ರಸ್ತೆಯಲ್ಲಿ ಭಯಾನಕ ಸ್ಟಂಟ್​! ವಿಡಿಯೋ ವೈರಲ್​ ಬೆನ್ನಲ್ಲೇ ಚಾಲಕನಿಗೆ ತಕ್ಕ ಪಾಠ ಕಲಿಸಿದ ಖಾಕಿ | Viral Video

ವಿಜಯವಾಣಿ (39)
Published on

ನವದೆಹಲಿ: ಗ್ರೇಟರ್​ ನೋಯ್ಡಾದ ಮುಖ್ಯ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಲ್ಲದೇ, ಭಯಾನಕ ಸ್ಟಂಟ್​ಗಳನ್ನು ಪ್ರದರ್ಶಿಸಿದ ಚಾಲಕನಿಗೆ ಇದೀಗ ಟ್ರಾಫಿಕ್​ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ. (Viral Video)

ಮಾರುತಿ ಸುಜುಕಿ ಬಲೆನೋ ಕಾರಿನಲ್ಲಿ ಅಪಾಯಕಾರಿ ಡ್ರಿಫ್ಟ್​ ಸ್ಟಂಟ್​ಗಳನ್ನು ಮಾಡಿದ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಮಾಡೋದು ತಪ್ಪು ಎಂದು ಗೊತ್ತಿದ್ದರೂ, ಹಲವೆಡೆ ಇದೇ ರೀತಿಯ ಸ್ಟಂಟ್​ಗಳನ್ನು ಮಾಡಿರುವುದು ಹರಿದಾಡಿದ ದೃಶಗಳ ಮೂಲಕ ಸ್ಪಷ್ಟವಾಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಚಾಲಕನ ಬೆನ್ನತ್ತಿದ ಖಾಕಿ, ಕಡೆಗೂ ಆತನಿಗೆ ದಂಡ ವಿಧಿಸುವಲ್ಲಿ ಯಶಸ್ವಿಯಾಗಿದೆ.

"ವೇಗ ಮತ್ತು ಅಪಾಯಕಾರಿ ಚಾಲನೆ" ಮಾಡಿದ್ದಕ್ಕಾಗಿ ಬರೋಬ್ಬರಿ 57,000 ರೂ. ದಂಡವನ್ನು ವಿಧಿಸಿದ ನೋಯ್ಡಾ ಸಂಚಾರಿ ಪೊಲೀಸರು, ಇನ್ಮುಂದೆ ಎಲ್ಲಿಯೂ ಈ ರೀತಿ ಮಾಡದಂತೆ ಖಡಕ್​ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net