ಸುರಕ್ಷತಾ ಕವಚ ಧರಿಸಿ ಕೆಲಸ ಮಾಡಿ

ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಮಾನಪ್ಪ ಗೋನಾಲ್ ಶುಕ್ರವಾರ ಬೆಳ್ಳಂ ಬೆಳಗ್ಗೆ ಪೌರಕಾರ್ಮಿಕರ ಸ್ವಚ್ಛತಾ ಕರ‍್ಯವನ್ನು ಪರಿಶೀಲಿಸಿದರು. ಮರೆಪ್ಪ ಹಸನಾಪುರ, ಕಾಸೀಮ್‌ಸಾಬ್ ನದಾಫ್ ಇತರರಿದ್ದರು.
ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಮಾನಪ್ಪ ಗೋನಾಲ್ ಶುಕ್ರವಾರ ಬೆಳ್ಳಂ ಬೆಳಗ್ಗೆ ಪೌರಕಾರ್ಮಿಕರ ಸ್ವಚ್ಛತಾ ಕರ‍್ಯವನ್ನು ಪರಿಶೀಲಿಸಿದರು. ಮರೆಪ್ಪ ಹಸನಾಪುರ, ಕಾಸೀಮ್‌ಸಾಬ್ ನದಾಫ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೌರಕಾರ್ಮಿಕರಿಗೆ ಮುಖ್ಯಾಧಿಕಾರಿ ಗೋನಾಲ್ ಸಲಹೆ
  • ಕಕ್ಕೇರಾದಲ್ಲಿ ಬೆಳ್ಳಂ ಬೆಳಗ್ಗೆ ಸ್ವಚ್ಛತಾ ಕಾರ್ಯ ಪರಿಶೀಲನೆ
ಕಕ್ಕೇರಾ: ಪೌರಕಾರ್ಮಿಕರು ನಿಮ್ಮ ಸುರಕ್ಷತೆ ಹಿತದೃಷ್ಟಿಯಿಂದ ಕೆಲಸ ಮಾಡುವ ವೇಳೆ ಕಡ್ಡಾಯವಾಗಿ ಸುರಕ್ಷತಾ ಕವಚ ಧರಿಸಿ ಕೆಲಸ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಾನಪ್ಪ ಗೋನಾಲ್ ಹೇಳಿದರು.
ಶುಕ್ರವಾರ ಬೆಳ್ಳಂ ಬೆಳಗ್ಗೆ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದ ಅವರು, ಕಿಲ್ಲೇದಗಡ್ಡಿಯಲ್ಲಿ ಸುಮಾರು ಆರೇಳು ಪೌರಕಾರ್ಮಿಕರು ಚರಂಡಿಯಲ್ಲಿನ ತ್ಯಾಜ್ಯ ಹೊರ ತೆಗೆಯುವ ಮತ್ತು ಕಸ ವಿಲೇವಾರಿ ಮಾಡುವ ವೇಳೆ ಕಾರ್ಮಿಕರು ಕೈಗೆ ಸುರಕ್ಷತಾ ಕವಚ ಹಾಕದಿರುವನ್ನು ಗಮನಿಸಿ ಪ್ರತಿಯೊಬ್ಬ ಕಾರ್ಮಿಕರು ಸಮವಸö ಹಾಕಿಕೊಳ್ಳಬೇಕು. ಅಲ್ಲದೆ ಕೈಗೆ ಮತ್ತು ಕಾಲಿಗೆ ಕಡ್ಡಾಯವಾಗಿ ಸುರಕ್ಷತಾ ಕವಚವನ್ನು ಬಳಸುವ ಮೂಲಕ ನಿಮ್ಮ ಆರೋಗ್ಯ ಕೂಡ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಮಿಕರು ಪ್ರತಿದಿನ ಎಲ್ಲ ವಾರ್ಡ್ಗಳಲ್ಲಿ ಕಡ್ಡಾಯವಾಗಿ ಕಸ ಗೂಡಿಸಬೇಕು. ಒಳಚರಂಡಿಗಳಲ್ಲಿ ಕಸ-ಕಡ್ಡಿ ಮಣ್ಣು ತುಂಬಿದ್ದಲ್ಲಿ ಹೊರತೆಗೆದು ಚರಂಡಿಯ ನೀರು ಸರಾಗವಾಗಿ ಹರಿಯುವಂತಾಬೇಕೇ ವಿನಃ ಚರಂಡಿ ನೀರು ರಸ್ತೆಗೆ ಬಂದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದAತೆ ಗಮನ ಹರಿಸಬೇಕು ಎಂದು ಹೇಳಿದರು.
ಮುಖ್ಯಾಽಕಾರಿಯಾದ ಬಳಿಕ ಮಾನಪ್ಪ ಗೋನಾಲ್ ಅವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪುರಸಭೆಯ ಅನುಮತಿ ಇಲ್ಲದೆ ಕೆಲವರು ಡಬ್ಬಾ ಅಂಗಳನ್ನಿಟ್ಟು ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲವಾದಾಗ ಜೆಸಿಬಿ ಮೂಲಕ ತೆರವುಗೊಳಿಸಿದ್ದರು. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರು ಪುರಸಭೆ ಗಮನಕ್ಕೆ ತರದೆ ತಮ್ಮ ಕಾಂಪ್ಲೆಕ್ಸ್ ಹಿಂದುಗಡೆ ಸರ್ಕಾರಿ ಜಾಗ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸುತ್ತಿರುವುದನ್ನು ಮುಲಾಜಿಲ್ಲದೆ ತೆರವುಗೊಳಿಸಿದ್ದರು.
ಪುರಸಭೆ ಸಿಬ್ಬಂದಿ ತಮ್ಮ ವ್ಯಾಪ್ತಿಯ ಎಲ್ಲ ಮನೆಗಳಿಗೆ ಹಾಗೂ ಅಂಗಡಿಗಳಿಗೆ ತೆರಳಿ ಕರವಸೂಲಿ ಮಾಡುವ ಜತೆಗೆ ಅಂಗಡಿಗಳಿಗೆ ತೆರಳಿ ಅಂಗಡಿ ಮಾಲೀಕರಿಗೆ ಲೈಸನ್ಸ್ ಪಡೆಯುವಂತೆ ತಿಳಿ ಹೇಳಲಾಗುತ್ತಿದೆ. ಪರಿಶೀಲನೆ ವೇಳೆ ಪುರಸಭೆ ಸಿಬ್ಬಂದಿ ಮರೆಪ್ಪ ಹಸನಾಪುರ ಮತ್ತು ಕಾಸೀಮ್‌ಸಾಬ್ ನದಾಫ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net