More

    ಯಾವುದೇ ಅತಿಕ್ರಮಣ ನಿರ್ಮಾಣ ಮಾಡಿಲ್ಲ ಎಂದ ಕಂಗನಾ

    ಸೋಮವಾರ ಸಂಜೆಯಷ್ಟೇ ಕಂಗನಾ ಅವರು ತಮ್ಮ ಕಚೇರಿಯನ್ನು ಅತಿಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದ ಬೃಹನ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಈಗ ಕಂಗನಾ ಅವರ ಕಚೇರಿಯನ್ನು ಪಾರ್ಶ್ವವಾಗಿ ಒಡೆದಿದ್ದಾರೆ.

    ಇದನ್ನೂ ಓದಿ: ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’

    ಈ ವಿಷಯವಾಗಿ, ಬೃಹನ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತೀಚೆಗಷ್ಟೇ ಕಂಗನಾ ಅವರ ಕಚೇರಿಯ ಎದುರಿಗೆ ನೋಟೀಸ್​ ಅಂಟಿಸಿ ಬಂದಿದ್ದರು. ಈ ನೋಟೀಸ್​ನಲ್ಲಿ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿತ್ತು. ಅಷ್ಟೇ ಅಲ್ಲ, 24 ಗಂಟೆಗಳಲ್ಲಿ ಈ ನೋಟೀಸ್​ಗೆ ಕಂಗನಾ ಅವರು 24 ಗಂಟೆಗಳಲ್ಲಿ ಉತ್ತರ ಕೊಡೆದಿದ್ದ ಪಕ್ಷದಲ್ಲಿ, ಅತಿಕ್ರಮವಾಗಿ ನಿರ್ಮಿಸಲಾದ ಭಾಗವನ್ನು ಒಡೆಯುವುದಾಗಿ ಈ ನೋಟೀಸ್​ನಲ್ಲಿ ಹೇಳಲಾಗಿತ್ತು.

    ಬೃಹತ್​ ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಣಯವನ್ನು ಖಂಡಿಸಿರುವ ಕಂಗನಾ, ತಮ್ಮ ಕನಸೊಂದನ್ನು ಅಧಿಕಾರಿಗಳು ನುಚ್ಚುನೂರು ಮಾಡುತ್ತಿರುವುದಾಗಿ ಆರೋಪಿಸಿದ್ದರು. ‘ನಾನು ಯಾವುದೇ ಅತಿಕ್ರಮ ನಿರ್ಮಾಣ ಮಾಡಿಲ್ಲ. ಪಾಲಿಕೆಯ ಅನುಮತಿ ಪಡೆದೇ ಕಚೇರಿ ನಿರ್ಮಿಸಿದ್ದೇನೆ. ಆದರೂ ಇಂದು ಅವರು ನನ್ನ ಕಚೇರಿಗೆ ರೇಡ್​ ಮಾಡಿದ್ದಾರೆ. ನಾಳೆ ನನ್ನ ಕನಸಿನ ಕಚೇರಿ ಒಡೆದರೂ ಆಶ್ಚರ್ಯವಿಲ್ಲ’ ಎಂದು ಹೇಳಿದ್ದರು.

    ಇದನ್ನೂ ಓದಿ: ಸಿನಿಪ್ರಿಯರಿಗೆ ಗುಡ್ ನ್ಯೂಸ್, ಚಿತ್ರಮಂದಿರ ಓಪನ್​ಗೆ ಡೇಟ್​ ಫಿಕ್ಸ್

    ಅದರ ನಡುವೆಯೇ ಇಂದು ಕಂಗನಾ ಅವರ ಕಚೇರಿಯಲ್ಲಿ ಎಲ್ಲೆಲ್ಲಿ ಅತಿಕ್ರಮವಾಗಿ ನಿರ್ಮಾಣ ಮಾಡಲಾಗಿದೆಯೋ, ಅಲ್ಲೆಲ್ಲಾ ಒಡೆಯಲಾಗಿದೆ. ಕಟ್ಟಡ ಒಡೆಯುವುದಕ್ಕೆ ಬಂದಿರುವವರನ್ನು ಬಾಬರನ ಸೈನ್ಯ ಎಂದು ಕರೆದಿರುವ ಕಂಗನಾ, ‘ನನ್ನ ಕಚೇರಿಯಲ್ಲಿ ಯಾವುದೇ ಅತಿಕ್ರಮ ನಿರ್ಮಾಣವಾಗಿಲ್ಲ. ಅಷ್ಟೇ ಅಲ್ಲ, ಕೋವಿಂಡ್​ನಿಂದಾಗಿ ಸೆಪ್ಟೆಂಬರ್​ 30ರವರೆಗೆ ಯಾವುದೇ ಡೆಮಾಲಿಶನ್​ ಮಾಡಬಾರದು ಎಂದು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಹೀಗಿರುವಾಗ ನನ್ನ ಕಚೇರಿ ಒಡೆದಿದ್ದು ಯಾಕೆ’ ಎಂದು ಅವರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ಘಟನೆಯಿಂದ ಮುಂಬೈ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗಿದೆ ಎಂಬುದು ಇನ್ನೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

    ಕಂಗನಾ ಕಚೇರಿ ನೆಲಸಮ ವಿರುದ್ಧ ನೆಟ್ಟಿಗರ ಆಕ್ರೋಶ: ಟ್ವಿಟರ್​ನಲ್ಲಿ ಟ್ರೆಂಡ್​ ಆದ ಹ್ಯಾಶ್​ಟ್ಯಾಗ್​ಗಳಿವು…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts