ಕಾರ್ಯಕ್ರಮದಲ್ಲಿ ರಾಜ್ಯದ ಒಟ್ಟು (1,34,025 ಲೈಂಗಿಕ ಕಾರ‌್ಯಕರ್ತೆಯರನ್ನು, 62,939 ಲೈಂಗಿಕ ಅಲ್ಪಸಂಖ್ಯಾತರನ್ನು 12,656 ಲಿಂಗತ್ವ ಅಲ್ಪಸಂಖ್ಯಾತರನ್ನು (ಟ್ರಾನ್ಸ್ ಜಿಂಡರ್ಸ್), ಮತ್ತು 3,367 ಮಾದಕ ವ್ಯಸನಿಗಳಿಗಾಗಿ ಕೋಲಾರ ಮತ್ತು ಬೆಂಗಳೂರಿನಲ್ಲಿ ಗುರಿ ನಿರ್ಧಾರಿತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಜತೆಗೆ ಎರಡು ಒಎಸ್‌ಟಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಗೆಯೇ ಯಾದಗಿರಿ, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ತಲಾ ಒಂದರಂತೆ ಮೂರು ಒನ್ ಸ್ಟಾಪ್ ಸೆಂಟರ್ ತೆರೆಯಲಾಗಿದೆ.