ನಾಯಿಯ ಜೀವ ಉಳಿಸಲು ಪ್ರಯತ್ನಿಸಿದ ಚಾಲಕ; ಅಪಘಾತದಲ್ಲಿ ಇಬ್ಬರ ಜೀವ ಹೋಯ್ತು

Accident
Published on

ರಾಯಚೂರು: ಶಿರಸಿಯಿಂದ ಹೊರಟಿದ್ದ ಕಾರು ಸಿಂಧನೂರಿನ ಮಣ್ಣಿಕೇರಿ ಬಳಿ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, ಎಂಟು ಮಂದಿಗೆ ಗಾಯವಾಗಿದೆ.

ಶಿರಸಿಯ ಮೆಹನಾಜ್​ (28), ಇಸ್ಮಾಯಿಲ್​ ಸಾಬ್​ (70) ಮೃತರು. ಗಾಯಗೊಂಡ 8 ಮಂದಿಯನ್ನು ರಾಯಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಸ್ತೆಯಲ್ಲಿ ಅಡ್ಡಬಂದ ನಾಯಿಯನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದರಿಂದ ಈ ದುರ್ಘಟನೆ ನಡೆದಿದೆ. ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net