ಹೆಣ್ಣು ಮಗು ಹುಟ್ಟಿದ್ದಕ್ಕೆ ಇಂಥ ಸಂಭ್ರಮ! ತಂದೆಯ ನಡೆಗೆ ನೆಟ್ಟಿಗರ ಮೆಚ್ಚುಗೆ | Father Donates Money

ಮಗಳು ಹುಟ್ಟಿದ ಖುಷಿಯಲ್ಲಿ ಮಗುವಿನ ತೂಕಕ್ಕೆ ಸಮನಾದ ಹಣವನ್ನು ದಾನ ಮಾಡಿದ ತಂದೆ. ಅವರ ಈ ವಿಶೇಷ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Father Donates Money, Newborn Baby Girl
ಮಗಳ ತೂಕಕ್ಕೆ ಸಮನಾದ ಹಣ ದಾನ!
Published on: 

Daughter Weight Donation: ಮಗು ಹುಟ್ಟಿದ ಖುಷಿಗೆ ಸಿಹಿ ಹಂಚಿ, ಉಡುಗೊರೆ ಕೊಟ್ಟು ಸಂಭ್ರಮಿಸೋದು ಸಾಮಾನ್ಯ. ಆದ್ರೆ, ಇಲ್ಲೊಬ್ಬ ತಂದೆ ತಮ್ಮ ಮಗಳ ಜನನದ ಸಂಭ್ರಮಕ್ಕೆ ವಿಶೇಷ ಅರ್ಥ ನೀಡಿದ್ದಾರೆ. ಇಂದಿಗೂ ಕೆಲವೆಡೆ ಹೆಣ್ಣು ಮಗು ಹುಟ್ಟಿದರೆ ಚಿಂತೆ ಮಾಡುವ ಮನಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ, ನವಜಾತ ಮಗಳ ತೂಕಕ್ಕೆ ಸಮನಾದ ಹಣವನ್ನು ದಾನ ಮಾಡುವ ಮೂಲಕ ಈ ತಂದೆ ಗಮನ ಸೆಳೆದಿದ್ದಾರೆ. ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಗಳು ಹುಟ್ಟಿದ ಖುಷಿಯನ್ನು ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದ ತಂದೆ, ಇತರರಿಗೂ ಸಹಾಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಅವರ ಈ ವಿಶೇಷ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ. ಹಲವರು ತಂದೆಯ ಒಳ್ಳೆಯ ಮನಸ್ಸನ್ನು ಹೊಗಳಿದ್ದಾರೆ.

ಮಗಳ ತೂಕಕ್ಕೆ ಸಮನಾದ ಹಣ ದಾನ

ಮಗು ಹುಟ್ಟಿದಾಗ ಸಿಹಿ ಹಂಚಿ, ಉಡುಗೊರೆ ಕೊಟ್ಟು ಸಂಭ್ರಮಿಸುವುದು ಸಾಮಾನ್ಯ. ಆದರೆ, ಈ ತಂದೆ ತಮ್ಮ ಮಗಳ ತೂಕಕ್ಕೆ ಸಮನಾದ ಹಣವನ್ನು ದಾನ ಮಾಡುವ ಮೂಲಕ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಮಗಳ ಆಗಮನದ ಖುಷಿಯನ್ನು ಇತರರೊಂದಿಗೂ ಹಂಚಿಕೊಂಡಿದ್ದಾರೆ. ಅವರ ಈ ವಿಭಿನ್ನ ನಡೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಹೆಣ್ಣು ಮಗು ಹುಟ್ಟಿದರೂ ಸಂಭ್ರಮಿಸಿ!

ಹೆಣ್ಣು ಮಗು ಹುಟ್ಟಿದರೆ ಸಾಕು, ಚಿಂತೆ ಮಾಡುವವರ ನಡುವೆ, ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಷ್ಟೇ ಪ್ರೀತಿ, ಗೌರವ ಕೊಡಬೇಕು. ಆದ್ರೆ, ಇಂದಿಗೂ ಕೆಲವೆಡೆ ಹೆಣ್ಣು ಮಗು ಹುಟ್ಟಿದಾಗ ಅಷ್ಟಾಗಿ ಸಂಭ್ರಮಿಸದವರಿದ್ದಾರೆ. ಇಂಥ ಸಂದರ್ಭದಲ್ಲಿ, ಮಗಳು ಹುಟ್ಟಿದ ಖುಷಿಗೆ ಹಣ ದಾನ ಮಾಡಿರುವ ಈ ತಂದೆಯ ನಡೆ ಮೆಚ್ಚುವಂಥದ್ದು. ಹೆಣ್ಣು ಮಗುವಿನ ಆಗಮನವನ್ನೂ ಸಂತೋಷದಿಂದ ಸ್ವಾಗತಿಸಿ, ಪ್ರೀತಿಯಿಂದ ಬೆಳೆಸಬೇಕು ಅನ್ನೋ ಸಂದೇಶವನ್ನು ಈ ಘಟನೆ ಸಾರುತ್ತದೆ.

ಇದನ್ನೂ ಓದಿ: Social Comparison Theory: ಎಲ್ಲವೂ ಇದ್ರೂ ಖುಷಿ ಇಲ್ವಾ? ಬೇರೆಯವರ ಜೀವನ ನೋಡಿ ನೆಮ್ಮದಿ ಕಳೆದುಕೊಳ್ತಿದ್ದೀರಾ?

ಸಂತಸದ ಜತೆ ಮಾನವೀಯತೆ

ಮಗುವಿನ ಜನನದ ಖುಷಿಯನ್ನು ಮಗಳ ತೂಕಕ್ಕೆ ಸಮನಾದ ಹಣ ದಾನ ಮಾಡುವ ಮೂಲಕ ಈ ತಂದೆ ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ತಮ್ಮ ಸಂತಸವನ್ನು ಇತರರೊಂದಿಗೂ ಹಂಚಿಕೊಂಡು, ಮಾನವೀಯತೆ ಮತ್ತು ಉದಾರತೆಗೆ ಮಾದರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net