

Delhi : ರಾಷ್ಟ್ರ ರಾಜಧಾನಿಯಲ್ಲಿ ಬೆಳಿಗ್ಗೆಯಿಂದ ಸುರಿದ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದ್ದು, ಗೋಡೆ ಕುಸಿತು ಇಲ್ಲಿಯವರೆಗೂ 8 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಶಬೀಬುಲ್ (30), ರಬೀಬುಲ್ (30), ಮುತ್ತು ಅಲಿ (45), ರುಬಿನಾ (25), ಡಾಲಿ (25), ಹಶಿಬುಲ್ (45) , ರುಖ್ಸಾನಾ (6), ಮತ್ತು ಹಸೀನಾ (7) ಮೃತರು ಎಂದು ಗುರುತಿಸಲಾಗಿದೆ.
ದೆಹಲಿ ಪೊಲೀಸರ ಪ್ರಕಾರ, ಬೆಳಿಗ್ಗೆ ಸುರಿದ ಭಾರೀ ಮಳೆಗೆ ಹಳೆಯ ದೇವಾಲಯದ ಪಕ್ಕದಲ್ಲಿರುವ ಗೋಡೆ ಇದ್ದಕ್ಕಿದ್ದಂತೆ ಕುಸಿದಿದೆ. ಇನ್ನು ಅದರ ಅಡಿಯಲ್ಲಿ ಸುಮಾರು ಜನ ಸಿಲಿಕಿಕೊಂಡಿದ್ದಾರೆ. ಇನ್ನು ದೆಹಲಿಯ ಅಗ್ನಿಶಾಮಕ ಸಿಬ್ಬಂದಿಗಳು ರಕಕ್ಷಣಾ ಕಾರ್ಯಚರಣೆ ನಡೆಸಿ ಗೋಡೆಯ ಅಡಿಯಲ್ಲಿ ಸಿಕ್ಕಿಕೊಂಡ ಜನರನ್ನು ರಕ್ಷಣೆ ಮಾಡಿ, ಪಕ್ಕದಲ್ಲಿರುವ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ.
ಗುಡುಗು ಸಹಿತ ಭಾರೀ ಮಳೆ ಹಿನ್ನಲೆ ಭಾರತ ಹವಾಮಾನ ಇಲಾಖೆ ರೆಡ್ ಅಲರ್ಟ್ಘೋಷಿಸಿತ್ತು. ಇನ್ನು ಆ ಪ್ರದೇಶಗಳಲ್ಲಿ ವಾಸಿಸುವಂತವರು ಎಚ್ಚರದಿಂದ ಇರಲು ತಿಳಿಸಿದೆ.
ದೆಹಲಿಯ ಸುತ್ತಮುತ್ತ 78.7 ಮಿಮೀ ಮಳೆಯಾಗಿದೆ. ಇನ್ನು ಪ್ರಗತಿ ಮೈದಾನದಲ್ಲಿ 100 ಮಿಮೀ, ಲೋಧಿ ರಸ್ತೆ 80 ಮಿಮೀ, ಪುಸಾ 69 ಮಿಮೀ ಮತ್ತು ಪಾಲಂನಲ್ಲಿ 31.8 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ವರದಿ ಮಾಡಿದೆ. (ಏಜೆನ್ಸೀಸ್)