

Breakup: ಕೆಲ ವರ್ಷಗಳ ಡೇಟಿಂಗ್ ನಂತರ, ಬಾಲಿವುಡ್ ಲವ್ ಬರ್ಡ್ಸ್ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಇದೀಗ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೆಲ ದಿನಗಳಿಂದೆ ಈ ಬಾಲಿವುಡ್ ಜೋಡಿ ಮದುವೆಯಾಗಲಿದ್ದಾರೆ ಎಂದು ಸುದ್ದಿ ಕೂಡ ಹರಿದಾಡುತ್ತಿತ್ತು. ಅಲ್ಲದೇ, ಅಭಿಮಾನಿಗಳು ಕೂಡ ಹೊದಲ್ಲೆಲ್ಲಾ, ಮದುವೆ ಯಾವಾಗ? ಎಂದು ಕೇಳುತ್ತಿದ್ದರು. ಆದರೆ, ಇದೀಗ ಈ ಘಟನೆ ( ಬೇರ್ಪಡುವಿಕೆ) ಫ್ಯಾನ್ಸ್ಗೆ ಆಘತಕಾರಿ ಸುದ್ದಿಯಾಗಿದೆ. ಕೆಲದಿನಗಳಿಂದ ಈ ಇಬ್ಬರ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ಇಬ್ಬರ ಜೋಡಿ ಇರುವ ಫೊಟೋಗಳನ್ನು ಹಳಸಿ ಹಾಕಿದ್ದಾರೆ. ಈ ಹಿನ್ನೆಲೆ ಈ ವರದಿಗೆ ಇನಷ್ಟು ಪುಷ್ಠಿ ನೀಡಿದೆ.
ಇನ್ನು ವರದಿಗಳ ಪ್ರಕಾರ ಅವರು ಪರಸ್ಪರ ಗೌರವ ಮತ್ತು ಅಭಿಮಾನವನ್ನು ಮುಂದುವರಿಸುತ್ತಾರೆ ಮತ್ತು ಉತ್ತಮ ಸ್ನೇಹಿತರಾಗಿ ಉಳಿಯಲು ಯೋಜಿಸುತ್ತಾರೆ ಎಂದು ಹೇಳಲಾಗಿದೆ.
ಲಸ್ಟ್ ಸ್ಟೋರೀಸ್-2 ಚಿತ್ರೀಕರಣದ ಸಮಯದಲ್ಲಿ ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡ ನಂತರ ಅವರ ಸಂಬಂಧದ ಬಗ್ಗೆ ವದಂತಿಗಳು ಹರಡಲು ಪ್ರಾರಂಭಿಸಿದವು. ಆದರೆ, ಚಿತ್ರದ ಶೂಟಿಂಗ್ ಸಮಯದಲ್ಲಿ ತಾವು ಡೇಟಿಂಗ್ ಆರಂಭಿಸಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದರು.
ಆದರೆ, 2024ರ ಜೂನ್ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ, ವಿಜಯ್ ಜೊತೆಗಿನ ತನ್ನ ಪ್ರಣಯವನ್ನು ಅಧಿಕೃತವಾಗಿ ದೃಢಪಡಿಸಿದರು. ಅಂದಿನಿಂದ ಸಾಮಾಜಿಕ ಜಾಲತಾಣದಲಲ್ಲಿ ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡುತ್ತಾರೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ.(ಏಜೆನ್ಸೀಸ್)