ರೈತ ಮಹಿಳೆಯರಿಗೆ ಎರಡು ಹಸು ಫ್ರೀ! HDK ಘೋಷಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ತಿರುಗೇಟು ಹೀಗಿತ್ತು...Siddaramaiah

ರಾಜ್ಯದ ಹಲವು ಪ್ರಮುಖ ವಿಚಾರಗಳ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
Siddaramaiah
ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ
Published on: 

ಬೆಂಗಳೂರು: ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್ ಹಾಗೂ ಸರ್ಕಾರದ ಖಜಾನೆಯ ಸ್ಥಿತಿಗತಿ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ( Siddaramaiah ) ಅವರು ಶಾಸಕರ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ತಾವು ಮೌನ ವಹಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, "ಈಗ ನಮ್ಮ ಸರ್ಕಾರ ಇಲ್ಲವಲ್ಲ, ನಾನು ಮುಖ್ಯಮಂತ್ರಿಯೂ ಅಲ್ಲ. ಪ್ರಸ್ತುತ ಸರ್ಕಾರದ ಮುಖ್ಯಸ್ಥರು ಡಿ.ಕೆ. ಶಿವಕುಮಾರ್ ಅವರಾಗಿದ್ದು, ಅವರೇ ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ನಾನು ಅಂದುಕೊಂಡಿದ್ದೇನೆ" ಎಂದರು.

Also Read
ಪ್ರೇಮಿಯನ್ನು ಕುರುಡಾಗಿ ನಂಬಿ ಅಕ್ಕನ ಮದುವೆಗಾಗಿ ಕೂಡಿಟ್ಟಿದ್ದ ಚಿನ್ನಾಭರಣಗಳನ್ನು ನೀಡಿದ ವಿದ್ಯಾರ್ಥಿನಿ ದುರಂತ ಸಾವು! Student
Siddaramaiah

ಇದೇ ವೇಳೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಕುರಿತು ಪ್ರತಿಕ್ರಿಯಿಸಿ, "ಅದನ್ನು ಸರ್ಕಾರ ನಡೆಸುತ್ತದೆ" ಎಂದು ಚುಟುಕಾಗಿ ಉತ್ತರಿಸಿದರು. ಅಲ್ಲದೆ, ಕ್ಷೇತ್ರ ವಿಂಗಡಣೆ ವಿಚಾರವಾಗಿ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆಯುವ ಕುರಿತ ಪ್ರಶ್ನೆಗೆ, "ನನಗೆ ಆ ಬಗ್ಗೆ ಗೊತ್ತಿಲ್ಲ, ನಾನು ಪಾರ್ಲಿಮೆಂಟ್ ಮೆಂಬರ್ ಅಲ್ಲ" ಎಂದು ತಿಳಿಸಿದರು.

ಸಂಪುಟದಲ್ಲಿ ಖಾಲಿ ಉಳಿದಿರುವ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ವಿಚಾರವಾಗಿ ಶಾಸಕರ ಭವನದಲ್ಲಿ ಆಗ್ರಹಿಸಿದ ಸಿದ್ದರಾಮಯ್ಯ, "ಖಾಲಿ ಇರುವ ಎರಡು ಸಚಿವ ಸ್ಥಾನಗಳಲ್ಲಿ ಒಂದನ್ನು ಮಹಿಳೆಗೆ ಹಾಗೂ ಇನ್ನೊಂದನ್ನು ಹಿಂದುಳಿದ ವರ್ಗದವರಿಗೆ ನೀಡಬೇಕು" ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿರುವ ಕುರಿತು ಮಾತನಾಡಿದ ಅವರು, "ನಾಗೇಂದ್ರ ಅವರು ನಿರಪರಾಧಿ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ" ಎಂದರು. ಆದರೆ, ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕೇ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು 'ಹಸು ಭಾಗ್ಯ' ಯೋಜನೆ ನೀಡುವ ಕುರಿತು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ, "ನಾವು ಈ ಹಿಂದೆಯೇ ಪಶು ಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದೆವಲ್ಲ? ಕ್ಷೀರಧಾರೆ ಯೋಜನೆ ಜಾರಿಯಾಗಿದ್ದು ಯಾರ ಕಾಲದಲ್ಲಿ? ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗುತ್ತಿಲ್ಲ, ಈಗಾಗಲೇ ಎರಡು ಬಾರಿ ಸಿಎಂ ಆಗಿದ್ದರು. ಆಗ ಏನೇನು ಮಾಡಿದ್ದರು? ಆ ಸಮಯದಲ್ಲಿ ಹಸು ಭಾಗ್ಯ ಯೋಜನೆಯನ್ನು ಯಾಕೆ ಕೊಡಲಿಲ್ಲ?" ಎಂದು ನೇರವಾಗಿ ಪ್ರಶ್ನಿಸಿದರು.

Also Read
11 ಲಕ್ಷದ ತೂಗುದೀಪ, 30 ಲಕ್ಷದ ಟಿವಿ ಯೂನಿಟ್... ಕೇಜ್ರಿವಾಲ್‌ರ ಮಾಜಿ ನಿವಾಸ 'ಶೀಷ್ ಮಹಲ್' ಒಳಗಿನ ವೈಭೋಗ ಬಯಲು! Arvind Kejriwal
Siddaramaiah

ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದ ಬಳಿ ಹಣ ಖಾಲಿಯಾಗಿದೆ ಎಂಬ ಆರೋಪಗಳನ್ನು ಸಿದ್ದರಾಮಯ್ಯ ತಳ್ಳಿಹಾಕಿದರು. "ಹಣ ಖಾಲಿಯಾಗಿದೆ ಎಂದು ಯಾರು ಹೇಳಿದವರು? ಈ ವರ್ಷ ಹೊಸ ಕಾರ್ಯಕ್ರಮಗಳನ್ನು ಮಾಡಲು ಹಣವಿಲ್ಲ, ಮುಂದಿನ ವರ್ಷ ಮಾಡಬಹುದು. ಯಾವುದೇ ಹೊಸ ಯೋಜನೆ ಜಾರಿಗೆ ತರಬೇಕಾದರೆ ಅದು ಬಜೆಟ್‌ನಲ್ಲಿ ಇರಬೇಕು ಅಥವಾ ಪೂರಕ ಅಂದಾಜಿನಲ್ಲಿ ಸೇರ್ಪಡೆಯಾಗಿರಬೇಕು. ಇಲ್ಲದಿದ್ದರೆ ಪ್ರತ್ಯೇಕವಾಗಿ ಹಣ ಒದಗಿಸಬೇಕಾಗುತ್ತದೆ, ಹಾಗಂದ ಮಾತ್ರಕ್ಕೆ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದರ್ಥವಲ್ಲ" ಎಂದು ಸ್ಪಷ್ಟಪಡಿಸಿದರು.

ಇನ್ನು, ಮೈಸೂರಿನಲ್ಲಿ ಆಪ್ತರೊಂದಿಗೆ ಒಗ್ಗಟ್ಟು ಪ್ರದರ್ಶಿಸಿರುವ ವಿಚಾರವಾಗಿ ಮಾತನಾಡಿ, "ನಾವು ಯಾವಾಗ ಜಗಳ ಆಡಿಕೊಂಡಿದ್ದೇವೆ? ನಾವು ಯಾವಾಗ ಬೇರೆ ಬೇರೆಯಾಗಿದ್ದೇವೆ?" ಎಂದು ಮರುಪ್ರಶ್ನಿಸಿದರು.