Birds that hunt snakes: ಹಾವು ಅಂದ್ರೆ ಸಾಕು, ಹಲವರು ದೂರ ಓಡ್ತಾರೆ. ಅದರಲ್ಲೂ ನಾಗರಹಾವಿನಂಥ ವಿಷಕಾರಿ ಹಾವುಗಳು ಕಣ್ಣಿಗೆ ಬಿದ್ರೆ ಮುಗೀತು, ಭಯ ಶುರುವಾಗುತ್ತೆ. ಆದ್ರೆ ನಿಮಗೆ ಗೊತ್ತಾ? ಕೆಲವು ಹಕ್ಕಿಗಳೇ ಇಂಥ ವಿಷಕಾರಿ ಹಾವುಗಳನ್ನ ಬೇಟೆಯಾಡಿ ತಿಂತವೆ. ಬಲವಾದ ಕಾಲುಗಳು, ಚೂಪಾದ ಉಗುರುಗಳು ಮತ್ತು ಮಿಂಚಿನ ವೇಗದಲ್ಲಿ ದಾಳಿ ಮಾಡುವ ಕೌಶಲದಿಂದ ಹಾವುಗಳನ್ನೇ ಬೇಟೆಯಾಡೋ ಈ ಹಕ್ಕಿಗಳು ಯಾವುವು? ಅವು ಹಾವುಗಳನ್ನ ಹೇಗೆ ಹಿಡಿಯುತ್ತವೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ.
ಆಫ್ರಿಕಾದ ಹುಲ್ಲುಗಾವಲುಗಳಲ್ಲಿ ಕಾಣಸಿಗುವ ಸೆಕ್ರೆಟರಿ ಬರ್ಡ್‌ಗೆ ನೆಲದ ಮೇಲೆ ನಡೆದುಕೊಂಡೇ ಬೇಟೆಯಾಡೋದು ಅಭ್ಯಾಸ. ಹಾವನ್ನು ಕಂಡ ತಕ್ಷಣ ರೆಕ್ಕೆ ಬಡಿಯುತ್ತಾ ಅದರ ಗಮನ ಬೇರೆಡೆ ಸೆಳೆಯುತ್ತೆ. ಆಮೇಲೆ ಹಾವಿನ ತಲೆಗೆ ಜೋರಾಗಿ ಒದ್ದು, ಕಾಲಿನಿಂದ ತುಳಿದು ಕೊಲ್ಲುತ್ತೆ.
ಕರೆಂಟ್ ಬಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಹಕ್ಕಿಯ ಒದೆತದ ಬಲ ಸುಮಾರು 195 ನ್ಯೂಟನ್‌ಗಳು. ಅಂದ್ರೆ, ಅದರ ದೇಹದ ತೂಕಕ್ಕಿಂತ ಸುಮಾರು ಐದು ಪಟ್ಟು ಹೆಚ್ಚು ಬಲದಿಂದ ಒದೆಯಬಲ್ಲದು. ನಾಗರಹಾವು ಮತ್ತು ಅಡರ್ ಹಾವುಗಳು ಇದರ ಪ್ರಮುಖ ಬೇಟೆಗಳಲ್ಲಿ ಸೇರಿವೆ. ಹಾವನ್ನು ಕೊಂದ ಬಳಿಕ ಇಡೀ ದೇಹವನ್ನೇ ನುಂಗಿಬಿಡುತ್ತೆ.
ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಾಣಸಿಗುವ ಈ ಹದ್ದು ಹಾವುಗಳನ್ನೇ ಹೆಚ್ಚಾಗಿ ಬೇಟೆಯಾಡುತ್ತೆ. ಕಾಡಿನ ಅಂಚಿನಲ್ಲಿ ಅಥವಾ ಮರದ ಕೊಂಬೆಯ ಮೇಲೆ ಕುಳಿತು ಬೇಟೆಗಾಗಿ ಕಾಯುತ್ತೆ. ಹಾವು ಕಣ್ಣಿಗೆ ಬಿದ್ದ ಕೂಡಲೇ ಮೇಲಿನಿಂದ ವೇಗವಾಗಿ ಧಾವಿಸಿ, ತನ್ನ ಚೂಪಾದ ಉಗುರುಗಳಿಂದ ಅದನ್ನ ಹಿಡಿದುಕೊಳ್ಳುತ್ತೆ.
ಮನುಷ್ಯರಿಗೆ ಅಪಾಯಕಾರಿಯಾದ ಹಾವುಗಳೂ ಇದರ ಆಹಾರದಲ್ಲಿ ಸೇರಿವೆ. ಹಾವುಗಳಷ್ಟೇ ಅಲ್ಲದೆ ಹಲ್ಲಿಗಳು, ಕಪ್ಪೆಗಳು ಮತ್ತು ಸಣ್ಣ ಸಸ್ತನಿಗಳನ್ನೂ ತಿನ್ನುತ್ತೆ. ಇದರ ಕಾಲುಗಳ ಮೇಲಿರುವ ದಪ್ಪವಾದ ಹುರುಪೆಗಳು ಬೇಟೆಯಾಡುವಾಗ ನೆರವಾಗುತ್ತವೆ.
ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿ ಕಾಣಸಿಗುವ ಲಾಫಿಂಗ್ ಕೂಕಬುರಾ, ಜೋರಾಗಿ ನಗುವಿನಂಥ ಶಬ್ದ ಮಾಡೋದಕ್ಕೆ ಫೇಮಸ್. ಮಿಂಚುಳ್ಳಿ ಕುಟುಂಬಕ್ಕೆ ಸೇರಿದ ಈ ಹಕ್ಕಿ ಸಣ್ಣ ಸರೀಸೃಪಗಳ ಜೊತೆಗೆ ವಿಷಕಾರಿ ಹಾವುಗಳನ್ನೂ ಬೇಟೆಯಾಡುತ್ತೆ. ದೊಡ್ಡ ಕೂಕಬುರಾಗಳು ಸುಮಾರು ಒಂದು ಮೀಟರ್ ಉದ್ದದ ಹಾವುಗಳನ್ನೂ ಹಿಡಿಯಬಲ್ಲವು.
ಮರದ ಕೊಂಬೆಯ ಮೇಲೆ ಕುಳಿತು ಬೇಟೆಗಾಗಿ ಕಾಯುವ ಈ ಹಕ್ಕಿ, ಹಾವು ಕಾಣಿಸಿದ ತಕ್ಷಣ ಅದರ ಮೇಲೆ ಧಾವಿಸಿ ಹಿಡಿದುಕೊಳ್ಳುತ್ತೆ. ಬಳಿಕ ಹಾವನ್ನ ಕೊಂಬೆಗೆ ಅಥವಾ ನೆಲಕ್ಕೆ ಬಡಿದು, ಕೆಲವೊಮ್ಮೆ ಎತ್ತರದಿಂದ ಕೆಳಕ್ಕೆ ಬೀಳಿಸಿ ನಿಶ್ಚಲಗೊಳಿಸುತ್ತೆ. ಆದ್ರೆ ಹಾವುಗಳೇ ಇದರ ಪ್ರತಿದಿನದ ಆಹಾರವಲ್ಲ. ಕೀಟಗಳು ಮತ್ತು ಸಣ್ಣ ಪ್ರಾಣಿಗಳೇ ಇದರ ಮುಖ್ಯ ಆಹಾರ.
ಉಪ-ಸಹಾರಾ ಆಫ್ರಿಕಾದ ಹುಲ್ಲುಗಾವಲು ಮತ್ತು ಕಾಡು ಪ್ರದೇಶಗಳಲ್ಲಿ ಕಾಣಸಿಗುವ ಬ್ರೌನ್ ಸ್ನೇಕ್ ಈಗಲ್‌ಗೆ ಹಾವುಗಳೇ ಮುಖ್ಯ ಆಹಾರ. ನಾಗರಹಾವು, ಮಾಂಬಾ ಮತ್ತು ಬೂಮ್‌ಸ್ಲ್ಯಾಂಗ್‌ನಂಥ ಹಾವುಗಳನ್ನೂ ಇದು ಬೇಟೆಯಾಡುತ್ತೆ. ಆದ್ರೆ ಈ ಹದ್ದು ಹಾವಿನ ವಿಷಕ್ಕೆ ಸಂಪೂರ್ಣವಾಗಿ ನಿರೋಧಕವಲ್ಲ.
ಹಾವಿನ ಕಡಿತದಿಂದ ರಕ್ಷಣೆ ಪಡೆಯಲು ಇದರ ಕಾಲುಗಳ ಮೇಲೆ ದಪ್ಪವಾದ ಹುರುಪೆಗಳಿರುತ್ತವೆ. ಹಾವಿನ ಮೇಲೆ ಧಾವಿಸಿ ಅದರ ತಲೆಯನ್ನು ಬಲವಾಗಿ ಜಜ್ಜಿ ಕೊಲ್ಲುತ್ತೆ. ಆಮೇಲೆ ಹಾವನ್ನ ತಲೆಯ ಕಡೆಯಿಂದಲೇ ನುಂಗುತ್ತೆ. ಸುಮಾರು ಮೂರು ಮೀಟರ್ ಉದ್ದದ ಹಾವುಗಳನ್ನೂ ಬೇಟೆಯಾಡಬಲ್ಲದು.
ಇದನ್ನೂ ಓದಿ: Nepal floods: ಭೂಕುಸಿತದ ಬಳಿಕ ನೇಪಾಳದಲ್ಲಿ ಪ್ರವಾಹದ ಆರ್ಭಟ; ಜನರ ಬದುಕು ಅತಂತ್ರ
ಗಾಢ ಕಂದು ಬಣ್ಣದ ಗರಿಗಳು ಮತ್ತು ದೊಡ್ಡ ಹಳದಿ ಕಣ್ಣುಗಳು ಈ ಹಕ್ಕಿಯ ವಿಶೇಷತೆ. ಸಾಮಾನ್ಯವಾಗಿ ಎತ್ತರದ ಜಾಗದಲ್ಲಿ ಕುಳಿತು ಅಥವಾ ಆಕಾಶದಲ್ಲಿ ಹಾರುತ್ತಾ ಬೇಟೆಯ ಚಲನವಲನ ಗಮನಿಸುತ್ತೆ. ಹಾವು ಕಾಣಿಸಿದ ಕೂಡಲೇ ಕೆಳಕ್ಕೆ ಇಳಿದು ದಾಳಿ ಮಾಡುತ್ತೆ.