More

    ದೇಶಾದ್ಯಂತ 93 ಸ್ಥಳಗಳಲ್ಲಿ ಎನ್​​ಐಎ ದಾಳಿ: ನೂರಾರು ಪಿಎಫ್​ಐ ಕಾರ್ಯಕರ್ತರ ಬಂಧನ

    ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 15 ರಾಜ್ಯಗಳ 93 ಸ್ಥಳಗಳಲ್ಲಿ ದಾಳಿ ನಡೆಸಿದೆ. ದಾಳಿ ವೇಳೆ ದೇಶಾದ್ಯಂತ ಸುಮಾರು ನೂರಾರು ಪಿಎಫ್​ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

    ಎನ್‌ಐಎ ಒಂದೇ 45 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದು, ಅವರ ವಿರುದ್ಧ ಕಠಿಣ ಯುಎಪಿಎ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಕೇರಳದ (39 ಸ್ಥಳಗಳು), ತಮಿಳುನಾಡು (16), ಕರ್ನಾಟಕ (12), ಆಂಧ್ರಪ್ರದೇಶ (7), ತೆಲಂಗಾಣ (1), ಯುಪಿ (2), ರಾಜಸ್ಥಾನ (4), ದೆಹಲಿ (4) ಅಸ್ಸೋಂ (1), ಎಂಪಿ (1), ಮಹಾರಾಷ್ಟ್ರ (4) ಗೋವಾ (1), ಪಶ್ಚಿಮ ಬಂಗಾಳ (1), ಬಿಹಾರ (1) ಮತ್ತು ಮಣಿಪುರ (1) ಸೇರಿ 15 ರಾಜ್ಯಗಳ 93 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ.

    ಈ ಸಂಬಂಧ ಐದು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಪ್ರಕರಣಗಳ ಅಡಿಯೇ ಎಲ್ಲ ಬಂಧನಗಳನ್ನು ಮಾಡಲಾಗಿದೆ. ದೆಹಲಿಯಲ್ಲಿ ಬಂಧಿಸಲಾಗಿರುವ ಎಲ್ಲಾ ಪಿಎಫ್‌ಐ ಕಾರ್ಯಕರ್ತರನ್ನು ಕೋರ್ಟ್​ಗೆ ಹಾಜರು ಪಡಿಸಿದ ಬಳಿಕ ನಾಲ್ಕು ದಿನಗಳ ಎನ್​ಐಎ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

    ಮುಂಬೈನಲ್ಲಿ ಬಂಧಿತ ಕಾರ್ಯಕರ್ತರನ್ನು ಐದು ದಿನ ಎನ್​​ಐಎ ಕಸ್ಟಡಿ: ಮುಂಬೈ ನ್ಯಾಯಾಲಯವು ಗುರುವಾರ ಐವರು ಪಿಎಫ್‌ಐ ಕಾರ್ಯಕರ್ತರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ವಶಕ್ಕೆ ನೀಡಿದೆ. ಎಟಿಎಸ್ ರಾಷ್ಟ್ರವ್ಯಾಪಿ ಬಹು ಸಂಸ್ಥೆಗಳ ಕಾರ್ಯಾಚರಣೆಯ ಭಾಗವಾಗಿ ಗುರುವಾರ ರಾಜ್ಯದ ವಿವಿಧೆಡೆಯಿಂದ ಒಟ್ಟು 20 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದೆ. ಇವರಲ್ಲಿ ಐವರನ್ನು 14 ದಿನಗಳ ಕಾಲ ಕಸ್ಟಡಿಗೆ ಕೋರಿ ಎಟಿಎಸ್‌ನೊಂದಿಗೆ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ, ನ್ಯಾಯಾಲಯ ಅವರನ್ನು ಐದು ದಿನಗಳ ಕಾಲ ತನಿಖಾ ಸಂಸ್ಥೆಯ ವಶಕ್ಕೆ ನೀಡಿ ಆದೇಶ ಮಾಡಿದೆ.

    ಬಿಜೆಪಿಯವರಿಗೆ ಸಂವಿಧಾನ ಮುಖ್ಯವಲ್ಲ, ನಾಗ್ಪುರದ ಆರ್‌ಎಸ್‌ಎಸ್ ಕಚೇರಿಗೆ ವಿಧೇಯರಾಗಿದ್ದಾರೆ

    ಮೋಹನ್​ ಭಾಗವತ್​ ‘ರಾಷ್ಟ್ರಪಿತ, ರಾಷ್ಟ್ರ ಋಷಿ’ ಇದ್ದಂತೆ: ಇಮಾಮ್​ ಮುಖ್ಯಸ್ಥ ಅಹ್ಮದ್ ಇಲ್ಯಾಸಿ ಬಣ್ಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts