More

    ಯಲಗೂರೇಶ್ವರ ಕಾರ್ತಿಕೋತ್ಸವ

    ನಿಡಗುಂದಿ: ಅವಳಿ ಜಿಲ್ಲೆಗಳ ಆರಾಧ್ಯದೈವ, ಸಪ್ತ ಗ್ರಾಮಗಳ ಅಧೀಪತಿ, ಯಲಗೂರ ಗ್ರಾಮದ ಯಲಗೂರೇಶ್ವರನ ಕಾರ್ತಿಕೋತ್ಸವ ಫೆ.15 ರಿಂದ ಮೂರು ದಿನ ಅದ್ದೂರಿಯಾಗಿ ಜರುಗಲಿದೆ.
    ಶ್ರೀರಾಮನ ಆಜ್ಞೆಯಂತೆ ಏಳು ಗ್ರಾಮಗಳ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತ ಎಲ್ಲ ಮನದಲ್ಲಿ ನೆಲೆನಿಂತ ಪವನಸುತನ ಅಪಾರ ಶಕ್ತಿ ಎಲ್ಲೆಡೆ ಪರಿಸರಿಸಿದೆ. ಗರ್ಭಗುಡಿಯಲ್ಲಿ ಆಳೆತ್ತರದ ಭವ್ಯ ಮಾರುತೇಶ ಯಲಗೂರ ಸಮೀದ ಚಂದ್ರಗಿರಿ, ಅರಳಲದಿನ್ನಿ, ಕಾಶಿನಕುಂಟಿ, ಬೂದಿಹಾಳ, ಮಸೂತಿ, ನಾಗಸಂಪಗಿ ಗ್ರಾಮಗಳ ಕಾಯುತ್ತ ಅವರ ಕುಲದೇವನಾಗಿ ನೆಲೆನಿಂತಿದ್ದಾನೆ.
    ದೇವಾಲಯದ ಸುತ್ತಲಿನ ಗರಡಗಂಭ, ಶಿವಲಿಂಗ, ಗಣಪತಿ, ಸೂರ್ಯನಾರಾಯಣ, ತುಳಸಿ ವೃಂದಾವನ ಆಸ್ತಿಕರನ್ನು ಪರಮಾತ್ಮನೆಡೆಗೆ ನಡೆಸುವಂತಿದೆ. ಗುಡಿ ಸುತ್ತಲು ಗೋಡೆಯ ವರ್ಣರಂಜಿತ ಪವನಸುತ ಕೀರ್ತಿ ಭಕ್ತರ ಮನ ತಣಿಸುತ್ತವೆ.

    ಕಾರ್ತಿಕೋತ್ಸವ ವಿವರ

    ಫೆ.15 ರಂದು ಬೆಳಗ್ಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಮಹಾಪೂಜೆ, ತೀರ್ಥಪ್ರಸಾದ, ತೆರೆಬಂಡಿ ಸ್ಪರ್ಧೆ ಆಯೋಜಿಸಲಾಗಿದೆ. ಗಿರಿಮಲಪ್ಪ ಭಜಂತ್ರಿಯವರಿಂದ ಶಹನಾಯಿ, ಹರಿವಾಯುಸ್ತುತಿ, ಸುಮಧ್ವವಿಜಯ, ಪಾರಾಯಣ ಶೋಭಾಯಾತ್ರೆ ನಡೆಯಲಿದೆ. ನೇತ್ರಾ ಮಿರ್ಜಿ, ಸಂಪದಾ ರಾವ್, ಲಾವಣ್ಯ ಪಾಮಡಿ, ನಾಗರಾಜ ಕುಲಕರ್ಣಿ, ಗೋಪಾಲ ಪತ್ತಾರ, ಸಂಗೀತಾ ಕಾಖಂಡಕಿ, ಜಯತೀರ್ಥ ತಾಸಗಾಂವ್, ಅನೀಶ ಕುಲಕರ್ಣಿ, ವಿದ್ಯಾ ಕಟ್ಟಿ, ಸುರೇಶ ಪರ್ವತೀಕರ, ಸುಧಾ ಜೋಶಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ.
    ಪಂ.ಶ್ರೀಕಾಂತಾಚಾರ್ಯ ಬಿದರಕುಂದಿ ವಿಶೇಷ ಪ್ರವಚನ ನೀಡಲಿದ್ದಾರೆ. ಬಾಗಲಕೋಟೆ ನಟರಾಜ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ನೈತ್ಯರಂಗ ರೂಪಕ, ಪದ್ಮಭಾಸ್ಕರ, ಸುಕೃತಿ ದೇಶಪಾಂಡೆಯವರಿಂದ ಯೋಗಪ್ರದರ್ಶನ, ಮಧ್ವಭಜನಾ ಮಂಡಳಿಯಿಂದ ರೂಪಕ ಪ್ರದರ್ಶನಗೊಳ್ಳಲಿದೆ.
    ವಿಜಿಯೀಂದ್ರ ಅಥಣಿಕರ, ಪಂ.ಪ್ರಸನ್ನ ಗುಡಿ, ರಾಘವೇಂದ್ರ ಕಟ್ಟಿಯವರಿಂದ ಗಾಯನ ನಡೆಯಲಿದೆ. ಖ್ಯಾತ ಗಾಯಕಿ ಸಂಗೀತ ಕಟ್ಟಿಯವರಿಂದ ದಾಸವಾಣಿ, ಡಾ:ಅರಣ್ಯಕುಮಾರ ಮುನ್ನೇನಿಯವರಿಂದ ತಾರಶಹನಾಯಿ, ಸಂಧ್ಯಾ ದಿಗ್ಗಾವಿ ಸಿತಾರ್ ವಾದನ ಪ್ರದರ್ಶನಗೊಳ್ಳುವುದು.


    ಫೆ. 15 ರಂದು ಬೆಳಗ್ಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಮಹಾಪೂಜೆ, ತೀರ್ಥಪ್ರಸಾದ, ತೆರೆಬಂಡಿ ಸ್ಪರ್ಧೆ ಆಯೋಜಿಸಲಾಗಿದೆ. ಗಿರಿಮಲಪ್ಪ ಭಜಂತ್ರಿಯವರಿಂದ ಶಹನಾಯಿ, ಹರಿವಾಯುಸ್ತುತಿ, ಸುಮಧ್ವವಿಜಯ, ಪಾರಾಯಣ ಶೋಭಾಯಾತ್ರೆ ನಡೆಯಲಿದೆ. ನೇತ್ರಾ ಮಿರ್ಜಿ, ಸಂಪದಾ ರಾವ್, ಲಾವಣ್ಯ ಪಾಮಡಿ, ನಾಗರಾಜ ಕುಲಕರ್ಣಿ, ಗೋಪಾಲ ಪತ್ತಾರ, ಸಂಗೀತಾ ಕಾಖಂಡಕಿ, ಜಯತೀರ್ಥ ತಾಸಗಾಂವ್, ಅನೀಶ ಕುಲಕರ್ಣಿ, ವಿದ್ಯಾ ಕಟ್ಟಿ, ಸುರೇಶ ಪರ್ವತೀಕರ, ಸುಧಾ ಜೋಶಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿವೆ.
    ಪಂ.ಶ್ರೀಕಾಂತಾಚಾರ್ಯ ಬಿದರಕುಂದಿ ವಿಶೇಷ ಪ್ರವಚನ ನೀಡಲಿದ್ದಾರೆ. ಬಾಗಲಕೋಟೆ ನಟರಾಜ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ನೈತ್ಯರಂಗ ರೂಪಕ, ಪದ್ಮಭಾಸ್ಕರ, ಸುಕೃತಿ ದೇಶಪಾಂಡೆಯವರಿಂದ ಯೋಗಪ್ರದರ್ಶನ, ಮಧ್ವಭಜನಾ ಮಂಡಳಿಯಿಂದ ರೂಪಕ ಪ್ರದರ್ಶನಗೊಳ್ಳಲಿದೆ.
    ವಿಜಿಯೀಂದ್ರ ಅಥಣಿಕರ, ಪಂ.ಪ್ರಸನ್ನ ಗುಡಿ, ರಾಘವೇಂದ್ರ ಕಟ್ಟಿಯವರಿಂದ ಗಾಯನ ನಡೆಯಲಿದೆ. ಖ್ಯಾತ ಗಾಯಕಿ ಸಂಗೀತ ಕಟ್ಟಿಯವರಿಂದ ದಾಸವಾಣಿ, ಡಾ:ಅರಣ್ಯಕುಮಾರ ಮುನ್ನೇನಿಯವರಿಂದ ತಾರಶಹನಾಯಿ, ಸಂಧ್ಯಾ ದಿಗ್ಗಾವಿ ಸಿತಾರ್ ವಾದನ ಪ್ರದರ್ಶನಗೊಳ್ಳುವುದು.

    ರಥೋತ್ಸವ

    ಫೆ .16 ರಂದು ಬೆಳಗ್ಗೆ 10 ಗಂಟೆಗೆ ದಿಂಡಿನ ಸ್ಪರ್ಧೆ, ಗೊಂಬೆಗಳ ಕುಣಿತ, ಹರಶಾವಿಗೆ ಆಯೋಜಿಸಲಾಗಿದೆ. ಮೈಸೂರ ರಾಮಚಂದ್ರ ಆಚಾರ್, ಬಾಗಲಕೋಟೆಯ ಅನಂತ ಕುಲಕರ್ಣಿಯವರಿಂದ ದಾಸವಾಣಿ, ಗೀತಾ ಆಲೂರವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ವೀಣಾ ಬಡಿಗೇರ, ವಾಣಿಶ್ರೀ ಧನ್ವಂತ್ರಿ ಜುಗಲ್ ಬಂದಿ ನಡೆಸಿಕೊಡಲಿದ್ದಾರೆ. ಸಂಜೆ 4ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ರಥೋತ್ಸವ ನಡೆಯಲಿದೆ. ನಂತರ ನಾಟಕ ಪ್ರದರ್ಶನಗೊಳ್ಳಿಲಿದೆ.
    ಫೆ.17 ರಂದು ಬೆಳಗ್ಗೆ 10ಕ್ಕೆ ಸ್ವಾನಗಳ ಓಟದ ಸ್ಪರ್ಧೆ, ಸಂಜೆ 4 ಗಂಟೆಗೆ ಜಂಗಿಕುಸ್ತಿ, ರಾತ್ರಿ ಕಿವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನಗೊಳ್ಳಲಿದೆ. ೆ.18 ರಂದು ಬೆಳಗ್ಗೆ 10 ಗಂಟೆಗೆ ದಿಂಡಿನ ರೇಸ್, ಸಂಜೆ 4ಕ್ಕೆ ಟಗರಿನ ಕಾಳಗ ನಡೆಯಲಿದೆ.

    ಉಚಿತ ಆರೋಗ್ಯ ಶಿಬಿರ

    ಫೆ .15 ರಂದು ದೇವಸ್ಥಾನ ಆವರಣದಲ್ಲಿ ಬೆಳಗ್ಗೆ 11.30 ರಿಂದ ಬಾಗಲಕೋಟೆಯ ಎಸ್.ಎನ್ ಮೆಡಿಕಲ್ ಕಾಲೇಜು ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನಡೆಯಲಿದೆ. ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts