_1767961191107.webp?w=480&auto=format%2Ccompress&fit=max)
_1767961191107.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಡಾ.ಶಾಮನೂರುಶಿವಶಂಕರಪ್ಪನವರ ನಿಧನದಿಂದತೆರವಾಗಿರುವ 120ವರ್ಷಗಳ ಸುದೀರ್ಘಇತಿಹಾಸವಿರುವ ವೀರಶೈವ ಲಿಂಗಾಯತಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿರುವಅಖಿಲ ಭಾರತ ವೀರಶೈವ ಲಿಂಗಾಯತಮಹಾಸಭೆ (ಅಭಾವೀಮ)ಯರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆಸುಪ್ರೀಂ ಕೋರ್ಟಿನ ನಿವೃತ್ತನ್ಯಾಯಮೂರ್ತಿ ಡಾ.ಶಿವರಾಜ್ಪಾಟೀಲರನ್ನು ಆಯ್ಕೆ ಮಾಡುವಂತೆಶ್ರೀರಂಭಾಪುರಿ ಡಾ.ವೀರಸೋಮೇಶ್ವರಜಗದ್ಗುರುಗಳು ಒತ್ತಾಯಿಸಿದ್ದಾರೆ.
ಶೇಷಾದ್ರಿಪುರದಲ್ಲಿನಡೆದ ನ್ಯಾಯವಾದಿ ಪ್ರಕಾಶ್ಅಂಗಡಿಯವರ ಸುಬ್ರಮಣ್ಯ ಶಕ್ತಿಟವರ್ ಉದ್ಘಾಟನೆ ಅಂಗವಾಗಿಹಮ್ಮಿಕೊಂಡಿದ್ದ ಸಾರ್ವಜನಿಕಇಷ್ಟಲಿಂಗ ಮಹಾಪೂಜೆ ಸಮಾರಂಭದಸಾನ್ನಿಧ್ಯ ವಹಿಸಿ ಆಶೀರ್ವಚನನೀಡಿದರು.
ಹಾನಗಲ್ಕುಮಾರ ಮಹಾಸ್ವಾಮಿಗಳು ಸಮುದಾಯದಒಗ್ಗಟ್ಟು ಮತ್ತು ಐಕ್ಯತೆಗಾಗಿಸಂಸ್ಥಾಪಿಸಿರುವ ಅಭಾವೀಮಅಧ್ಯಕ್ಷರಾಗಿದ್ದ ಡಾ.ಶಾಮನೂರುಶಿವಶಂಕರಪ್ಪನವರು ನ್ಯಾಯ-ನಿಷ್ಠೂರವಾಗಿತಮ್ಮ ವೈಯಕ್ತಿಕ ಹಿತಾಸಕ್ತಿಗಿಂತಲೂಸಮುದಾಯದ ಹಿತಕ್ಕಾಗಿ ಧ್ವನಿಎತ್ತುತ್ತಿದ್ದ ಓರ್ವ ಧೀಮಂತನಾಯಕರಾಗಿದ್ದರು.ಅವರಿಂದ ತೆರವಾದಸ್ಥಾನಕ್ಕೆ ಅವರಷ್ಟೇ ಸಮರ್ಥವಾಗಿ,ಎಲ್ಲ ಸಮುದಾಯದಪ್ರೀತಿ-ಗೌರವಗಳನ್ನುಪಡೆದು, ಪೀಠಗಳಇತಿಹಾಸ, ಬಸವಾದಿಶರಣರ ವಿಚಾರಧಾರೆಗಳನ್ನು ಚನ್ನಾಗಿಅರಿತು ಎಲ್ಲರನ್ನೂ ಒಟ್ಟಿಗೆಕರೆದುಕೊಂಡು ಹೋಗುವ ಸಚ್ಛಾರಿತ್ರ್ಯದವ್ಯಕ್ತಿತ್ವವನ್ನು ಹೊಂದಿರುವನ್ಯಾ.ಶಿವರಾಜಪಾಟೀಲರನ್ನು ಅವಿರೋಧವಾಗಿ,ಸರ್ವಾನುಮತದಿಂದಆಯ್ಕೆ ಮಾಡುವುದರಿಂದ ಸಮಾಜದಸಂಘಟನೆಗೆ ದೊಡ್ಡ ಶಕ್ತಿ ಬರುತ್ತದೆ.ಕಾನೂನು ಮತ್ತುಧರ್ಮ ಎರಡನ್ನೂ ಅರಿತಿರುವ ಪಾಟೀಲರಆಯ್ಕೆಗೆ ಯಾವುದೇ ಅಪಸ್ವರ ಬರುವದಿಲ್ಲಎಂಬ ವಿಶ್ವಾಸವನ್ನು ಜಗದ್ಗುರುಗಳುವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿಕರ್ನಾಟಕ ಇತಿಹಾಸ ಅಕಾಡೆಮಿ ಹೊರತಂದಿರುವ ಇತಿಹಾಸ ದರ್ಶನ ಕೃತಿಯನ್ನುನ್ಯಾ.ಶಿವರಾಜ್ಪಾಟೀಲ್ ಬಿಡುಗಡೆ ಮಾಡಿದರು.ಎಡೆಯೂರಿನಶ್ರೀರೇಣುಕ ಶಿವಾಚಾರ್ಯ ಸ್ವಾಮೀಜಿ,ಚಿಕ್ಕಕಲ್ಲುಬಾಳುಶ್ರೀಗಳು, ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ಮಾಜಿ ಸಚಿವಎಂ.ಪಿ.ರೇಣುಕಾಚಾರ್ಯ,ಪ್ರಕಾಶ್ ಅಂಗಡಿದಂಪತಿಗಳು ಮತ್ತಿತರ ಗಣ್ಯರುಉಪಸ್ಥಿತರಿದ್ದರು.
ಪ್ರಮಾಣಿಕತೆ, ಪರಿಶ್ರಮ ಮತ್ತು ವಿಧೇಯತೆ ಇದ್ದಲ್ಲಿ ಭಗವಂತನ ಆಶೀರ್ವಾದ ಇರುತ್ತದೆ. ನ್ಯಾಯವಾದಿಗಳಾಗಿ ಕೆಲಸ ನಿರ್ವಹಿಸುವವರು ಆರ್ಥಿಕ ದುರ್ಬಲರು, ಅನ್ಯಾಯಕ್ಕೆ ಒಳಗಾದ ಬಡವರಿಗೆ ನ್ಯಾಯ ಕೊಡಿಸುವ ಸಂದರ್ಭದಲ್ಲಿ ಮಾನವೀಯತೆಯಿಂದ ನಡೆದುಕೊಳ್ಳಬೇಕು. ಕಕ್ಷಿದಾರರು ನೀಡಿದ ಪೇ (ಶುಲ್ಕ) ಖಾಲಿಯಾಗಬಹುದು. ಆದರೆ ಅವರು ಮಾಡಿದ ಪ್ರೇ (ಪ್ರಾರ್ಥನೆ) ಕೊನೇವರೆಗೆ ನಮ್ಮೊಂದಿಗಿರುತ್ತದೆ. ಇಂತಹ ಸ್ವಭಾವವನ್ನು ಮೈಗೂಡಿಸಿಕೊಂಡಿರುವ ಪ್ರಕಾಶ್ ಅಂಗಡಿಯವರು ಜೀವನದಲ್ಲಿ ಇನ್ನೂ ಉನ್ನತ ಸ್ಥಾನವನ್ನು ತಲುಪಲಿದ್ದಾರೆ.