

Sandalwood:ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ. ಟ್ವಿನ್ ಸಿಸ್ಟರ್ ಸದಾ ಒಟ್ಟಿಗೆ ಇರುತ್ತಾರೆ ಒಂದೇ ರೀತಿ ಡ್ರೆಸ್ ಧರಿಸುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ.
ತೆರೆಯ ಮೇಲೆ ತೋರಿಸಿಷ್ಟು ನಮಗೆ ಒಂದೇ ರೀತಿ ಅನಿಸುವುದಿಲ್ಲ ಆದರೆ ಸಣ್ಣ ಪುಟ್ಟ ವಿಚಾರಗಳಲ್ಲಿ ಮ್ಯಾಚ್ ಅಗಿದೆ. ನಮ್ಮಿಬ್ಬರ ಮೂಡ್ ಸ್ವಿಂಗ್, ತಿನ್ನಲು ಆಸೆ ಪಡುವ ಆಹಾರಗಳು ಒಂದೇ ಇರುತ್ತದೆ ಎಂದು ಈ ಹಿಂದೆ ಟ್ವಿನ್ಸ್ ಹೇಳಿದ್ದರು. ಇದೀಗ ಹೊಸ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿಯರಿಬ್ಬರು ಸಾಮಾಜಿ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಆದರಂತೆ, ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಈ ಟ್ವಿನ್ಸ್ ತಮ್ಮ ತಂದೆ ಸತ್ತ ನಂತರ ಮನೆಯಲ್ಲಿ ಆತ್ಮ ಕಂಡು ಬೆಚ್ಚಿಬಿದ್ದಿದ್ದೇವೆ ಎಂದು ಆಶ್ಚರ್ಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ವಿನ್ಸ್, ''ಅಪ್ಪ ಸತ್ತ ಬಳಿಕ ಅವರ ಆತ್ಮವನ್ನು ನೋಡಿದ್ದೇವೆ. ಅಲ್ಲದೇ, ಅವರು ಅವರು ಸತ್ತಾಗ ಧರಿಸಿದ್ದ ಅದೇ ಪಂಚೆ ಮತ್ತು ಶರ್ಟ್‌ನಲ್ಲಿ ಹೇಗೆ ಕಾಣಿಸಿದ್ದರೋ, ಅದೇ ರೀತಿ ಅವರ ನೆರಳನ್ನು ನೋಡಿದ್ದೇವೆ ಎಂದಿದ್ದಾರೆ ಅವಳಿ ಸಹೋದರಿಯರು''.
ಅಪ್ಪ ಸತ್ತಾಗ ಅವರ ತುಂಬಾ ನೆಚ್ಚಿನ ಕುರ್ಚಿ ಇತ್ತು ಮನೆಯಲ್ಲಿ ಅದರಲ್ಲಿ ಕೂರಿಸಿದ್ವಿ. ಅಪ್ಪನ ಕಾರ್ಯ ಎಲ್ಲವೂ ಮುಗಿದ ಮೇಲೆ ಆ ಚೇರ್‌ನ್ನು ಯಾರೋ ಅಡುಗೆ ಮನೆಯ ಒಳಗಡೆ ಇಟ್ಟು ಬಿಟ್ಟಿದ್ದರು. ರಾತ್ರಿ ನಾವು ಹೀಗೆ ಸೋಫಾ ಮೇಲೆ ಕೂತುಕೊಂಡಿದ್ದಾಗ, ಯಾರೋ ಕಿಚನ್ ಒಳಗೆ ಹೋದಂತೆ ಆಯ್ತು. ಅಷ್ಟಕ್ಕೂ ಅದು ನಮ್ಮ ಅಪ್ಪನೇ ಎಂದು ನಮಗೆ ಇಂದಿಗೂ ಅನಿಸುತ್ತದೆ. ಅದನ್ನ ನೆನೆಸಿಕೊಂಡರೆ ಇಂದಿಗೂ ಭಯ ಆಗುತ್ತೆ ಎಂದಿದ್ದಾರೆ.
ಅಪ್ಪನಲ್ಲಿ ಇದ್ದಂತಹ ಸನ್ನೆಗಳನ್ನು ನಮ್ಮ ಸಾಕು ನಾಯಿಯಲ್ಲಿ ನೋಡುತ್ತಿದ್ವಿ. ಅದೊಂದು ವಿಚಿತ್ರ ಅನುಭವ. ಅಪ್ಪ ಸತ್ತ 11 ದಿನಗಳಲ್ಲಿ ಈ ರೀತಿಯ ಸಾಕಷ್ಟು ಅನುಭವಗಳಾಗಿವೆ. ಈಗಲೂ ಕೆಲ ಅನುಭವಗಳಾಗುತ್ತೆ. ಈಗಲೂ ನಮ್ಮ ಅಪ್ಪ ನಮ್ಮ ಜೊತೆಯಲ್ಲೇ ಇದ್ದಾರೆ ಎಂದು ತಮಗಾದ ವಿಚಿತ್ರ ಅನುಭವನ್ನು ನಟಿ ಅಶ್ವಿತಿ ಮತ್ತು ಅದ್ವಿತಿ ಶೆಟ್ಟಿ ಹಂಚಿಕೊಂಡಿದ್ದಾರೆ.