Lakshmidevi viral song: ಸೋಷಿಯಲ್ ಮೀಡಿಯಾದಲ್ಲಿ ಯಾವ ಹಾಡು ಯಾವಾಗ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ ಬಿಡಿ. ಈಗ ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಜಿಮ್ ಜಿಮ್ ತಾರಾ ಜಿಲೇಬಿ ತಾರ ಶಿನ್ನೋಡ’ ಹಾಡಿನದ್ದೇ ಹವಾ. ಮಹಿಳೆಯೊಬ್ಬರು ಹಾಡಿರೋ ಈ ಸಾಂಗ್ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ರೀಲ್ಸ್ ಪ್ರಿಯರು ತಮ್ಮದೇ ಸ್ಟೈಲ್ನಲ್ಲಿ ವಿಡಿಯೊ ಮಾಡಿ ಶೇರ್ ಮಾಡುತ್ತಿದ್ದಾರೆ.
ಕಳೆದೆರಡು ದಿನಗಳಿಂದ ಈ ಹಾಡಿನ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿವೆ. ಅಷ್ಟೇ ಅಲ್ಲ, ಹಾಡಿಗೆ ರಿಮಿಕ್ಸ್ ಕೂಡ ಮಾಡಲಾಗಿದ್ದು, ಬೇರೆ ಬೇರೆ ರೀತಿಯ ರೀಲ್ಸ್ಗಳು ಗಮನ ಸೆಳೆಯುತ್ತಿವೆ. ಈಗಾಗಲೇ ಟ್ರೆಂಡ್ ಆಗಿರೋ ಈ ಹಾಡು ಮೂಲತಃ ತೆಲುಗಿನ ಸಿನಿಮಾವೊಂದರಲ್ಲಿ ಬಳಕೆಯಾಗಿರೋ ಸಾಂಗ್.
ಸದ್ಯ ವೈರಲ್ ಆಗಿರೋ ‘ಜಿಮ್ ಜಿಮ್ ತಾರಾ ಜಿಲೇಬಿ’ ಹಾಡು ಬಿಡುಗಡೆಗೆ ಸಿದ್ಧವಾಗಿರುವ ‘ಪರ್ಣಶಾಲ’ ಸಿನಿಮಾದದ್ದು. ಹಾರರ್ ಕಾಮಿಡಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವೈ.ಜಿ. ಭರತ್ ನಿರ್ದೇಶನ ಮಾಡಿದ್ದಾರೆ. ಎಸ್ಎಲ್ಟಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಮಂಚಿ ವೆಂಕಟ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಈಗ ಎಲ್ಲೆಲ್ಲೂ ಕೇಳಿಬರುತ್ತಿರೋ ‘ಜಿಮ್ ಜಿಮ್ ತಾರಾ’ ಹಾಡನ್ನು ಜಿ. ಲಕ್ಷ್ಮಿದೇವಿ ಅವರೇ ಬರೆದು ಹಾಡಿದ್ದಾರೆ. ಆದಿತ್ಯ ಮ್ಯೂಸಿಕ್ ಈ ಹಾಡಿನ ಪೂರ್ಣ ಆವೃತ್ತಿಯನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸೋಷಿಯಲ್ ಮೀಡಿಯಾದಲ್ಲೂ ಸಖತ್ ಸದ್ದು ಮಾಡ್ತಿದೆ.
ತಮ್ಮದೇ ಆದ ಶೈಲಿಯಲ್ಲಿ ಹಾಡುಗಳನ್ನು ಹಾಡಿ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಳ್ಳುವ ಲಕ್ಷ್ಮಿದೇವಿ ಅವರಿಗೆ ಈಗಾಗಲೇ 91 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಈ ಹಾಡಿನ ಮೂಲಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗ್ತಿದೆ.
ಒಂದ್ಕಡೆ ಹಾಡು ವೈರಲ್ ಆಗ್ತಿದ್ರೆ, ಮತ್ತೊಂದ್ಕಡೆ ‘ಪರ್ಣಶಾಲ’ ಸಿನಿಮಾ ನೋಡೋಕೆ ಪ್ರೇಕ್ಷಕರಲ್ಲೂ ಕುತೂಹಲ ಹೆಚ್ಚಾಗಿದೆ. ಹಾಡು ಸೃಷ್ಟಿಸಿರೋ ಕ್ರೇಜ್ ಸಿನಿಮಾದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ.