ರಾಜ್ಯದಲ್ಲಿ ಮುಂಗಾರು ನಿರ್ಗಮನ: ಹಿಂಗಾರು ಆಗಮನ- Arrival of the Northeast Monsoon

ಈಶಾನ್ಯ ಮಾನ್ಸೂನ್​ ಆಗಮನ
Monsoon rain
Published on: 

ಬೆಂಗಳೂರು: (Arrival of the Northeast Monsoon) ಪ್ರಸಕ್ತ ಸಾಲಿನ ನೈಋತ್ಯ ಮಾನ್ಸೂನ್(ಮುಂಗಾರು) ದೇಶಾದ್ಯಂತ ಗುರುವಾರ ನಿರ್ಗಮಿಸಿದೆ. ಈಶಾನ್ಯ ಮಾನ್ಸೂನ್(ಹಿಂಗಾರು) ಆರಂಭವಾಗಿದೆ.ಈ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಲ್, ಕರಾವಳಿ ಆಂಧ್ರಪ್ರದೇಶ, ರಾಯಲಸೀಮೆ, ದಕ್ಷಿಣ ಕರ್ನಾಟಕ ಮತ್ತು ಕೇರಳ ವ್ಯಾಪ್ತಿಯ ಪ್ರದೇಶಗಳಲ್ಲಿ ಗುಡುಗು ಸಹಿತ ವರುಣನ ಆಗಮನವಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮುಂದಿನ 2 ದಿನ ಹಾಗೂ ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಮುಂದಿನ 4 ದಿನ ಬಿರುಸಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನದಲ್ಲಿ ಅ.17ರಿಂದ ಮುಂದಿನ 2 ದಿನ, ಚಿಕ್ಕಬಳ್ಳಾಪುರದಲ್ಲಿ ಅ.18ರಿಂದ ಅ.19ರವರೆಗೆ ಮತ್ತು ಶಿವಮೊಗ್ಗ, ತುಮಕೂರಿನಲ್ಲಿ ಅ.17ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ.

Also Read
ಕೆಂಗೇರಿ ಉಪನೋಂದಣಾಧಿಕಾರಿ ಕೆ.ಮಂಜುದರ್ಶಿನಿ ಅಮಾನತು- Sub-Registrar K. Manjudarshini suspended
ಈಶಾನ್ಯ ಮಾನ್ಸೂನ್​ ಆಗಮನ

ಸೂಪರ್ ಎಲ್‌ನಿನೋ ಪರಿಣಾಮ:

ಮುಂಗಾರು ಮೇಲೆ ನೇರವಾಗಿ ಪರಿಣಾಮ ಬೀರುವ ಮೂಲಕ ಮಳೆ ಕುಂಠಿತಕ್ಕೆ ಕಾರಣವಾಗಿರುವ ಸೂಪರ್ ಎಲ್‌ನಿನೋ, ಹಿಂಗಾರು ಮೇಲೆಯೂ ಪರಿಣಾಮ ಬೀರಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಮಳೆ ಕೊರತೆ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net