ಬಸವಕಲ್ಯಾಣ: ಹನ್ನೆರಡನೇ ಶತಮಾನದ ಶರಣರ ವಚನ ಸಾಹಿತ್ಯವು ಮಾನವನ ಜೀವನವನ್ನು ದಿವ್ಯವಾಗಿಸುವ ಶಕ್ತಿ ಹೊಂದಿದೆ ಎಂದು ಡಾ.ಸವಿತಾ ಯರನಳ್ಳೆ ಹೇಳಿದರು. ನಗರದಲ್ಲಿ ಬಸವಧರ್ಮ ಪೀಠ, ಮಹಾಮನೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 6ನೇ ಶರಣ ಸಂಗಮ ಕಾರ್ಯಕ್ರಮದದಲ್ಲಿ ಅನುಭಾವ ನೀಡಿದ ಅವರು, ಶರಣರು ತಮ್ಮ ನಿಜ ಜೀವನದಲ್ಲಿ ಮೌಲ್ಯಾದಾರಿತ ಬಾಳುವೆ ಮಾಡಿದ್ದರು. ನಡೆ ನುಡಿ ಒಂದಾದ ಹೃದಯಾಂತರಾಳದ ಅನುಭವದ ನುಡಿಯೇ ವಚನ ಸಾಹಿತ್ಯ. ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದ್ದು, ಹೆಚ್ಚಿನ ಪ್ರಚಾರ-ದ ಅವಶ್ಯಕತೆ ಇದೆ ಎಂದರು. ಮಧ್ಯಾಹ್ನ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸಂಜೀವಕುಮಾರ ಕಾಂಗೆ ಕಾರ್ಯಕ್ರಮ ಉದ್ಘಾಟಿಸಿದರು. ಸಾನ್ನಿಧ್ಯ ವಹಿಸಿದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾತೆ ಬಸವರತ್ನ ಮಾತಾಜಿ ಸಮ್ಮುಖ ವಹಿಸಿದರು. ಮಾತೆ ಲಾವಣ್ಯ ಮಾತಾಜಿ ಮಾತನಾಡಿದರು. ಶಿವರಾಜ ನೀಲಕಂಠೆ ಸ್ವಾಗತಿಸಿದರು. ರಾಣಿ ವಡ್ಡೆ ನಿರೂಪಣೆ ಮಾಡಿದರು. ಮಮತಾ ಬುಸೆ ವಚನಗಾಯನ ಮಾಡಿದರು.
ವಚನ ಸಾಹಿತ್ಯವು ಕೇವಲ ಧಾರ್ಮಿಕ ಗ್ರಂಥವಲ್ಲ. ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ, ನೈತಿಕ ಮೌಲ್ಯಗಳ ಬೆಳವಣಿಗೆಗೆ ಹಾಗೂ ಏಕಾಗ್ರತೆಯನ್ನು ಬೆಳೆಸುವ ಜೀವನ ಮಾರ್ಗದರ್ಶಿಯಾಗಿದೆ. ಇಂದಿನ ವಿದ್ಯಾರ್ಥಿಗಳು ಅನೇಕ ಆಕರ್ಫಿಣೆಗಳು ಮತ್ತು ಗೊಂದಲಗಳ ನಡುವೆ ಬದುಕುತ್ತಿದ್ದಾರೆ. ಈ ಸಂದರ್ಭದಲ್ಲಿ ವಚನಗಳ ಸಂದೇಶವು ಅವರ ಮನಸ್ಸನ್ನು ಸ್ಥಿರಗೊಳಿಸಿ ಗುರಿಯತ್ತ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ದಯೆ, ಕರುಣೆ, ಅನುಕಂಪ, ಪ್ರೀತಿ, ಸ್ನೇಹ, ವಾತ್ಸಲ್ಯ, ಕಾಯಕ ಮತ್ತು ದಾಸೋಹದಂತಹ ಸಾರ್ವಕಾಲಿಕ ಮೌಲ್ಯಗಳನ್ನು ಬಿತ್ತುವ ವಚನಗಳು ವಿದ್ಯಾರ್ಥಿಗಳ ಬದುಕಿಗೆ ಅಕ್ಷರಶ@ ದಾರಿದೀಪವಾಗಿವೆ ಎಂದು ಹೇಳಿದರು.