ಶಾಲೆಯಲ್ಲಿ ಮಕ್ಕಳನ್ನು ‘ದಡ್ಡ’, ‘ಸೋಮಾರಿ’ ಎಂದರೆ ಶಿಕ್ಷಕರಿಗೆ ಪನಿಶ್‌ಮೆಂಟ್; ಏನಿದು ಹೊಸ ನಿಯಮ? | Teachers new rule

ಶಾಲೆಗಳಲ್ಲಿ ಮಕ್ಕಳನ್ನು ‘ದಡ್ಡ’, ‘ಸೋಮಾರಿ’, ‘ನಾಲಾಯಕ್’ ಅಂತ ಹೀಯಾಳಿಸುವ ಶಿಕ್ಷಕರು ಹಾಗೂ ಸಿಬ್ಬಂದಿ ವಿರುದ್ಧ ಕೈಗೊಳ್ಳಬಹುದಾದ ಶಿಸ್ತು ಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
New rule for School teachers
ಶಾಲೆಯಲ್ಲಿ ಶಿಕ್ಷಕರಿಗೆ ಹೊಸ ನಿಯಮ
Published on: 

School Teachers New Rules: ಮಕ್ಕಳು ಓದಿನಲ್ಲಿ ಹಿಂದೆ ಇದ್ದರೆ ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಆದರೆ ಎಲ್ಲರ ಮುಂದೆ ‘ದಡ್ಡ’, ‘ಸೋಮಾರಿ’, ‘ನಾಲಾಯಕ್’ ಎಂದು ಅವಮಾನಿಸುವುದು ಸರಿಯಲ್ಲ. ಇಂತಹ ನಕಾರಾತ್ಮಕ ಮಾತುಗಳು ಮಕ್ಕಳ ಆತ್ಮವಿಶ್ವಾಸ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಈ ಹಿನ್ನೆಲೆಯಲ್ಲಿ ಮಕ್ಕಳನ್ನು ‘ದಡ್ಡ’, ‘ಸೋಮಾರಿ’, ‘ನಾಲಾಯಕ್’ ಅಂತ ಕರೆಯುವುದನ್ನು ತಡೆಯಲು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿವೆ. ಮಕ್ಕಳು ಓದಿನಲ್ಲಿ ಹಿಂದೆ ಇದ್ದರೆ ಬೈಯೋ ಬದಲು, ಅವರಿಗೆ ಅಗತ್ಯ ತರಬೇತಿ ಮತ್ತು ಸರಿಯಾದ ಮಾರ್ಗದರ್ಶನ ನೀಡಬೇಕು ಅನ್ನೋದು ಇದರ ಉದ್ದೇಶ.

‘ದಡ್ಡ’, ‘ಸೋಮಾರಿ’ ಅಂತ ಕರೆಯುವಂತಿಲ್ಲ

ಮಕ್ಕಳನ್ನು ಎಲ್ಲರ ಮುಂದೆ ಅವಮಾನಿಸುವುದರಿಂದ ಅವರ ಆತ್ಮವಿಶ್ವಾಸ ಕುಗ್ಗಬಹುದು. ನಿರಂತರವಾಗಿ ಇಂಥ ಮಾತುಗಳನ್ನು ಕೇಳುವುದರಿಂದ ಕೀಳರಿಮೆ ಮತ್ತು ಮಾನಸಿಕ ಒತ್ತಡ ಉಂಟಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳಿಗೆ ಹೆಚ್ಚುವರಿ ತರಬೇತಿ, ಬೆಂಬಲ ನೀಡಬೇಕು.

ಶಿಕ್ಷಕರು ತಪ್ಪು ಮಾಡಿದರೆ ಏನು ಕ್ರಮ?

ಮಕ್ಕಳನ್ನು ಮಾನಸಿಕವಾಗಿ ಹೀಯಾಳಿಸುವ ಶಿಕ್ಷಕರು ಅಥವಾ ಸಿಬ್ಬಂದಿ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಬಹುದು. ಮೊದಲ ಹಂತದಲ್ಲಿ ಎಚ್ಚರಿಕೆ ಅಥವಾ ಶೋಕಾಸ್ ನೋಟಿಸ್ ನೀಡುವ ಸಾಧ್ಯತೆ ಇದೆ. ತಪ್ಪು ಮತ್ತೆ ಮಾಡಿದರೆ ಅಥವಾ ಪ್ರಕರಣ ಗಂಭೀರವಾಗಿದ್ದರೆ ಅಮಾನತು ಮಾಡುವ ಕ್ರಮವೂ ಎದುರಾಗಬಹುದು. ಇಂಥ ನಡವಳಿಕೆ ಸೇವಾ ದಾಖಲೆಯಲ್ಲೂ ದಾಖಲಾಗುವ ಸಾಧ್ಯತೆಯಿದ್ದು, ಮುಂದಿನ ಬಡ್ತಿ ಸೇರಿದಂತೆ ವೃತ್ತಿಜೀವನದ ಮೇಲೂ ಪರಿಣಾಮ ಬೀರಬಹುದು.

Punishment for teachers
ಶಾಲೆಯಲ್ಲಿ ಮಕ್ಕಳನ್ನು ದಡ್ಡ ಎಂದರೆ ಶಿಕ್ಷಕರಿಗೆ ಶಿಕ್ಷೆ

ಶಾಲೆಗಳಿಗೂ ಕ್ರಮ ಸಾಧ್ಯತೆ

ಶಾಲೆಯಲ್ಲಿ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುವ ಘಟನೆಗಳು ಪದೇಪದೇ ನಡೆಯುತ್ತಿದ್ದರೆ, ಸಂಬಂಧಪಟ್ಟ ಶಾಲೆಯ ವಿರುದ್ಧವೂ ಕ್ರಮ ಕೈಗೊಳ್ಳಬಹುದು. ಪ್ರಕರಣ ಗಂಭೀರವಾಗಿದ್ದರೆ ಶಾಲೆಯ ಮಾನ್ಯತೆ ಸೇರಿದಂತೆ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಜರುಗುವ ಸಾಧ್ಯತೆಯಿದೆ.

ಆರ್‌ಟಿಇ ಕಾಯ್ದೆಯಲ್ಲೂ ಮಕ್ಕಳಿಗೆ ರಕ್ಷಣೆ

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE Act)ಯ ಸೆಕ್ಷನ್ 17ರಡಿ ಮಕ್ಕಳ ಮೇಲೆ ದೈಹಿಕ ಶಿಕ್ಷೆ ಮತ್ತು ಮಾನಸಿಕ ಕಿರುಕುಳ ನೀಡುವುದನ್ನು ನಿಷೇಧಿಸಲಾಗಿದೆ. ಇಂಥ ಘಟನೆಗಳು ನಡೆದರೆ ಪೋಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬಹುದು.

ಮಕ್ಕಳನ್ನು ತಿದ್ದಬೇಕು, ಹೀಯಾಳಿಸಬಾರದು

ಮಕ್ಕಳು ಓದಿನಲ್ಲಿ ಹಿಂದೆ ಇದ್ದರೆ ಅಥವಾ ತಪ್ಪು ಮಾಡಿದರೆ ಎಲ್ಲರ ಮುಂದೆ ಬೈಯುವ ಬದಲು, ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು ಸರಿಯಾದ ಮಾರ್ಗದರ್ಶನ ನೀಡಬೇಕು. ಶಿಕ್ಷಕರ ಮಾತು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವಂತಿರಬೇಕು ಅನ್ನೋದೇ ಈ ಕ್ರಮದ ಮುಖ್ಯ ಉದ್ದೇಶ.

ಇದನ್ನೂ ಓದಿ: ಜಿಮ್‌ಗೆ ಹೋಗ್ತೀರಾ? ಫಿಟ್ ಆಗೋಕೆ ಸಾವಿರಾರು ರೂ. ಖರ್ಚು ಮಾಡ್ಬೇಡಿ; ಈ ಸಿಂಪಲ್ ಫುಡ್‌ಗಳೇ ಸಾಕು! | Gym Diet

ಒಟ್ಟಿನಲ್ಲಿ, ಮಕ್ಕಳನ್ನು ಅವಹೇಳನಕಾರಿ ಪದಗಳಿಂದ ಕರೆದು ಮಾನಸಿಕವಾಗಿ ಕುಗ್ಗಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ತಪ್ಪಿತಸ್ಥ ಶಿಕ್ಷಕರು ಹಾಗೂ ಶಾಲೆಗಳ ವಿರುದ್ಧ ಶಿಸ್ತು ಅಥವಾ ಕಾನೂನು ಕ್ರಮ ಎದುರಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net