ಇದು ನ್ಯೂಯಾರ್ಕ್ ಅಲ್ಲ, ನಮ್ಮ ಬೆಂಗಳೂರು!: ಐಟಿ ಪಾರ್ಕ್ ನೋಡಿ ಮರುಳಾದ ಮರಾಠಿ ಯುವಕ; ವಿಡಿಯೋ ವೈರಲ್! Viral

ಸಾಗರ್ ಸೋನಾವಾನೆ ಮತ್ತು ಬೆಂಗಳೂರು
ಸಾಗರ್ ಸೋನಾವಾನೆ ಮತ್ತು ಬೆಂಗಳೂರು
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರನ್ನು ನ್ಯೂಯಾರ್ಕ್​ಗೆ ಹೋಲಿಸಿದ ಮರಾಠಿ ಯುವಕ
  • ಐಟಿ ಪಾರ್ಕ ನೋಡಿ ಮರುಳಾದ ಪುಣೆಯ ಹುಡುಗ
  • ಇಲ್ಲಿರುವ ಮೂಲಸೌಕರ್ಯ ಪುಣೆಗೆ ಎಂದು ಬರಲಿದೆ ಎಂದು ಪ್ರಶ್ನೆ
ಬೆಂಗಳೂರು: ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಬೆಂಗಳೂರಿನ ಐಟಿ ಪಾರ್ಕ್​ನ್ನು ನ್ಯೂಯಾರ್ಕ್‌ಗೆ ಹೋಲಿಸಿ ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್​ ವೈರಲ್​ (Viral) ಆಗುತ್ತಿದೆ.

ಎಸ್ಕಲೇಟರ್‌, ಫುಟ್‌ಪಾತ್‌ ಮತ್ತು ಹಸಿರಿನಿಂದ ಕೂಡಿದ ಪರಿಸರ

ಸಾಗರ್ ಸೋನಾವಾನೆ ಎಂಬ ವ್ಯಕ್ತಿಯು ಈ ವಿಡಿಯೋದ ಸೃಷ್ಟಿಕರ್ತನಾಗಿದ್ದು, ಮರಾಠಿಯಲ್ಲಿ ಮಾತನಾಡುತ್ತಾ, ಸೋನಾವಾನೆ ವೀಕ್ಷಕರನ್ನು ಸ್ವಾಗತಿಸುವ ಮೂಲಕ ನಾನೀಗ ನ್ಯೂಯಾರ್ಕ್‌ನ ಐಟಿ ಪಾರ್ಕ್‌ನಲ್ಲಿದ್ದೇನೆ ಎಂದು ಹೇಳುತ್ತಾನೆ.
ಕ್ಯಾಮೆರಾವನ್ನು ಸುತ್ತಲೂ ತಿರುಗಿಸುತ್ತಾ ಇಲ್ಲಿಯ ಜನರಿಗೆ ರಸ್ತೆದಾಟಲು ಸಮಸ್ಯೆಯಾಗದಿರಲಿ ಎಂದು ಸ್ಕೈವಾಕ್​ ಮತ್ತು ಎಸ್ಕಲೇಟರ್ ವ್ಯವಸ್ಥೆಯನ್ನು ಮಾಡಿದ್ದಾರೆ. ಇಲ್ಲಿನ ಫುಟ್‌ಪಾತ್​ಗಳು ಸಹ ತುಂಬಾ ಚೆನ್ನಾಗಿವೆ ಮತ್ತು ಇಲ್ಲಿ ಸುತ್ತಲೂ ಹಸಿರು ಪರಿಸರ ಇರುವುದನ್ನು ನೀವು ಗಮನಿಸಬಹುದು ಎಂದು ಹೇಳಿದ್ದಾನೆ.
https://www.instagram.com/reel/DTPBQSJDImg/?utm_source=ig_web_copy_link&igsh=MzRlODBiNWFlZA==

ಇದು ನ್ಯೂಯಾರ್ಕ್ ಅಲ್ಲ; ಬೆಂಗಳೂರು

ವೀಡಿಯೊದ ಮಧ್ಯದಲ್ಲಿ, ಸೋನಾವಾನೆ ನಾನು ನಿಮ್ಮಲ್ಲಿ ತಮಾಷೆ ಮಾಡಿದೆ ಇದು ನ್ಯೂಯಾರ್ಕ್ ಅಲ್ಲ, ಬೆಂಗಳೂರಿನಲ್ಲಿರುವ ಐಟಿ ಪಾರ್ಕ್ ಎಂದು ಸ್ಪಷ್ಟಪಡಿಸುತ್ತಾನೆ. ಈ ಪ್ರದೇಶವು ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶ ಎಂದು ವಿವರಿಸುತ್ತಾ, ಪುಣೆಯಲ್ಲಿ ಸಹ ರೀತಿಯ ಮೂಲಸೌಕರ್ಯ ಯಾವಾಗ ಲಭ್ಯವಾಗುತ್ತದೆ? ಎಂದು ಪ್ರಶ್ನಿಸಿದ್ದಾನೆ.

ಆನ್‌ಲೈನ್ ಪ್ರತಿಕ್ರಿಯೆಗಳು

ಸಾಗರ್ ಸೋನಾವಾನೆ ಹಂಚಿಕೊಂಡಿರುವ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಆನ್‌ಲೈನ್‌ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಸೆಳೆದಿದೆ.
ಒಬ್ಬ ಬಳಕೆದಾರರು, ಯೋಜಿತ ಮೂಲಸೌಕರ್ಯ ಹೇಗೆ ಕಾಣುತ್ತದೆ ಮತ್ತು ಬೆಂಗಳೂರು ಏಕೆ ಅನೇಕ ವೃತ್ತಿಪರರನ್ನು ಆಕರ್ಷಿಸುತ್ತದೆ ಎಂದು ತಿಳಿಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪುಣೆಗೆ ಈ ರೀತಿಯ ಪಾದಚಾರಿ ಮಾರ್ಗ ಮತ್ತು ಸುರಕ್ಷಿತ ಕ್ರಾಸಿಂಗ್‌ಗಳು ತುರ್ತಾಗಿ ಅಗತ್ಯವಿದೆ ಎಂದು ಬರೆದಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net