ಭಗವದ್ಗೀತೆಯ ಪರಿಕಲ್ಪನೆಯುಳ್ಳ ‘ಸ್ವರ್ಣಕಮಲಂ’

ವಿದ್ವಾಂಸ ಶತಾವಧಾನಿ ಡಾ.ಆರ್. ಗಣೇಶ್
ವಿದ್ವಾಂಸ ಶತಾವಧಾನಿ ಡಾ.ಆರ್. ಗಣೇಶ್
Published on
ಬೆಂಗಳೂರು: ಮಾಡುವ ಕೆಲಸದಲ್ಲಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಕಲೆ ಅದು ಸಾರ್ಥಕತೆ ಪಡೆಯುತ್ತದೆ ಎಂದು ವಿದ್ವಾಂಸ ಶತಾವಧಾನಿ ಡಾ.ಆರ್. ಗಣೇಶ್ ಹೇಳಿದ್ದಾರೆ.
ಪರಮ್ ಫೌಂಡೇಶನ್ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕಲಾ ಸಂವಾದದಲ್ಲಿ ತೆಲುಗಿನ ನಿರ್ದೇಶಕ ಕೆ. ವಿಶ್ವನಾಥ್ ನಿರ್ದೇಶನದ ‘ಸ್ವರ್ಣಕಮಲಂ’ ಚಲನಚಿತ್ರದ ವಿವಿಧ ಮಗ್ಗುಲುಗಳ ಬಗ್ಗೆ ಮಾತನಾಡಿದರು. 
ಈ ಚಿತ್ರದಲ್ಲಿ ಭಗವದ್ಗೀತೆಯ ‘ಸ್ವಧರ್ಮ’ ಪರಿಕಲ್ಪನೆಯನ್ನು ಸಾಕಷ್ಟು ಅಳವಡಿಸಿಕೊಳ್ಳಲಾಗಿದೆ. ಸಿನಿಮಾ ಯಶಸ್ಸಿನ ಹಿಂದೆ ಭಾರತದ ದಿಗ್ಗಜ ನೃತ್ಯ ಸಂಯೋಜಕರ ಶ್ರಮವೂ ಇದೆ. ಪ್ರತಿಭೆಯನ್ನು ಗುರುತಿಸದೆ ಅನ್ಯಸುಖದ ಹಿಂದೆ ಹೋಗುವುದು ಹೇಗೆ ವ್ಯರ್ಥ ಎನ್ನುವುದನ್ನು ನಾಯಕಿ ಮೀನಾಕ್ಷಿ ಪಾತ್ರದ ಮೂಲಕ ವಿಶ್ವನಾಥ್ ತೋರಿಸಿದ್ದಾರೆ. ತನ್ನ ತಂದೆ ನೃತ್ಯಾಚಾರ್ಯರಾಗಿದ್ದರೂ ಅವಳಲ್ಲಿರುವ ನಿರಾಸಕ್ತಿ ಮತ್ತು ನಂತರದ ಪರಿವರ್ತನೆ, ಕಲೆ ಮತ್ತು ಬದುಕು ಒಂದೇ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ವಿಶ್ಲೇಷಿಸಿದರು.
ಈ ಚಿತ್ರ ಕೇವಲ ನೃತ್ಯದ ಬಗ್ಗೆಯಲ್ಲ, ಬದಲಾಗಿ ವ್ಯಕ್ತಿಯೊಬ್ಬನ ಅಸ್ತಿತ್ವದ ಹುಡುಕಾಟದ ಬಗ್ಗೆಯೂ ಆಗಿದೆ. ನಾಯಕಿ ಮೀನಾಕ್ಷಿ ತನ್ನೊಳಗಿನ ನೃತ್ಯ ಪ್ರತಿಭೆ ಕಡೆಗಣಿಸಿ ಲೌಕಿಕ ಸುಖದ ಹಿಂದೆ ಓಡುತ್ತಾಳೆ. ತನ್ನ ತಂದೆ ನೃತ್ಯಾಚಾರ್ಯರಾಗಿದ್ದರೂ ಅವಳಲ್ಲಿರುವ ನಿರಾಸಕ್ತಿ, ನಂತರ ಪರಿಸರ ಮತ್ತು ಪ್ರೇರಣೆಯು ಅವಳನ್ನು ಮತ್ತೆ ತನ್ನ ನೃತ್ಯಕ್ಕೆ ಹೇಗೆ ಕರೆತರುತ್ತದೆ ಎಂಬುದನ್ನು ಚಿತ್ರ ಅದ್ಭುತವಾಗಿ ನಿರೂಪಿಸಿದೆ. ಹೀಗಾಗಿ, ನಮ್ಮ ಅಸ್ತಿತ್ವದಿಂದ ಜಗತ್ತಿಗೆ ಹೇಗೆ ಸೌಖ್ಯ ಉಂಟಾಗಬಲ್ಲದು ಎನ್ನುವುದೇ ಸ್ವಧರ್ಮ ಎಂದು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net