More

    ಬಿಜೆಪಿ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ

    ಚಿತ್ರದುರ್ಗ : ದೇಶ ಮೊದಲೆಂಬ ಪಕ್ಷದ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಆಗಿಲ್ಲವೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಶಿವಯೋಗಿ ಸ್ವಾಮಿ ಹೇಳಿದರು. ನಗರದ ತಿರುಮಲ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ದಾವಣಗೆರೆ ವಿಭಾಗದ ದಾವಣಗೆರೆ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ವಿಷಯ ಪ್ರಮುಖರಿಗೆ ಏರ್ಪಡಿಸಿದ್ದ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿ,ಪಕ್ಷ ಅಸ್ತಿತ್ವಕ್ಕೆ ಬಂದು ಇಷ್ಟು ವರ್ಷಗಳಾದರೂ ಅದರ ಉದ್ದೇಶ, ಗುರಿಗಳು ಬೇರೆಯಾಗಿಲ್ಲ. ಬಿಜೆಪಿ ಎಂದರೆ ವಿಶಿಷ್ಟ,ಇದು ಯಾವತ್ತೂ ಕಾರ‌್ಯಕರ್ತರನ್ನು ಆಧರಿಸಿದ ಪಕ್ಷವೇ ಹೊರತು ನಾಯಕರನ್ನು ಅಲ್ಲ.

    ಹಣ ಪಡೆದು ಕೆಲಸ ಮಾಡುವವರು ವರ್ಕರ್‌ಗಳು, ಆದರೆ ಯಾವುದೇ ಅಧಿಕಾರ, ಹಣಕ್ಕಾಗಿ ಕೆಲಸ ಮಾಡದೇ ಸಂಘಟನೆಗೆ ಕೆಲಸ ಮಾಡುವಂಥವರು ಕಾರ‌್ಯಕರ್ತರು. ರಾಜಕಾರಣದಲ್ಲಿ ಪ್ರತಿಯೊಬ್ಬ ಕಾರ‌್ಯಕರ್ತನೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಮ್ಮ ಗುರಿ ಏನೆಂಬುದನ್ನು ಯಾವೊಬ್ಬ ಕಾರ‌್ಯಕರ್ತನು ಮರೆಯ ಬಾರದೆಂಬ ಕಾರಣಕ್ಕೆ ಹಿರಿಯರು ಪ್ರಶಿಕ್ಷಣ ವರ್ಗಗಳನ್ನು ನಿರಂತರ ನಡೆಸಿಕೊಂಡು ಬಂದಿದ್ದಾರೆ.

    ಸ್ವಾತಂತ್ರ್ಯಪೂರ್ವದಲ್ಲಿ ದೇಶ ಭಕ್ತರ ಪಾರ್ಟಿ ಎಂದು ಕರೆಸಿಕೊಂಡಿದ್ದ ಕಾಂಗ್ರೆಸ್ ನಂತರದಲ್ಲಿ ಅಧಿಕಾರಕ್ಕೆ ಬಂದಾದ ಬಳಿಕ ಜನರಿಗೆ, ಆ ಪಕ್ಷದ ಬಗ್ಗೆ ಅನುಭವವೇ ಬೇರೆ. ಭ್ರಷ್ಟಾಚಾರ,ಅಧಿಕಾರ ಲಾಲಸೆಯಿಂದ ಕಾಂಗ್ರೆಸ್ ಸೋಲು ಕಾಣುತ್ತಾ ಬರ ಬೇಕಾಗಿದೆ. ಕಾಶ್ಮೀರದ ವಿಚಾರ,ರಾಮ ಮಂದಿರ ನಿರ್ಮಾಣ ಕುರಿತಂತೆ ಪಕ್ಷದ ಸಂಕಲ್ಪ ಸಿದ್ಧಿಸಿದೆ. 50 ವರ್ಷಗಳಾದರೂ ಪಕ್ಷದ ನಡೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಬಿಜೆಪಿ ಹೋಳಾಗಿಲ್ಲವೆಂದರು.

    ಪ್ರಾಸ್ತಾವಿಕವಾಗಿ ಮಾತನಾಡಿ ಪಕ್ಷದ ರಾಜ್ಯಪ್ರಧಾನ ಕಾರ‌್ಯದರ್ಶಿ ಕೆ.ಎಸ್.ನವೀನ್,ಜನಸಂಘ ಕಾಲದಿಂದಲೂ ಶಿಕ್ಷಣ ವರ್ಗ ನಡೆದು ಬಂದಿದೆ. ಸಂಘಟನೆ,ಸಿದ್ಧಾಂತ ಹಾಗೂ ಪಕ್ಷದ ಇತಿಹಾಸವನ್ನು ಕಾರ‌್ಯಕರ್ತರಿಗೆ ತಿಳಿಸುವುದು ಹಾಗೂ ಹಾಗೂ ಆ ಮೂಲಕ ಅವರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಪಕ್ಷ ಇಲ್ಲಿ ಹೇಳಿಕೊಡುತ್ತದೆ. ಪ್ರಧಾನಿಯಿಂದ ಗ್ರಾಪಂ ಸದಸ್ಯರವರೆಗೂ ಇದರಲ್ಲಿ ಭಾಗ ವಹಿ ಸುವುದು ಕಡ್ಡಾಯವಾಗಿದೆ ಎಂದರು.

    ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಾರ‌್ಯಕ್ರಮ ಉದ್ಘಾಟಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಶಾಸಕರಾದ ಎಂ. ಚಂದ್ರಪ್ಪ,ಪೂರ್ಣಿಮಾ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎ.ಮುರುಳಿ, ಮುಖಂಡರಾದ ಸಿದ್ದೇಶ್‌ಯಾದವ್, ಮಲ್ಲಿಕಾರ್ಜುನ್, ಸುರೇಶ್ ಸಿದ್ದಾಪುರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts