More

    ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಿಗೆ ನಾಳೆ ಮಹಿಳೆಯರಿಗೆ ಉಚಿತ ಪ್ರವೇಶ; ಯಾವುದೇ ಶುಲ್ಕವಿರುವುದಿಲ್ಲ!

    ನವದೆಹಲಿ: ವಿಶ್ವವಿಖ್ಯಾತ ಪ್ರವಾಸಿ ತಾಣ ಆಗ್ರಾದ ತಾಜ್​ಮಹಲ್​ ಸೇರಿ ದೇಶದ ಎಲ್ಲ ಸಂರಕ್ಷಿತ ಸ್ಮಾರಕಗಳಿಗೆ ನಾಳೆ ಉಚಿತ ಪ್ರವೇಶ ದೊರೆಯಲಿದೆ ಎಂದು ಭಾರತ ಪುರಾತತ್ವ ಸಮೀಕ್ಷಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ನಾಳೆ (ಮಾ.8 ಭಾನುವಾರ) ಅಂತಾರಾಷ್ಟ್ರೀಯ ದಿನಾಚರಣೆ ಅಂಗವಾಗಿ ಕೇಂದ್ರ ಸಂರಕ್ಷಿತ ಸ್ಮಾರಕಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ ಇರಲಿದೆ. ಈ ಬಗ್ಗೆ ಇಲಾಖೆ ದೆಹಲಿ ಮುಖ್ಯ ಕಚೇರಿಯಿಂದ ಸುತ್ತೋಲೆ ಹೊರಡಿಸಿದೆ.

    “ಭಾರತದ ಸಂಸ್ಕೃತಿಯಲ್ಲಿ ಮಹಿಳೆಯರನ್ನು ದೇವಿ ಎಂದು ಪೂಜಿಸಲಾಗುತ್ತದೆ. ಇದು ನಮ್ಮ ದೇಶ ಮಹಿಳೆಗೆ ನೀಡುವ ಗೌರವ. ವಿಶ್ವಾದ್ಯಂತ ಮಹಿಳಾ ದಿನಾಚರಣೆ ಆಯೋಜಿಸುತ್ತಿರುವ ಮಾ.8ರಂದು ದೇಶದ ಎಲ್ಲ ಸ್ಮಾರಕಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ ಇರಲಿದೆ” ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶದ ಸ್ಮಾರಕಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ ಕಲ್ಪಿಸುವುದು ನಾವು ಮಾತೆಯರಿಗೆ ಸಲ್ಲಿಸುವ ಗೌರವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ, ತಾಜ್ ಮಹಲ್, ಕೊನಾರ್ಕ್​ನ ಸೂರ್ಯ ದೇವಾಲಯ, ಮಾಮಲ್ಲಾಪುರಂ, ಎಲ್ಲೋರಾ ಗುಹೆಗಳು, ಖಜುರಾಹೊ ಸ್ಮಾರಕಗಳು ಮತ್ತು ಅಜಂತಾ ಗುಹೆಗಳು ಸೇರಿ ಎಲ್ಲ ಸಂರಕ್ಷಿತಾ ಸ್ಮಾರಕಗಳನ್ನು ವೀಕ್ಷಿಸಲು ಮಹಿಳೆಯರಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts