More

    ನಿಖಿಲ್ ಮದುವೆಯಲ್ಲಿ ಲಾಕ್‌ಡೌನ್ ನಿಯಮ ಪಾಲಿಸಿದ ಫೋಟೋ ಬಿಡುಗಡೆ ಮಾಡಿದ ಎಚ್‌ಡಿಕೆ ಕುಟುಂಬ

    ಬೆಂಗಳೂರು: ಶುಕ್ರವಾರ ನಡೆದ ನಟ ನಿಖಿಲ್ ಮತ್ತು ರೇವತಿ ವಿವಾಹದಲ್ಲಿ ಲಾಕ್‌ಡೌನ್ ನಿಯಮಗಳನ್ನು ಪಾಲಿಸಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕುಟುಂಬ, ಸಾಮಾಜಿಕ ಅಂತರ ಪಾಲಿಸಿರುವ ಕುರಿತ ಫೋಟೋಗಳನ್ನು ಬಿಡುಗಡೆ ಮಾಡಿದೆ.

    ಮದುವೆಗೆ ಬಂದ ಅತಿಥಿಗಳು ದೂರ ದೂರ ಇಟ್ಟಿರುವ ಕುರ್ಚಿಗಳಲ್ಲಿ ಕುಳಿತಿರುವುದು, ಮಾಸ್ಕ್ ಧರಿಸಿರುವುದು ಮತ್ತು ಕೈಗಳನ್ನು ಸ್ಯಾನಿಟೈಸರ್‌ನಿಂದ ತೊಳೆದುಕೊಳ್ಳುತ್ತಿರುವುದು ಈ ಫೋಟೋಗಳಲ್ಲಿ ಕಾಣುತ್ತದೆ.

    ಆದರೆ ವಧು ವರ ಇದ್ದ ವೇದಿಕೆಯಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿರುವುದು ಮತ್ತು ಮಾಸ್ಕ್ ಧರಿಸಿರುವುದು ಕಾಣುವುದಿಲ್ಲ. ಮಂಟಪದಲ್ಲಿ ಸಂಬಂಧಿಕರು, ಅತಿಥಿಗಳು, ಫೋಟೋಗ್ರಫರ್‌ಗಳು, ವಿಡಿಯೋಗ್ರಾಫರ್‌ಗಳು ಗುಂಪುಗುಂಪಾಗಿರುವುದು ಈ ಮೊದಲು ಬಿಡುಗಡೆಯಾದ ಫೋಟೋಗಳಿಂದ ವೇದ್ಯವಾಗುತ್ತದೆ.

    ಈ ಮಧ್ಯೆ, ತಮ್ಮ ಪುತ್ರನ ಮದುವೆಯ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘‘ಇಡೀ ಜಗತ್ತು ಕರೊನಾದಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ವ್ಯವಸ್ಥಿತವಾಗಿ ಸಾಮಾಜಿಕ ಅಂತರ ಮತ್ತು ಮುನ್ನೆಚ್ಚರಿಕೆಯ ನಡುವೆ ವಿವಾಹ ಅಚ್ಚುಕಟ್ಟಾಗಿ ನೆರವೇರಿದೆ. ಮನೆಯಲ್ಲೇ ಇದ್ದು ಆಶೀರ್ವದಿಸಿದ ಎಲ್ಲ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಕೃತಜ್ಞತೆಗಳು’’ ಎಂದು ಹೇಳಿದ್ದಾರೆ.

    ಪಾಕಿಸ್ತಾನದಿಂದ ಕರೊನಾ ಭಯೋತ್ಪಾದನೆ, ಕಾಶ್ಮೀರಕ್ಕೆ ಕೋವಿಡ್​ 19 ಸೋಂಕಿತ ಉಗ್ರರ ರವಾನೆ

    ಕೋವಿಡ್​-19 ಹರಡುವಿಕೆ ತಡೆಯಲು ಪೋಲಿಯೋ ಕಣ್ಗಾವಲು ಸಿಬ್ಬಂದಿ ಬಳಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts