ಶಿಕ್ಷಣ ಕ್ಷೇತ್ರಕ್ಕೆ ಶರಣ ಸಂಸ್ಥಾನದ ಕೊಡುಗೆ ಅಪಾರ

ಕಲಬುರಗಿಯ ಗೋದುತಾಯಿ ಕಾಲೇಜಿನಲ್ಲಿ ಬಿಎಸ್ಸಿ ಲ್ಯಾಬ್​ಗೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಚಾಲನೆ ನೀಡಿದರು. ಬಸವರಾಜ ದೇಶಮುಖ, ಶಿವಾನಿ ಅಪ್ಪ, ಕೋಮಲಾ ಅಪ್ಪ, ಡಾ.ನೀಲಾಂಬಿಕಾ ಶೇರಿಕಾರ, ಡಾ.ಸೀಮಾ ಪಾಟೀಲ್​ ಇತರರಿದ್ದರು.
ಕಲಬುರಗಿಯ ಗೋದುತಾಯಿ ಕಾಲೇಜಿನಲ್ಲಿ ಬಿಎಸ್ಸಿ ಲ್ಯಾಬ್​ಗೆ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಚಾಲನೆ ನೀಡಿದರು. ಬಸವರಾಜ ದೇಶಮುಖ, ಶಿವಾನಿ ಅಪ್ಪ, ಕೋಮಲಾ ಅಪ್ಪ, ಡಾ.ನೀಲಾಂಬಿಕಾ ಶೇರಿಕಾರ, ಡಾ.ಸೀಮಾ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಅನಿಸಿಕೆ
  • ಗೋದುತಾಯಿ ಕಾಲೇಜಿನಲ್ಲಿ ಲ್ಯಾಬ್​ಗೆ ಚಾಲನೆ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ಷೇತ್ರ ಹೆಮ್ಮರವಾಗಿ ಬೆಳೆಯಲು ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅಪಾರ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಾಯಿಣಿ ಅಪ್ಪ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ವಿಜ್ಞಾನ ಪ್ರಯೋಗಾಲಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಪೂಜ್ಯ ಡಾ.ಅಪ್ಪ ಅವರು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು, ಮಹಿಳೆಯರಿಗಾಗಿ ಅನೇಕ ಶಾಲಾ&ಕಾಲೇಜು ಆರಂಭಿಸಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಸಂಸ್ಥೆಯಲ್ಲಿ ಮಹಿಳಾ ವಿದ್ಯಾರ್ಥಿಗಳು, ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಪೂಜ್ಯರು ಈ ಭಾಗವನ್ನು ಶೈಕ್ಷಣಿಕ ಕೇಂದ್ರವಾಗಿ ನಿರ್ಮಿಸಿದ್ದಾರೆ. ವಿದ್ಯಾರ್ಥಿಗಳು ಸತತ ಅಭ್ಯಾಸದಲ್ಲಿ ತೊಡಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಜತೆಗೆ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಪೂಜ್ಯ ಅಪ್ಪ ಅವರು ಪ್ರಯೋಗ ಮತ್ತು ಸಂಶೋಧನೆಗೆ ಆದ್ಯತೆ ನೀಡುತ್ತಿದ್ದರು. ಇದರಿಂದ ಮಾತ್ರ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ&ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಡೊಡ್ಡಪ್ಪ ಅಪ್ಪ ಅವರು ಹಚ್ಚಿದ ಶಿಕ್ಷಣವೆಂಬ ಸಸಿ ಡಾ.ಅಪ್ಪ ಅವರು ಹೆಮ್ಮರವಾಗಿ ಬೆಳೆಸಿದ್ದಾರೆ. ವಿದ್ಯಾರ್ಥಿಗಳು ಹೆಚ್ಚೆಚ್ಚು ಓದಿನಡೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾಯೆರ್ ಡಾ.ಸೀಮಾ ಪಾಟೀಲ್​ ಮಾತನಾಡಿದರು.
ಪೂಜ್ಯ ಡಾ.ಅವ್ವಾಜಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶಿವಾನಿ ಎಸ್​.ಅಪ್ಪ, ಕೋಮಲಾ ಎಸ್​.ಅಪ್ಪ, ನ್ಯಾಕ್​ ಸಂಯೋಜಕ ಡಾ.ಸಿದ್ದಲಿಂಗರೆಡ್ಡಿ, ಐಕ್ಯೂಎಸಿ ಸಂಯೋಜಕಿ ಡಾ.ಪ್ರತಿಭಾ ಪಾಟೀಲ್​ ಇತರರಿದ್ದರು. ವಿಜ್ಞಾನ ವಿಭಾಗದ ಸಂಯೋಜಕಿ ಡಾ.ಶ್ವೇತಾ ಗೋಪನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕ ಕೃಪಾಸಾಗರ ಗೊಬ್ಬುರ್​ ವಂದಿಸಿದರೆ, ಪ್ರಸಾದ ಅಷ್ಟಗಿಕರ್​ ನಿರೂಪಣೆ ಮಾಡಿದರು.
"

ಹೆಣ್ಣೊಂದು ಕಲಿತರೆ ಕುಟುಂಬ ಕಲಿತಂತೆ ಎಂಬ ಮಾತಿನಂತೆ ಮಹಿಳೆಯರು ಹೆಚ್ಚು ಓದಿ ಉತ್ತಮ ನಾಗರಿಕರಾಗಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಇಂದಿನ ಆಧುನಿಕ ಯುಗದಲ್ಲೂ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ಒಂದು ಹೆಜ್ಜೆ ಮುಂದಿದ್ದಾರೆ. ಹೀಗಾಗಿ ಕಾಲೇಜಿನ ವಿದ್ಯಾರ್ಥಿನಿಯರು ಸಾಧನೆಗೈದು ಉತ್ತಮ ಬದುಕು ಕಟ್ಟಿಕೊಳ್ಳಬೇಕು.>

ಬಸವರಾಜ ದೇಶಮುಖ,

ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net