More

    ನಮ್ಮನ್ನು ಬೆದರಿಸುವ ಹಕ್ಕು ಯಾವುದೇ ದೇಶಕ್ಕಿಲ್ಲ: ಪರೋಕ್ಷವಾಗಿ ಭಾರತಕ್ಕೆ ಹೇಳಿದ ಮಾಲ್ಡೀವ್ಸ್​ ಅಧ್ಯಕ್ಷ ಮುಯಿಝು

    ನವದೆಹಲಿ: ನಮ್ಮ ರಾಷ್ಟ್ರವನ್ನು “ಬೆದರಿಸುವ” ಹಕ್ಕು ಯಾವುದೇ ದೇಶಕ್ಕೆ ಇಲ್ಲ….

    ತಮ್ಮ ಐದು ದಿನಗಳ ಚೀನಾ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರು ಶನಿವಾರ ಈ ಹೇಳಿಕೆ ನೀಡಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಲಕ್ಷದ್ವೀಪ ಭೇಟಿಯ ವಿರುದ್ಧ ಮಾಲ್ಡೀವ್ಸ್ ರಾಜಕಾರಣಿಗಳು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ವಿವಾದದ ನಡುವೆಯೇ ಮುಯಿಝು ಅವರು ಹೇಳಿಕೆ ನೀಡಿದ್ದಾರೆ.

    “ನಾವು ಚಿಕ್ಕವರಾಗಿರಬಹುದು, ಆದರೆ ಅದು ನಮ್ಮನ್ನು ಬೆದರಿಸಲು ನಿಮಗೆ ಪರವಾನಗಿ ನೀಡುವುದಿಲ್ಲ” ಎಂದು ಮುಯಿಝು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಪ್ರವಾಸದ ಬಗ್ಗೆ ಸಚಿವರು ಸೇರಿದಂತೆ ಮಾಲ್ಡೀವ್ಸ್‌ನ ಕೆಲವು ರಾಜಕಾರಣಿಗಳು ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಬಿಕ್ಕಟ್ಟು ಉಂಟಾಗಿದೆ. ಪ್ರವಾಸಿಗರನ್ನು ಮಾಲ್ಡೀವ್ಸ್​ ದ್ವೀಪ ದೇಶದಿಂದ ದೂರವಿಡುವ ಪ್ರಯತ್ನವಾಗಿ ಮೋದಿಯವರು ಲಕ್ಷದ್ವೀಪ ಭೇಟಿ ಕೈಗೊಂಡಿದ್ದಾರೆ ಎಂಬಂರ್ಥ ರೀತಿಯ ಹೇಳಿಕೆಗಳನ್ನು ಮಾಲ್ಡೀವ್ಸ್​ನ ಕೆಲವರು ಸಚಿವರು ನೀಡಿದ್ದರು.

    ಈ ಅವಹೇಳನಕಾರಿ ಹೇಳಿಕೆಗಳ ಕುರಿತು ಭಾರತವು ಮಾಲ್ಡೀವ್ಸ್‌ ಜತೆ ಪ್ರಸ್ತಾಪಿಸಿದ ನಂತರ, ಜನವರಿ 7 ರಂದು ತಮ್ಮ ಮೂವರು ಮಂತ್ರಿಗಳನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿತ್ತು.

    ಮಾಲ್ಡೀವ್ಸ್‌ ಸಚಿವರ ಅವಹೇಳನಕಾರಿ ಹೇಳಿಕೆಗಳು ಭಾರತೀಯರನ್ನು ಕೆರಳಿಸಿದ್ದವು. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್​ಗೆ ಪ್ರವಾಸ ಕೈಗೊಳ್ಳುವುದನ್ನು ರದ್ದು ಮಾಡುವ ಆಂದೋಲನವೇ ನಡೆಯಿತು. ಆನ್‌ಲೈನ್ ಟ್ರಾವೆಲ್ ಕಂಪನಿಯಾದ ಇಸ್​ಮೈಟ್ರಿಸ್​ ಸಹ ಮಾಲ್ಡೀವ್ಸ್‌ಗೆ ಫ್ಲೈಟ್ ಬುಕಿಂಗ್ ಸ್ಥಗಿತಗೊಳಿಸಿತು.

    ಚೀನಾ ಪ್ರವಾಸ ಕೈಗೊಂಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರು, ತಮ್ಮ ದ್ವೀಪ ರಾಷ್ಟ್ರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವ ಪ್ರಯತ್ನಗಳನ್ನು “ತೀವ್ರಗೊಳಿಸುವಂತೆ” ದೇಶಕ್ಕೆ ಮನವಿ ಮಾಡಿದ್ದರು.

    ಮಾಲ್ಡೀವ್ಸ್ ಅಧ್ಯಕ್ಷರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ “ಇಂಡಿಯಾ ಔಟ್” ಅಭಿಯಾನದ ಹಿನ್ನೆಲೆಯಲ್ಲಿ ಜಯ ಗಳಿಸಿದ್ದಾರೆ, ಚುನಾವಣೆ ಪ್ರಣಾಳಿಕೆಯಲ್ಲಿ ಅವರು ಭಾರತೀಯ ಸೈನಿಕರನ್ನು ದ್ವೀಪಸಮೂಹದಿಂದ ಹೊರಹಾಕುವುದಾಗಿ ಭರವಸೆ ನೀಡಿದ್ದರು.

    ಕಳೆದ ವರ್ಷ ಪ್ರತಿ ಷೇರಿಗೆ ಶೇಕಡಾ 500 ಲಾಭಾಂಶ ನೀಡಿದ ಕಂಪನಿ ಮತ್ತೆ ಡಿವಿಡೆಂಡ್​ ನೀಡಲು ಸಜ್ಜು

    ದೆಹಲಿಯನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ರಾಜ್ಯದ ರಾಜಧಾನಿ: ಬೆಂಗಳೂರು ಈಗ ಕಾರುಗಳ ನಗರಿ

    ಗೋಧಿ, ಅಕ್ಕಿ, ಸಕ್ಕರೆ ಬೆಲೆ ಹೆಚ್ಚಳ ಸದ್ಯಕ್ಕಿಲ್ಲ: ವಾಣಿಜ್ಯ ಸಚಿವ ಗೋಯಲ್​ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts