

ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಕಂಪನ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ನನ್ನನ್ನೂ ಸೇರಿದಂತೆ ಕೆಲವು ಸಚಿವರನ್ನು ಟ್ರ್ಯಾಪ್ ಮಾಡಲು ಖಾಸಗಿ ಟೀಮ್ ಒಂದು ಕುಟುಕು ಕಾರ್ಯಾಚರಣೆಗೆ ಯತ್ನಿಸಿದೆ ಎಂದು ಸ್ವತಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇನ್ನು ಡಿಕೆಶಿ ಹೇಳಿಕೆಗೆ ಲೇವಡಿ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸ್ಟಿಂಗ್ ಆಪರೇಷನ್ ಮಾಸ್ಟರ್ಗೇ ಸ್ಟಿಂಗ್ ಎಂದರೆ ಹಾಸ್ಯಾಸ್ಪದ. ಗುರುವಿಗೇ ತಿರುಮಂತ್ರ ಹೇಳಲು ಸಾಧ್ಯವೇ ? ಈ ಬಗ್ಗೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಗುರುವಾರ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿಯಾದ ಬಳಿಕ ನನ್ನ ಮತ್ತು ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿದೆ. ಇದರ ಪಿತಾಮಹ ಯಾರು? ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಸ್ಟಿಂಗ್ಗೆ ಬಂದವರನ್ನು ಹಿಡಿಯದೆ ಕಡಲೆಪುರಿ ತಿನ್ನುತ್ತಿದ್ದೀರಾ? ಗೊತ್ತಿದ್ದರೂ ಯಾಕೆ ಹಿಡಿಯಲಿಲ್ಲ? ನೈಸ್ ಸಂಸ್ಥೆ ಮಾಲೀಕರೇ ನಿಮ್ಮನ್ನು ಟ್ರ್ಯಾಪ್ ಮಾಡಲಿಕ್ಕೆ ಪ್ರಯತ್ನ ಮಾಡ್ತಿದ್ದಾರೋ? ಸತ್ಯ ಹೇಳಿ ಸ್ಟಿಂಗ್ಗೆ ಮಾಡಿಸಿದ ಪಿತಾಮಹ ಯಾರು? ಸಿಸಿ ಕ್ಯಾಮರಾ ಇರಬೇಕಲ್ಲಾ? ಎಲ್ಲವನ್ನೂ ತೆಗೆಸಿ, ಸಿಎಂ ವಿರುದ್ಧವೇ ಟ್ರ್ಯಾಪ್ ನಡೆಯುತ್ತಿದೆ ಎಂದರೆ ಸಾಮಾನ್ಯ ವಿಷಯವಲ್ಲ, ಈ ಬಗ್ಗೆ ತನಿಖೆ ಆಗಲಿ. ತನಿಖೆ ನಡೆದರೆ ನಿಮಗೆ ಸುತ್ತಿಕೊಳ್ಳುತ್ತದೆ, ನಿಮ್ಮ ಬೆನ್ನು ನಿಮಗೆ ಕಾಣಲ್ಲ, ಮೂಲ ಪಿತಾಮಹ ನೀವೇ. ಎಲ್ಲ ವಿಚಾರ ಈಗ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ. ಕಾಲ ಬಂದಾಗ ಉತ್ತರ ಕೊಡುತ್ತೇನೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ? ಸಚಿವರ ವಿರುದ್ಧ ಸ್ಟಿಂಗ್ ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು? ಹಣಕಾಸಿನ ನೆರವು ಯಾರದ್ದೆಂಬುದು ತಿಳಿದಿದೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲ. ನಾನೇಕೆ ದಾಖಲೆ ಬಿಡುಗಡೆ ಮಾಡಲಿ, ಯಾರಿಗೆ ಬಿಡುಗಡೆ ಮಾಡಬೇಕೋ ಮಾಡುತ್ತೇನೆ ಎಂದರು.
ಹೇಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದು ನನಗೆ ತಿಳಿದಿದೆ ಎಂದು ಮಾರ್ವಿುಕವಾಗಿ ಹೇಳಿದರು. ಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡುವ ಯತ್ನ ನಡೆಸಿದ್ದಾರೆ. ನನ್ನ ಬಳಿ ಈ ಬಗ್ಗೆ ಸಾಕ್ಷ್ಯಗಳಿವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲ. ನನ್ನನ್ನು ಸೇರಿಸಿ ಬೇರೆ ಯಾವ, ಯಾವ ನಾಯಕರ ವಿರುದ್ಧ ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿದಿದೆ. ಆದರೆ, ಈ ಎಲ್ಲ ವಿಚಾರಗಳನ್ನು ಈಗ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ. ಕಾಲ ಬಂದಾಗ ಉತ್ತರ ಕೊಡುತ್ತೇನೆ ಎಂದು ಡಿಕೆಶಿ ಹೇಳೀದರು. ಕೆಲವರು ನನ್ನ ಬಳಿ ಬಂದಿದ್ದರು, ನಾನು ಫೋಟೋಗಳನ್ನು ಬಿಡುಗಡೆ ಮಾಡಲು ಸಿದ್ಧ. ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಬಳಿ ಯಾರು ಬಂದಿದ್ದರೋ ಅವರ ಮೇಲೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿ, ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅದನ್ನು ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪಿತಾಮಹರು ಯಾರು ಎಂದು ತಿಳಿದಿದೆ. ಅದಕ್ಕೆಲ್ಲ ಉತ್ತರಿಸಲು ಹೋಗುವುದಿಲ್ಲ. ಅಧಿಕಾರಿಗಳನ್ನು ಸುಮ್ಮನೆ ಸಿಕ್ಕಿಹಾಕಿಸಲು ಪ್ರಯತ್ನ ಮಾಡುತ್ತಿದ್ದು, ಅವರು ಹುಷಾರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ ಎಂದು ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡಿದರು.
ತನಿಖೆಗೆ ಒಪ್ಪಿಸಿ, ಇಲ್ಲ ಬಿಚ್ಚಿಡಿ: ನನ್ನನ್ನು ಟ್ರಾ್ಯಪ್ ಮಾಡಲಿಕ್ಕೆ ಬಂದಿದ್ದರು, ಪೊಲೀಸರಿಗೂ ಗೊತ್ತು, ಹಲವಾರು ಫೋಟೋಗಳು ಇವೆ ಎಂದು ಹೇಳಿದ್ದಾರೆ. ಸ್ಟಿಂಗ್ ಮಾಡಿದ ಆ ಪಿತಾಮಹ ಯಾರು ಎಂಬುದನ್ನು ಜನಗಳ ಮುಂದಿಡಿ. ನಿಮ್ಮಿಂದ 35 ಲಕ್ಷ ರೂ. ಬಹುಮಾನ ಪಡೆದಿರುವ ಎಸ್ಐಟಿ ಇದೆಯಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ನೈಸ್ ಕಂಪನಿ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಿದಾಗ ಉಂಟಾದ ಮುಜುಗರ ಮರೆಮಾಚಲು ಸ್ಟಿಂಗ್ ಆಪರೇಷನ್ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗದಂತೆ ತಡೆಯಲು ಇಂತಹ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಸಿಎಂ ಆಗಿ, ಹಿಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಟ್ರಾ್ಯಪ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಆ ವಿಷಯವನ್ನು ಯಾಕೆ ಮುಚ್ಚಿಟ್ಟಿದ್ದೀರಿ ? ಯಾಕೆ ಮುಚ್ಚಿಡುತ್ತಿದ್ದಿರಾ ? ರಾಜ್ಯದ ಸಿಎಂ ಆಗಿದ್ದವರನ್ನು, ಹಾಲಿ ಸಿಎಂಅನ್ನು ಟ್ರಾ್ಯಪ್ ಮಾಡತಕ್ಕದ್ದು ಅಂದರೆ ಏನರ್ಥ? ಮಾಹಿತಿ ಇದ್ದರೂ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ?. ಈ ಹಿಂದೆ ರಮೇಶ್ ಜಾರಕಿಹೊಳಿ ಅವರನ್ನು ಟ್ರಾ್ಯಪ್ ಮಾಡುವ ಕೆಲಸ ಮಾಡಿದ್ದು ಯಾರು? ಮಾಜಿ ಮಂತ್ರಿ ಕೆ.ಎನ್. ರಾಜಣ್ಣ ವಿಧಾನಸಭೆಯಲ್ಲೇ 40-48 ಜನರ ಟ್ರಾ್ಯಪ್ ಬಗ್ಗೆ ಮೂಲಪುರುಷನೇ ಇದ್ದಾನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರನ್ನ ಯಾವ ರೀತಿ ಮುಗಿಸಿದಿರಿ ಎನ್ನುವುದನ್ನು ನಾನು ಬಲ್ಲೆ. ಸತ್ಯ ಹೇಳಿ, ಇದೆಲ್ಲ ನಿಮ್ಮದೇ ಕೈವಾಡ ಅಲ್ಲವೇ ? ಎಂದು ಡಿಕೆಶಿಯನ್ನು ಪ್ರಶ್ನಿಸಿದರು.