

ಮುಂಬೈ : ಭಾರತದ ಡಿಜಿಟಲ್ ಕ್ರಾಂತಿಗೆ ಜಿಯೋ ಹೊಸ ವೇಗ ನೀಡಿದ್ದು, ಕೋಟ್ಯಂತರ ಭಾರತೀಯರ ದೈನಂದಿನ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿರುವುದು ಸುಳ್ಳಲ್ಲ. ದೇಶದ ಡಿಜಿಟಲ್ ಭವಿಷ್ಯವನ್ನು ರೂಪಿಸುವಲ್ಲಿಯೂ ಜಿಯೋ ಪ್ರಮುಖ ಪಾತ್ರ ವಹಿಸುತ್ತಿದ್ದು, ಇತ್ತೀಚಿನ ಜಿಯೋ ಐಪಿಒ ಸಭೆಯಲ್ಲಿ ಜಿಯೋ ಎಂಡಿ ಆಕಾಶ್ ಅಂಬಾನಿ ಹಂಚಿಕೊಂಡ ಭವಿಷ್ಯದ ಯೋಜನೆಗಳ ಮಾಹಿತಿ; ದೇಶದ ಡಿಜಿಟಲ್ ಕ್ರಾಂತಿಯ ಮುನ್ನೋಟವನ್ನು ತೆರೆದಿಟ್ಟಿದೆ.
ಅ.19ರಿಂದ ಹೂಡಿಕೆದಾರರ ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಸಂಸ್ಥೆ ಸುಮಾರು 30 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಅದಕ್ಕೆ ಪೂರ್ವಭಾವಿಯಾಗಿ ನಡೆದ ಐಪಿಒ ಸುದ್ದಿಗೋಷ್ಠಿಯ ಪರಿಣಾಮ ಈಗಾಗಲೇ ಜಿಯೋ ಷೇರುಗಳ ಮೌಲ್ಯ ಹೆಚ್ಚಾಗಿದೆ. ಇಡೀ ಜಗತ್ತು ಡಿಜಿಟಲ್ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದ್ದು, ಆ ನಿಟ್ಟಿನಲ್ಲಿ ಜಿಯೋ ಬಹಳ ಮುಂದೆ ಸಾಗಿದೆ.
ಹುಬ್ಬೇರಿಸುವ ಡಿಜಿಟಲ್ ಪ್ರಾತ್ಯಕ್ಷಿಕೆ
ಐಪಿಒ ಸಭೆಯ ಹಿನ್ನೆಲೆಯಲ್ಲಿ ಸಂಸ್ಥೆ ಮಾಡಿರುವ ವಿವಿಧ ಆವಿಷ್ಕಾರಗಳ ಪ್ರಾತ್ಯಕ್ಷಿಕೆ, ಭಾರತದ ಭವಿಷ್ಯ ಡಿಜಿಟಲ್ ಲೋಕವನ್ನು ಅನಾವರಣ ಮಾಡಿದಂತ್ತಿತ್ತು. ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅತ್ಯಾಧುನಿಕ ಅಭಿವೃದ್ಧಿಯತ್ತ ಹೆಜ್ಜೆ ಹಾಕಿರುವ ಜಿಯೋ ಫ್ಲಾಟ್ಫಾರ್ಮ್ಸ್; ಶಿಕ್ಷಣ, ಆರೋಗ್ಯ, ಕೃಷಿ, ರಕ್ಷಣೆ, ಭದ್ರತೆ, ಕಾರ್ಪೋರೇಟ್ ವಹಿವಾಟು, ಆಡಳಿತ, ಕಚೇರಿ ನಿರ್ವಹಣೆ, ಡಿಜಿಟಲ್ ಪೇಮೆಂಟ್ಸ್ ಇತ್ಯಾದಿ ಎಲ್ಲ ರಂಗದಲ್ಲೂ ಹೊಸ ಆವಿಷ್ಕಾರಗಳನ್ನು ಮಾಡಿದೆ. ಪ್ರಾತ್ಯಕ್ಷಿಕೆಗಳ ಫಲಿತಾಂಶವನ್ನು ಗಮನಿಸಿದರೆ ಕೆಲವೇ ವರ್ಷಗಳಲ್ಲಿ ಈ ಎಲ್ಲ ಸೇವೆಗಳು ಸಾರ್ವಜನಿಕರ ಬಳಕೆಗೆ ದೊರೆಯಲಿವೆ. ಈಗಾಗಲೇ 53 ಕೋಟಿ ಗ್ರಾಹಕರನ್ನು, ದೇಶದ 90 ಸಾವಿರ ಪಿನ್ಕೋಡ್ಗಳಲ್ಲಿ ನೆಟ್ವರ್ಕ್ ಜಾಲವನ್ನು ಹೊಂದಿರುವ ಜಿಯೋ ಮತ್ತೊಂದು ಡಿಜಿಟಲ್ ಕ್ರಾಂತಿಗೆ ಸನ್ನದ್ಧವಾಗಿದೆ.
ವಿವಿಧ ಡಿವೈಸ್ಗಳ ಮೂಲಕ ಡಿಜಿಟಲ್ ಕ್ರಾಂತಿ
* ಎಐ ಮೂಲಕ ಜೋಡಣೆಗೊಂಡ ಕನ್ನಡಕವೊಂದನ್ನು ಧರಿಸಿಕೊಂಡು ಯಾವುದೇ ಕ್ಯೂಆರ್ ಕೋಡ್ ನೋಡುತ್ತಾ ಪೇಮೆಂಟ್ ಮಾಡುವಂತೆ ಕಮ್ಯಾಂಡ್ ನೀಡಿದ ಕ್ಷಣಾರ್ಧದಲ್ಲಿ ಡಿಜಿಟಲ್ ಪೇಮೆಂಟ್.
*ಹೈಸ್ಪೀಡ್ ಇಂಟರ್ನೆಟ್ ನೀಡುವ ಬ್ರಾಡ್ ಬ್ಯಾಂಡ್ ಡಿವೈಸ್ಗಳನ್ನು ಕೇಬಲ್ ರಹಿತವಾಗಿ ಮನೆಯ ಮೇಲೆ ಕೇವಲ ಒಂದು ಅಡಿ ಎತ್ತರದ ಪೋಲ್ ಮೇಲೆ ಅಳವಡಿಸಿ ಆ ಮೂಲಕ ಹೈಸ್ಪೀಡ್ ಇಂಟರನೆಟ್ ನೀಡುವ ವ್ಯವಸ್ಥೆ.
*ಮನೆಯಲ್ಲಿ ಇರುವ ಮಕ್ಕಳು, ಹಿರಿಯರ ಮೇಲೆ ನಿಗಾ ಇಡುವ ಹೋಮ್ ಇಂಟೆಲಿಜೆನ್ಸ್ ಕ್ಯಾಮೆರಾ
* ರೈತರಿಗೆ ನೆರವಾಗುವ ಜಿಯೋ ಕೃಷಿ ಆ್ಯಪ್ ಮೂಲಕ ಎಲ್ಲ ರೀತಿಯ ಮಾಹಿತಿ.
* ಡ್ರೋನ್ ಕ್ಲೀನ್ ಗಂಗಾ ಹೆಸರಿನಲ್ಲಿ ನದಿಗಳ ಸ್ವಚ್ಛತೆ.
* ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ಬಳಕೆದಾರರಿಗೆ ರೆಂಟಲ್ ಬೇಸ್ ಚಿಕ್ಕ ಸಿಪಿಯು ಮೂಲಕ ಸೇವೆ.
* ಮನರಂಜನೆ, ಕ್ರೀಡೆಗೆ ಅತ್ಯಾಧುನಿಕ ಆ್ಯಪ್ಗಳ ಆವಿಷ್ಕಾರ.
* ಮ್ಯಾನೇಜ್ ವೈಫೈ ಹೆಸರಿನಲ್ಲಿ ಕಚೇರಿಗಳ ನಿರ್ವಹಣಾ ಸಾಮರ್ಥ್ಯಕ್ಕೆ ಅನುಗುಣವಾದ ವೈಫೈ ಸೌಲಭ್ಯ.
ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ನಾಯಕತ್ವದಲ್ಲಿ ಬೆಳೆದಿರುವ ಜಿಯೋ ಸಂಸ್ಥೆಗೆ ಕೈಗೆಟುಕುವ ದರದ ಡೇಟಾ, ವೇಗದ ನೆಟ್ವರ್ಕ್ ಹಾಗೂ ಸ್ವಂತ ತಂತ್ರಜ್ಞಾನ ವ್ಯವಸ್ಥೆ ಪ್ರಮುಖ ಶಕ್ತಿಗಳಾಗಿವೆ.
ಇಶಾ ಅಂಬಾನಿ, ಜಿಯೋ ನಿರ್ದೇಶಕಿ