ಹಲವು ರೈಲುಗಳ ಸಂಚಾರ ರದ್ದು, ಸಮಯ ಬದಲಾವಣೆ

ಸುರಕ್ಷತಾ ಕಾಮಗಾರಿ ಹಿನ್ನೆಲೆ ವ್ಯತ್ಯಾಸ
Several trains cancelled or rescheduled due to safety works.
ಹಲವು ರೈಲುಗಳ ಸಂಚಾರ ರದ್ದು, ಸಮಯ ಬದಲಾವಣೆ
Published on: 

ಬೆಂಗಳೂರು : ಮೈಸೂರು ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಲ ರೈಲುಗಳ ಸಂಚಾರ ರದ್ದು, ನಿಯಂತ್ರಣ, ಮಾರ್ಗ ಬದಲಾವಣೆ, ಸಮಯ ಬದಲಾವಣೆ ಮಾಡಿ ರೈಲ್ವೇ ಇಲಾಖೆ ಪ್ರಕಟಣೆ ಹೊರಡಿಸಿದೆ.

ಅ.2 ರಂದು ಹೊರಡಬೇಕಿದ್ದ ಎಸ್‌ಎಮ್ವಿಟಿ ಬೆಂಗಳೂರು ಮೈಸೂರು ಪ್ಯಾಸೆಂಜರ್ (56232) ರೈಲು, ಅ.3ರಂದು ಹೊರಡಬೇಕಿದ್ದ ಮೈಸೂರು ಅರಸೀಕೆರೆ ಪ್ಯಾಸೆಂಜರ್ (56266) ಮತ್ತು ಮೈಸೂರು ಚಾಮರಾಜನಗರ ಪ್ಯಾಸೆಂಜರ್ (56202) ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಅ.2ರಂದು ಹೊರಡುವ ಕೆಎಸ್‌ಆರ್ ಬೆಂಗಳೂರು ಅಶೋಕಪುರಂ ಮೆಮು ರೈಲು (66553) ಪಾಂಡವಪುರದವರೆಗೆ ಮಾತ್ರ ಸಂಚರಿಸಲಿದೆ. ಅಶೋಕಪುರಂ ಕೆಎಸ್‌ಆರ್ ಬೆಂಗಳೂರು ಮೆಮು ರೈಲು (66580) ಅಶೋಕಪುರದ ಬದಲಿಗೆ ಪಾಂಡವಪುರದಿಂದ ಹೊರಡಲಿದೆ. ಅ.3ರಂದು ಹೊರಡುವ ಅಶೋಕಪುರ ಕೆಎಸ್‌ಆರ್ ಬೆಂಗಳೂರು ಮೆಮು ರೈಲು (66554), ಕೆಎಸ್‌ಆರ್ ಬೆಂಗಳೂರು ಅಶೋಕಪುರಂ ಮೆಮು ರೈಲು (66579) ಅಶೋಕಪುರದ ಬದಲಿಗೆ ಪಾಂಡವಪುರದಿಂದ ಹೊರಡಲಿದೆ.

ಅ.3ರಂದು ಹೊರಡುವ ಚಾಮರಾಜನಗರ ತುಮಕೂರು ಪ್ಯಾಸೆಂಜರ್ ರೈಲು (56281) ಚಾಮರಾಜನಗರದ ಬದಲಿಗೆ ಮೈಸೂರಿನಿಂದ ಹೊರಡಲಿದೆ.

ಮಾರ್ಗ, ಸಮಯ ಬದಲಾವಣೆ:

ಅ.2ರಂದು ಹೊರಡುವ ಎಸ್‌ಎಮ್ವಿಟಿ ಬೆಂಗಳೂರು ಮುರುಡೇಶ್ವರ ಎಕ್ಸೃ್ಪ್ರೆಸ್ (16585-16586) ಕೆಎಸ್‌ಆರ್ ಬೆಂಗಳೂರು ನೆಲಮಂಗಲ ಹಾಸನ ಮಾರ್ಗವಾಗಿ ಸಂಚರಿಸಲಿವೆ. ಇದರಿಂದ ಹೊಳೆನರಸೀಪುರ, ಮೈಸೂರು, ಮಂಡ್ಯ ಮತ್ತಿತರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಅ.3ರಂದು ಅಶೋಕಪುರಂ ಚೆನ್ನೈ ಸೆಂಟ್ರಲ್ ಎಕ್ಸೃ್ಪ್ರೆಸ್ ರೈಲು (16552) 65 ನಿಮಿಷ ಹಾಗೂ ಮೈಸೂರು ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ ಪ್ರೆಸ್ (20663) 15 ನಿಮಿಷ ತಡವಾಗಿ ಹೊರಡಲಿವೆ. ಇದೇ ದಿನ ಇನ್ನೂ ಹಲವು ರೈಲುಗಳ ತಡವಾಗಿ ಸಂಚರಿಸಲಿವೆ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net