ ಇದರಿಂದ ವೇಗ ಸಿಕ್ಕಿಲ್ಲ.

    ಯಕ್ಷಗಾನ ಅಕಾಡೆಮಿ 58 ವರ್ಷದ ಮೀರಿದ ಯಕ್ಷಗಾನ ವೃತ್ತಿ ಕಲಾವಿದರಿಗೆ ಕಿಂಚಿತ್ತಾದರೂ ಸಹಕಾರ ಆಗಬೇಕು ಎನ್ನುವ ಉದ್ದೇಶದಿಂದ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡುವ ನಿರ್ಧಾರಕ್ಕೆ ಸರ್ಕಾರ ಸಮ್ಮಿತಿಸಿದ್ದು, ಅರ್ಜಿ ವಿಲೇವಾರಿ, ಕಲಾವಿದರ ಆಯ್ಕೆ ಹಾಗೂ ಸಹಾಯ ಧನ ವಿತರಣೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದೆ. ಆದರೆ ಹೆಚ್ಚಿನ ಕಲಾವಿದರು ಅರ್ಜಿ ಸಲ್ಲಿಸಲು ಮೀನಮೇಷ ಎಣಿಸುತ್ತಿದ್ದಾರೆ. ಕಲಾವಿದರಿಗೆ 2 ಸಾವಿರ ರೂ. ಮಾಸಾಶನ ನೀಡಲು ಸರ್ಕಾರ ಸಿದ್ಧವಾಗಿದ್ದರೂ ಕಲಾವಿದರ ನಿರಾಸಕ್ತಿಯೇ ಮುಳುವಾಗುತ್ತಿದೆ.

    ಒಟ್ಟು 35 ಮೇಳಗಳು: ಉಡುಪಿ ಜಿಲ್ಲೆಯಲ್ಲಿ ಒಟ್ಟು 35 ಯಕ್ಷಗಾನ ಮೇಳಗಳಿದ್ದು, 1500 ವೃತ್ತಿ ಕಲಾವಿದರು ಇದ್ದಾರೆ. 58 ವರ್ಷ ಪೂರೈಸಿದ ವೃತ್ತಿ ಕಲಾವಿದರು ಮಾಸಾಶನಕ್ಕೆ ಅರ್ಜಿ ಹಾಕಲು ಅರ್ಹರು. ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ ವರ್ಷಕ್ಕೆ 24 ಸಾವಿರ ರೂ. ಮಾಸಾಶನ ಸರ್ಕಾರ ನೀಡಲಿದ್ದು, ಕಲಾವಿದ ಮೃತಪಟ್ಟಲ್ಲಿ ಅರ್ಧ ಹಣ ಕಲಾವಿದನ ಪತ್ನಿಗೆ ನೀಡಲಾಗುತ್ತದೆ.

    ಮಾಸಾಶನ ಸ್ಕೀಂ ಯಶಸ್ವಿಯಾದರೆ ಇಡೀ ಯಕ್ಷಗಾನ ವೃತ್ತಿ ಕಲಾವಿದರ ದಾಖಲೆಯಾಗಿ ಉಳಿಯುತ್ತಿತ್ತು. ಯಕ್ಷಗಾನ ಕಲಾವಿದರ ದಾಖಲೀಕರಣವಾದರೆ ಯಾರು ವೃತ್ತಿ ಕಲಾವಿದರು, ಹವ್ಯಾಸಿ ಕಲಾವಿದರು, ಪ್ರಸಕ್ತ ಯಾರು ಮೇಳದಲ್ಲಿ ಇದ್ದಾರೆ, ಯಾವ ಮೇಳದಲ್ಲಿ ಎಷ್ಟು ವರ್ಷ ಸೇವೆ ಮಾಡಿದ್ದಾರೆ ಎನ್ನುವ ಸಮಗ್ರ ಲಿಸ್ಟ್ ಸಿಗುತ್ತಿತ್ತು. ಜಿಲ್ಲೆಯ 35 ಮೇಳದ 850 ಕಲಾವಿದರಲ್ಲಿ ಐದು ವರ್ಷಕ್ಕಿಂತ ಹೆಚ್ಚು ಮೇಳದಲ್ಲಿದ್ದವರ ಡೇಟಾವನ್ನು ಕಲಾರಂಗ ಸಿದ್ಧಪಡಿಸಿದ್ದು, ಅದರಲ್ಲಿ ಫುಲ್ ಪೇಮೆಂಟ್ ಪಡೆಯುವ ಕಲಾವಿದರು 425 ಇದ್ದಾರೆ. ಉಳಿದ ಕಲಾವಿದರ ಮಾಹಿತಿ ನೀಡಿಲ್ಲ.
    ಮುರಲೀ ಕಡೇಕಾರ್, ಸಂಚಾಲಕ, ಉಡುಪಿ ಯಕ್ಷಗಾನ ಕಲಾರಂಗ

    ಆನ್‌ಲೈನ್ ವ್ಯವಸ್ಥೆಯಿಲ್ಲದಿದ್ದಲ್ಲಿ ಕಲಾವಿದರು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಜಿ ಪಡೆದು, ಕೇಳಿದ ದಾಖಲೆ ಜತೆ ಅರ್ಜಿ ಸಲ್ಲಿಸಬೇಕು. ಅಕಾಡೆಮಿ ಆಯ್ಕೆ ಸಮಿತಿ ಮಾಸಾಶನ ಕೊಡುವ ಬಗ್ಗೆ ನಿರ್ಣಯ ಮಾಡುತ್ತದೆ. ಆಯ್ಕೆ ಸಮಿತಿ ಸಭೆ ನಡೆಸುವುದು ತಡವಾಗುವುದರಿಂದ ಮಾಸಾಶನ ಅರ್ಜಿ ವಿಲೇ ನಿಧಾನವಾಗುತ್ತಿದ್ದು, ನಿವಾರಣೆಗಾಗಿ ಆಯಾ ಜಿಲ್ಲೆಯಲ್ಲಿ ಆಯ್ಕೆ ಸಮಿತಿ ಸಭೆ ಮೂರು ತಿಂಗಳಿಗೊಮ್ಮೆ ನಡೆಸಲು ನಿರ್ಧರಿಸಲಾಗಿದೆ. ಕಲಾವಿದರು ಇದರ ಪ್ರಯೋಜನ ಪಡೆಯಬೇಕು.
    ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷ, ಯಕ್ಷಗಾನ ಬಯಲಾಟ ಅಕಾಡೆಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts