More

    ಬಿಎಸ್​ಎನ್​ಎಲ್​ 4ಜಿ ಅಪ್​ಗ್ರೇಡ್​ಗೆ ಚೀನಾ ಸಾಧನಗಳನ್ನು ಬಳಸದಿರಲು ಕೇಂದ್ರದ ನಿರ್ಧಾರ

    ನವದೆಹಲಿ: ಭಾರತ ಯೋಧರನ್ನು ಹತ್ಯೆಗೈದ ಚೀನಾದ ಹೆಡೆಮುರಿಕಟ್ಟಲು ದೇಶಾದ್ಯಂತ ಸ್ವದೇಶಿ ಅಭಿಯಾನ ಆರಂಭವಾಗಿದ್ದು, ಇದರ ಬೆನ್ನಲ್ಲೆ ಭಾರತ್​ ಸಂಚಾರ್​ ನಿಗಮ ನಿಯಮಿತ (ಬಿಎಸ್​ಎನ್​ಎಲ್​)ದ 4ಜಿ ಸಾಧನವನ್ನು ಅಪ್​ಗ್ರೇಡ್​ ಮಾಡಲು ಚೀನಾ ಸಾಧನಗಳನ್ನು ಬಳಸದಂತೆ ನಿರ್ಧರಿಸಿದೆ.

    ಈ ನಿಟ್ಟಿನಲ್ಲಿ ಟೆಂಡರ್​ ಪ್ರಕ್ರಿಯೆ ನಡೆಸಲು ಸರ್ಕಾರ ನಿರ್ಧಿಸಿದ್ದು, ಚೀನಾ ಸಂಸ್ಥೆಗಳ ಸಾಧನಗಳ ಮೇಲಿನ ಅವಲಂಬನೆಯನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳಿ ಎಂದು ಸರ್ಕಾರ ಖಾಸಗಿ ಆಪರೇಟರ್​ಗಳಿಗೆ ತಿಳಿಸಿದೆ. ಇದನ್ನೂ ಓದಿ: ಎರಡು ದಶಕ ಹಿಂದೆ ಸರಿದ ಚಿತ್ರರಂಗ: ನೂರು ಕೋಟಿ ಕನಸಿನ ಮಾತು!

    ಭಾರ್ತಿ ಏರ್​ಟೆಲ್​ ಮತ್ತು ವಡಾಫೋನ್​ ಐಡಿಯಾ ಕಂಪನಿಗಳು ಪ್ರಸ್ತುತ ಚೀನಾ ಮೂಲದ ಬಹುರಾಷ್ಟ್ರೀಯ ದೂರಸಂಪರ್ಕ ಉಪಕರಣಗಳ ಕಂಪನಿ ಹುವಾಯಿ ಕಂಪನಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಬಿಎಸ್​ಎನ್​ಎಲ್​ ಸಹ ಚೀನಾ ಮೂಲದ ಝಡ್​ಟಿಇ ಕಂಪನಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇವುಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಲು ಸರ್ಕಾರ ಹೆಜ್ಜೆ ಇಟ್ಟಿದೆ.

    ಭಾರತ ಮತ್ತು ಚೀನಾ ಗಡಿಯ ಲಡಾಖ್​ನಲ್ಲಿ ಉಂಟಾಗಿರುವ ಉದ್ವಿಘ್ನತೆಯಲ್ಲಿ ಚೀನಾ ಸೇನೆ ಭಾರತೀಯ 20 ಯೋಧರನ್ನು ಹತ್ಯೆ ಮಾಡಿದೆ. ಇದಕ್ಕೆ ಪ್ರತಿಕಾರವಾಗಿ ಭಾರತವು ಸಹ ಚೀನಾದ ಅಂದಾಜು 35 ಯೋಧರನ್ನು ಹೊಡೆದುರುಳಿಸಿದೆ. ಇದೀಗ ಗಡಿಯಲ್ಲಿ ಯುದ್ಧದ ವಾತಾವರಣ ಉಂಟಾಗಿದ್ದು, ಉಭಯ ದೇಶಗಳ ರಕ್ಷಣಾ ಸಂಬಂಧದಲ್ಲಿ ಸದ್ಯ ಬಿರುಕು ಬಿಟ್ಟಿದೆ. ಹೀಗಾಗಿ ನಮ್ಮ ಸೇನಾ ಯೋಧರನ್ನು ಹತ್ಯೆ ಮಾಡಿದ ಚೀನಾ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಸ್ವದೇಶಿ ಅಭಿಯಾನ ಆರಂಭವಾಗಿದೆ. (ಏಜೆನ್ಸೀಸ್​)

    ಆಲಿಯಾ ಭಟ್​ ವಿರುದ್ಧ ಟ್ವೀಟ್​ ಮೂಲಕ ಭಾರಿ ಕೋಪ ವ್ಯಕ್ತಪಡಿಸಿದ್ದರು ಸುಶಾಂತ್​ ಸಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts