More

    ಎರಡನೇ ದಿನವೂ ಸನತ್ ಸುಳಿವಿಲ್ಲ

    ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ ಪಲ್ಕೆ ಜಲಪಾತದ ಗುಡ್ಡ ಜರಿದು ಮಣ್ಣಿನಡಿ ಸಿಲುಕಿ ಕಾಣೆಯಾಗಿರುವ ಉಜಿರೆಯ ಸನತ್(20) ಹುಡುಕಾಟ ಮಂಗಳವಾರವೂ ಮುಂದುವರಿಯಿತು.

    ಪೊಲೀಸ್ ಇಲಾಖೆ ವನ್ಯಜೀವಿ ವಿಭಾಗ, ಎನ್‌ಡಿಆರ್‌ಎಫ್, ಕಂದಾಯ ಇಲಾಖೆ, ಪಂಚಾಯಿತಿ, ವಿಪತ್ತು ನಿರ್ವಹಣಾ ತಂಡ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಸ್ಥಳೀಯರು ಬೆಳಗ್ಗಿನಿಂದಲೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
    ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸಂಸೆಯಿಂದ 5 ಕಿ.ಮೀ. ದೂರದಲ್ಲಿರುವ ಬಂಗಾರ ಪಲ್ಕೆ ಜಲಪಾತದಲ್ಲಿ 50 ಅಡಿಯಷ್ಟು ಮೇಲ್ಭಾಗದಿಂದ ನೀರು ಬೀಳುತ್ತದೆ.

    ಸೋಮವಾರ ಮಧ್ಯಾಹ್ನ ಎರಡರ ಸುಮಾರಿಗೆ ಸೌರಭ್, ಶರತ್, ಆದಿತ್ಯ ಅವರೊಂದಿಗೆ ಉಜಿರೆಯ ಕಾಶಿಬೆಟ್ಟು ನಿವಾಸಿ ಸನತ್ ಜಲಪಾತ ವೀಕ್ಷಿಸುತ್ತಿದ್ದಾಗ ಅವರ ಮೇಲೆ 50 ಅಡಿ ಎತ್ತರದಿಂದ 30 ಅಡಿ ಅಗಲದಷ್ಟು ಮಣ್ಣಿನೊಂದಿಗೆ ಬೃಹತ್ ಗಾತ್ರದ ಬಂಡೆ ಕಲ್ಲು, ಮರ ಕುಸಿದು ಬಿತ್ತು. ಸನತ್ ಜತೆಗಿದ್ದ ಮೂವರು ಅಪಾಯದಿಂದ ಪಾರಾದರು. ಆದರೆ ಸನತ್ ಇದರ ಕೆಳಗೆ ಸಿಲುಕಿ ಕಾಣೆಯಾಗಿದ್ದಾರೆ. ಕುಸಿತ ಪ್ರದೇಶದಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದ್ದು, ಮಣ್ಣು ಹಾಗೂ ಹಲವು ಮರಗಳು ಅಪಾಯ ಸ್ಥಿತಿಯಲ್ಲಿದೆೆ. ಇಲ್ಲಿನ ಕಾರ್ಯಾ ಚರಣೆ ವೀಕ್ಷಣೆಗೆ ತಂಡೋಪತಂಡವಾಗಿ ಜನ ಬರುತ್ತಿದ್ದು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಶಾಸಕ ಹರೀಶ್ ಪೂಂಜ ಸಾಯಂಕಾಲ ನಾಲ್ಕು ಗಂಟೆ ತನಕ ಕಾರ್ಯಾಚರಣೆ ಸ್ಥಳದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts