More

    ಬಸ್ರೂರಿನಲ್ಲಿ ಶಿಲಾಯುಗದ ನಿಲ್ಸ್‌ಕಲ್ ಪತ್ತೆ

    ಶಿರ್ವ: ಬಸ್ರೂರಿನಲ್ಲಿ ಶಿಲಾಯುಗ ಕಾಲದ ಬೃಹತ್ ನಿಲ್ಸ್‌ಕಲ್ ಪತ್ತೆಯಾಗಿದೆ ಎಂದು ಶಿರ್ವದ ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

    ಸುಭಾಷ್ ನಗರ, ಅಡ್ಕದಕಟ್ಟೆ ಮತ್ತು ಕೊಲ್ಲೂರಿನಲ್ಲಿ ಈ ಹಿಂದೆ ನಿಲ್ಸ್‌ಕಲ್‌ಗಳು ಪತ್ತೆಯಾಗಿದ್ದವು. ಆದರೆ, ಬಸ್ರೂರಿನ ನಿಲ್ಸ್‌ಕಲ್ ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಕಣ್ಮನ ಸೆಳೆಯುತ್ತ್ತಿದೆ. ಏಳು ಅಡಿ ಎತ್ತರವಿದೆ. ವಾಯುವ್ಯ ದಿಕ್ಕಿಗೆ ಮುಖ ಮಾಡಿ ನಿಂತಿರುವ ಈ ಕಲ್ಲು, ಪೂರ್ವಕ್ಕೆ ಸ್ವಲ್ಪ ವಾಲಿದಂತೆ ನಿಲ್ಲಿಸಲ್ಪಟ್ಟಿದೆ. ಬಸ್ರೂರನ್ನು ಶಾಸನಗಳಲ್ಲಿ ಬಸುರೆಪಟ್ಟಣ, ಬಸುರೆನಗರ, ಬಸ್ರೂರು, ವಸುಪುರ ಎಂದು ಕರೆಯಲಾಗಿದೆ. ಕನ್ನಡದಲ್ಲಿ ಬಸಿರು ಎಂದರೆ ಗರ್ಭಿಣಿ ಎಂದರ್ಥ. ವಸುಪುರ ಎಂಬ ಸಂಸ್ಕೃತ ಪದದಲ್ಲಿನ ವಸು ಎಂಬ ಪದಕ್ಕೆ ಭೂಮಿ ಎಂದರ್ಥ. ಆದ್ದರಿಂದ ಬಸ್ರೂರಿನ ನಿಲ್ಸ್‌ಕಲ್‌ಗೂ ಹೆಣ್ಣಿಗೂ ನಿಕಟ ಸಂಬಂಧವಿದೆ. ಈ ನಿಲ್ಸ್‌ಕಲ್ಲು ಬಸ್ರೂರಿನ ವೆಂಕಟರಮಣ ದೇವಾಲಯ ಮತ್ತು ಕೋಟೆ ಆಂಜನೇಯ ದೇವಾಲಯಗಳ ನಡುವಿನಲ್ಲಿದೆ. ಮುರುಳೀಧರ ಹೆಗಡೆ, ಬಸ್ರೂರಿನ ಪ್ರದೀಪ್, ವಿದ್ಯಾರ್ಥಿ ಶ್ರೇಯಸ್, ನಾಗರಾಜ್, ಗೌತಮ್, ಚಂದ್ರು ಮತ್ತು ಕಾರ್ತಿಕ್ ಹಾಗೂ ವೆಂಕಟರಮಣ ದೇವಾಲಯದ ಆಡಳಿತ ಮಂಡಳಿ ಅಧ್ಯಯನದಲ್ಲಿ ಸಹಕರಿಸಿದ್ದಾರೆ.

    ಯಾಕೆ ಈ ಹೆಸರು?
    ಗರ್ಭಿಣಿಯ ದೇಹದ ಬಾಗು-ಬಳುಕುಗಳಂತೆ ಈ ನಿಲ್ಸ್‌ಕಲ್ ವಿನ್ಯಾಸವಿದೆ. ಕರಾವಳಿಯ ನಿಲ್ಸ್‌ಕಲ್‌ಗಳನ್ನು ಸ್ಥಳೀಯ ದಂತಕತೆಗಳಲ್ಲಿ ಗರ್ಭಿಣಿ ಕಲ್ಲುಗಳೆಂದೇ ಕರೆಯಲಾಗಿದೆ. ಆದರೆ, ಈ ಬಗ್ಗೆ ಖಚಿತವಾದ ಪುರಾತತ್ವ ಆಧಾರಗಳು ಲಭ್ಯವಿಲ್ಲ ಎನ್ನುತ್ತಾರೆ ಪ್ರೊ.ಟಿ.ಮುರುಗೇಶಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts