More

    ಪುಲ್ವಾಮಾ ದಾಳಿಯ ಶಂಕಿತ ಉಗ್ರರ ಮನೆ ಮೇಲೆ ಎನ್​ಐಎ ತಂಡದ ದಾಳಿ; ಪ್ರಮುಖ ದಾಖಲೆ ವಶಕ್ಕೆ, ಮನೆಗೆ ಬೀಗ ಜಡಿದ ಅಧಿಕಾರಿಗಳು

    ಪುಲ್ವಾಮಾ: ಉಗ್ರರ ದಾಳಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಇಂದು ಬೆಳಗ್ಗೆ ಶಂಕಿತ ಉಗ್ರರ ಹಲವು ಮನೆಗಳ ತಪಾಸಣೆ ನಡೆಸಿತು.

    ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಆತ್ಮಾಹುತಿ ಬಾಂಬರ್​ಗಳಿಂದಾಗಿ 40 ಜನ ಸಿಆರ್​ಪಿಎಫ್​ ಯೋಧರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಜೈಷ್​ ಎ ಮೊಹಮ್ಮದ್​ (JeM) ಸಂಘಟನೆಯ ಉಗ್ರನೊಬ್ಬನನ್ನು ಶುಕ್ರವಾರ ಬಂಧಿಸಿತ್ತು.

    ಪುಲ್ವಾಮಾ ಬಳಿಯ ಹಜಿಬಲ್​ ಪ್ರದೇಶದವನಾದ ಶಕೀರ್ ಬಶೀರ್ ಮ್ಯಾಗ್ರೆ ಬಂಧಿತ ಉಗ್ರ. ಈತ ಆತ್ಮಹತ್ಯಾ ದಳದ ಅದಿಲ್​ ಅಮಹ್ಮದ್​ ದಾರ್​ನಿಗೆ ವಸತಿ ಮತ್ತು ಇನ್ನಿತರ ಸೌಲಭ್ಯ ಒದಗಿಸಿದ್ದ. ಪಾಕಿಸ್ತಾನದ ಉಗ್ರ ಮಹಮ್ಮದ್​ ಉಮರ್​ ಫಾರೂಕ್​ ಎಂಬಾತನಿಂದ ಅದಿಲ್​ ಮ್ಯಾಗ್ರೆಗೆ ಪರಿಚಿತನಾಗಿದ್ದ. ನಂತರ ತಾನೂ ಜೆಇಎಮ್​ನ ಕಾರ್ಯಕರ್ತನಾಗಿದ್ದ.

    ಮ್ಯಾಗ್ರೆ ಅವನ ಮನೆ ಮೇಲೆ ದಾಳಿ ನಡೆಸಿದ ಎನ್​ಐಎ ಸಿಬ್ಬಂದಿ ಸತತ ಮೂರು ತಾಸು ತಪಾಸಣೆ ನಡೆಸಿ, ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಶಕೀರ್ ಮ್ಯಾಗ್ರೆ ಮನೆಯ ಕೆಲ ಕೊಠಡಿಗಳನ್ನು ಸಹ ವಶಕ್ಕೆ ಪಡೆದು ಬೀಗ ಹಾಕಿದರು. ಮ್ಯಾಗ್ರೆ ಕುಟುಂಬವನ್ನು ವಿಚಾರಣೆ ನಡೆಸಲಾಯಿತು.

    ಬಹಳಷ್ಟು ಸಲ ತಾನು ಬಂದೂಕು, ಮದ್ದು ಗುಂಡು, ಹಣ ಮತ್ತಿತರ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಿದ್ದೆ. ಅವುಗಳನ್ನು ಪುಲ್ವಾಮಾ ದಾಳಿಗೆ ಬಳಸಲಾಗಿತ್ತು ಎಂದು ಮ್ಯಾಗ್ರೆ ಆರಂಭಿಕ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ.

    ಪುಲ್ವಾಮಾ ದಾಳಿಯ ನಂತರ ಹಲವು ಕಡೆ ಹೀಗೆ ಎನ್​ಐಎ ತಂಡ ದಾಳಿ ನಡೆಸಿದೆ. ಅಲ್ಲದೆ ಕೆಲ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಹಾಗೂ ಶೋಫಿಯಾನ್‌ನಲ್ಲಿದ್ದ ಭಯೋತ್ಪಾದಕ ತಾಣಗಳನ್ನು ನಾಶ ಮಾಡಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts