ಸಿಎಂ ಆದ ನನ್ನನ್ನೇ ಟ್ರ್ಯಾಪ್ ಮಾಡಲು ಬಂದಿದ್ದರು, ಎಲ್ಲ ದಾಖಲೆ ನನ್ನ ಬಳಿಯಿದೆ: ಸ್ಟಿಂಗ್ ಆಪರೇಷನ್ ಬಗ್ಗೆ ಡಿಕೆಶಿ ಸ್ಫೋಟಕ ಹೇಳಿಕೆ! | CM DK Shivakumar

ದೆಹಲಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಮಹತ್ವದ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸ್ವತಃ ತಮ್ಮನ್ನೇ ಟ್ರ್ಯಾಪ್ ಮಾಡಲು ಬಂದಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಇಂದು ದೆಹಲಿಯಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಈ ಸ್ಟಿಂಗ್ ಆಪರೇಷನ್ ತಮ್ಮ ವಿರುದ್ಧವೇ ಮೊದಲು ಆರಂಭವಾಗಿತ್ತು, ಇದರ ಹಿಂದೆ ಇರುವವರ ಬಗ್ಗೆಯೂ ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ.
 ಮುಖ್ಯಮಂತ್ರಿ ಡಿ ಕೆ ಶಿವಕುಮಾರ್
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್
Published on: 

ದೆಹಲಿ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಬಗ್ಗೆ ಮಹತ್ವದ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸ್ವತಃ ತಮ್ಮನ್ನೇ ಟ್ರ್ಯಾಪ್ ಮಾಡಲು ಬಂದಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಇಂದು ದೆಹಲಿಯಲ್ಲಿ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಈ ಸ್ಟಿಂಗ್ ಆಪರೇಷನ್ ತಮ್ಮ ವಿರುದ್ಧವೇ ಮೊದಲು ಆರಂಭವಾಗಿತ್ತು, ಇದರ ಹಿಂದೆ ಇರುವವರ ಬಗ್ಗೆಯೂ ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ.

ತಮ್ಮ ಹತ್ತಿರಕ್ಕೆ ಕೆಲವರು ಬಂದಿದ್ದರು, ಚರ್ಚೆಗೆಂದು ಬಂದ ಅವರು ಏನೇನು ಮಾಡಿದರು ಎಂಬುದು ತಮಗೆ ಚೆನ್ನಾಗಿ ಗೊತ್ತಿದೆ, ಫೋಟೋಗಳು ಬೇಕಿದ್ದರೆ ಕೊಡುತ್ತೇನೆ, ಇದರ ಹಿಂದೆ ಇರುವ ಪಿತಾಮಹ ಯಾರು, ಹಣಕಾಸು ನೆರವು ನೀಡುತ್ತಿರುವವರು ಯಾರು ಎಂಬ ಮಾಹಿತಿ ತಮ್ಮ ಬಳಿ ಇದೆ ಎಂದು ಹೇಳಿದರು. ತಾವು ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವುದರಿಂದ ಸುಮ್ಮನೆ ಯಾವುದೇ ಮಾತುಗಳನ್ನು ಆಡುವುದಿಲ್ಲವೆಂದು ತಿಳಿಸಿದ ಸಿಎಂ, ಕುಂಬಳಕಾಯಿ ಕಳ್ಳ ಅಂದರೆ ಕೆಲವರು ಹೆಗಲು ಮುಟ್ಟುಕೊಂಡಂತೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕರ ಬಗ್ಗೆ ವ್ಯಂಗ್ಯವಾಡಿದರು. ಇದರೊಂದಿಗೆ, ತಮ್ಮ ಪಕ್ಷದವರಿಗೆ ಈಗಾಗಲೇ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಇದನ್ನೂ ಓದಿ:ನೈಸ್ ನಮ್ಮ ಕೂಸೇ, ಆದ್ರೆ ಸೂಲಗಿತ್ತಿ ಯಾರು..? ಸಿಎಂ ವಿರುದ್ಧ ಎಚ್‌ಡಿಕೆ ವಾಗ್ದಾಳಿ: ಸ್ಟಿಂಗ್​ ಆಪರೇಷನ್ ಬಗ್ಗೆಯೂ ಗಂಭೀರ ಆರೋಪ! | HD Kumarswamy

ಎಸ್​ಐಆರ್​ ಬಗ್ಗೆ ಸಿಎಂ ಹೇಳಿದ್ದಿಷ್ಟು!

ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಬಂದಿದ್ದು, ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ ಮತ್ತು ಇಂದಿನ ಸಭೆಯಲ್ಲಿ ರಾಜ್ಯದ ಹಿತಕ್ಕಾಗಿ ಉತ್ತಮ ವಿಚಾರಗಳನ್ನು ಪ್ರಸ್ತಾಪಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ರಾಜ್ಯದಲ್ಲಿ ಎಸ್‌ಐಆರ್‌ನಲ್ಲಿ ಫಾರಂ 7 ಹೇಗೆ ದುರ್ಬಳಕೆಯಾಗಿದೆ ಎನ್ನುವ ಸಂಪೂರ್ಣ ದಾಖಲೆಗಳನ್ನು ತಾವೇ ಜೊತೆಗೆ ತಂದಿದ್ದು, ಹೈಕಮಾಂಡ್ ಗಮನಕ್ಕೆ ತರಲು ಎಲ್ಲಾ ತರಹದ ಮಾಹಿತಿಯನ್ನು ನೀಡಲಿರುವುದಾಗಿ ಸ್ಪಷ್ಟಪಡಿಸಿದರು.

ಎಸ್​ಐಆರ್​ ಅಕ್ರಮದ ಬಗ್ಗೆ ಯಾಕೆ ಕೇಸ್ ಹಾಕುತ್ತೀರಿ ಎಂದು ಬಿಜೆಪಿ ನಾಯಕರು ಕೇಳುತ್ತಿದ್ದಾರೆ, ಆದರೆ ಬಿಜೆಪಿಯವರು ನೀಚಗೆಟ್ಟ ಕ್ರಿಮಿನಲ್ ಕೆಲಸ ಮಾಡಿದ್ದಾರೆ. ರಾಜ್ಯಪಾಲರ ಭೇಟಿಯಾದ ನಾಯಕರೇ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ, ತಮ್ಮ ಹೆಸರು ಬಯಲಿಗೆ ಬರುತ್ತದೆ ಎಂಬ ಭಯದಿಂದ ಅವರು ತನಿಖೆಯಾಗಬಾರದು ಎಂದು ಬಯಸುತ್ತಿದ್ದಾರೆ ಎಂದು ಸಿಎಂ ಡಿಕೆಶಿ ಆರೋಪಿಸಿದರು. ತನಿಖೆ ಆಗಬಾರದೇಕೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ತಾನು ಇದರ ಬಗ್ಗೆ ಕಡ್ಡಾಯವಾಗಿ ವಿಚಾರಣೆ ನಡೆಸಿಯೇ ಸಿದ್ಧ ಎಂದರು. ಬಿಜೆಪಿ ನಾಯಕರು ಜನರ ಮನಸ್ಸು ಗೆಲ್ಲಬೇಕು, ಅದನ್ನು ಬಿಟ್ಟು ಈ ರೀತಿ ಅಡ್ಡದಾರಿ ಯಾಕೆ ಹಿಡಿಯುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನಾಯಕರ ಮೇಲೆ ಪೊಲೀಸರ ದಾಳಿ ನಡೆಸಿರುವುದು ಸಂಪೂರ್ಣ ಅಮಾನವೀಯ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net