More

    ನ್ಯೂಜಿಲೆಂಡ್ ತಂಡಕ್ಕೆ ಹೆನ್ರಿ ನಿಕೋಲ್ಸ್ ಶತಕದಾಸರೆ

    ವೆಲ್ಲಿಂಗ್ಟನ್: ಎಡಗೈ ಬ್ಯಾಟ್ಸ್‌ಮನ್ ಹೆನ್ರಿ ನಿಕೋಲ್ಸ್ (117*ರನ್, 207 ಎಸೆತ, 15 ಬೌಂಡರಿ, 1 ಸಿಕ್ಸರ್) ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಮುನ್ನಡೆದಿದೆ.

    ಬೆಸಿನ್ ರಿಸರ್ವ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕಿವೀಸ್ ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 294 ರನ್ ಪೇರಿಸಿದೆ. 6ನೇ ಟೆಸ್ಟ್ ಶತಕ ಪೂರೈಸಿದ ನಿಕೋಲ್ಸ್ ಜತೆಗೆ ಕೈಲ್ ಜೇಮಿಸನ್ (1) ಕ್ರೀಸ್‌ನಲ್ಲಿದ್ದಾರೆ.

    ಮೊದಲ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ 251 ರನ್ ಸಿಡಿಸಿದ್ದ ನಾಯಕ ಕೇನ್ ವಿಲಿಯಮ್ಸನ್ ಮೊದಲ ಮಗುವಿನ ನಿರೀಕ್ಷೆಯಲ್ಲಿ 2ನೇ ಪಂದ್ಯಕ್ಕೆ ಗೈರಾಗಿದ್ದಾರೆ. ಅವರ ಅನುಪಸ್ಥಿತಿಯಿಂದ ಕಿವೀಸ್ ಬ್ಯಾಟಿಂಗ್ ವಿಭಾಗದಲ್ಲಿ ಉಂಟಾಗಿರುವ ಕಂದಕವನ್ನು ತುಂಬಲು ನಿಕೋಲ್ಸ್ ಶ್ರಮಿಸಿದರು.

    ಕಿವೀಸ್ ತಂಡ 78 ರನ್‌ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತವನ್ನು ಎದುರಿಸಿತ್ತು. ವಿಲ್ ಯಂಗ್ (43) ಮತ್ತು ಹೆನ್ರಿ ನಿಕೋಲ್ಸ್ 4ನೇ ವಿಕೆಟ್‌ಗೆ 70 ರನ್ ಸೇರಿಸಿ ತಂಡಕ್ಕೆ ಚೇತರಿಕೆ ಒದಗಿಸಿದರು. ಬಳಿಕ ಬಿಜೆ ವಾಟ್ಲಿಂಗ್ (30) ಮತ್ತು ಡಾರ್ಲಿ ಮಿಚೆಲ್ (42) ಜತೆಗೂ ಅರ್ಧಶತಕದ ಜತೆಯಾಟವಾಡಿದ ನಿಕೋಲ್ಸ್ ದಿನದಂತ್ಯಕ್ಕೆ ತಂಡವನ್ನು ಸುಸ್ಥಿತಿಯಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾದರು.

    ನ್ಯೂಜಿಲೆಂಡ್: 84 ಓವರ್‌ಗಳಲ್ಲಿ 6 ವಿಕೆಟ್‌ಗೆ 294 (ಲಾಥಮ್ 27, ಬ್ಲಂಡೆಲ್ 14, ಯಂಗ್ 43, ಟೇಲರ್ 9, ನಿಕೋಲ್ಸ್ 117*, ವಾಟ್ಲಿಂಗ್ 30, ಮಿಚೆಲ್ 42, ಗ್ಯಾಬ್ರಿಯೆಲ್ 57ಕ್ಕೆ 3, ಚೆಮರ್ ಹೋಲ್ಡರ್ 65ಕ್ಕೆ 2).

    ಅಹರ್ನಿಶಿ ಅಭ್ಯಾಸ ಪಂದ್ಯದ ಮೊದಲ ದಿನ ಬುಮ್ರಾ ಆಲ್ರೌಂಡ್ ಶೋ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts