

ಬೆಂಗಳೂರು : ಮಹಿಳೆಯರು ಸ್ತನ ಮತ್ತು ಸ್ತ್ರೀರೋಗ ಸಂಬಂಧಿತ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಎದುರಿಸುವ ಹಿಂಜರಿಕೆ ಹಾಗೂ ಮುಜುಗರವನ್ನು ಗಮನದಲ್ಲಿಟ್ಟುಕೊಂಡು, ಕನಕಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ಸೌಮ್ಯ (ಎಸ್‌ಓಡಬ್ಲ್ಯೂಎಂಯುಎ) ಹೆಸರಿನ ಮಹಿಳಾ ಕೇಂದ್ರಿತ ಕ್ಯಾನ್ಸರ್ ಆರೈಕೆ ಸೇವೆಯನ್ನು ಆರಂಭಿಸಿದೆ
ಮಹಿಳೆಯರಿಗಾಗಿ, ಮಹಿಳೆಯರಿಂದಲೇ ಎಂಬ ಪರಿಕಲ್ಪನೆಯಡಿ ರೂಪುಗೊಂಡಿರುವ ಸೌಮ್ಯ, ಕ್ಯಾನ್ಸರ್ ತಪಾಸಣೆ, ರೋಗನಿರ್ಣಯ, ಚಿಕಿತ್ಸೆ ಮತ್ತು ಆರೈಕೆಯ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚು ಗೌಪ್ಯತೆ, ಸೌಕರ್ಯ ಮತ್ತು ಆತ್ಮವಿಶ್ವಾಸದ ವಾತಾವರಣ ಒದಗಿಸುವ ಉದ್ದೇಶ ಹೊಂದಿದೆ.
ಹಿಂಜರಿಕೆಯೇ ಕೆಲವೊಮ್ಮೆ ವೈದ್ಯರನ್ನು ಸಂಪರ್ಕಿಸುವಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಚಿಕಿತ್ಸೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲು ಅನುಕೂಲವಾಗುವ ವಾತಾವರಣವನ್ನು ಸೌಮ್ಯ ಕಲ್ಪಿಸುತ್ತದೆ.
ಈ ಉಪಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ಎಂ.ಎಸ್.ಮಮತಾ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಸೂಕ್ಷ್ಮತೆ, ಮತ್ತು ಅವರ ಅಗತ್ಯಗಳ ಕುರಿತಾದ ಅರಿವಿನೊಂದಿಗೆ ನಿರ್ವಹಿಸುವುದು ಮುಖ್ಯ. ಸೌಮ್ಯ ಉಪಕ್ರಮವು, ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಹಾಗೂ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಪಡೆಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.
ಕಾರ್ಯಕ್ರಮದಲ್ಲಿ ಮಣಿಪಾಲ್ ಹಾಸ್ಪಿಟಲ್ಸ್ ಸಮೂಹದ ಚೀಫ್ ಆಪರೇಟಿಂಗ್ ಆಫೀಸರ್ ಕಾರ್ತಿಕ್ ರಾಜಗೋಪಾಲ್, ದಕ್ಷಿಣ ಮತ್ತು ಪೂರ್ವ ವಲಯದ ಚೀಫ್ ಆಪರೇಟಿಂಗ್ ಆಫೀಸರ್ ದೀಪಕ್ ವೇಣುಗೋಪಾಲನ್, ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಮುರಳಿ ಶ್ರೀನಿವಾಸನ್ ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥೆ ಡಾ. ಕ್ಷಿತಿಜಾ ಕುಲಕರ್ಣಿ ಹಾಗೂ ಕ್ಲಸ್ಟರ್ ಡೈರೆಕ್ಟರ್ ಮೋಹನ್ ಹರಿಹರನ್ ಮತ್ತಿತರ ತಜ್ಞರು ಉಪಸ್ಥಿತರಿದ್ದರು.
ಸೌಮ್ಯ ಪರಿಕಲ್ಪನೆಯ ಪ್ರಯೋಜನ
ಸೌಮ್ಯ ಮೂಲಕ ಮೊದಲ ಸಮಾಲೋಚನೆ ಮತ್ತು ತಪಾಸಣೆಯಿಂದಲೇ ಮಹಿಳೆಯರಿಗೆ ಆರಾಮದಾಯಕ ಮತ್ತು ವಿಶ್ವಾಸ ಮೂಡಿಸುವ ಅನುಭವ ನೀಡಲು ಪೂರಕವಾಗಿದೆ. ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಚರ್ಚಿಸುವುದರ ಜೊತೆಗೆ, ರೋಗನಿರ್ಣಯ ಮತ್ತು ಚಿಕಿತ್ಸಾ ಆಯ್ಕೆಗಳ ಕುರಿತು ಅಗತ್ಯ ಮಾಹಿತಿಯನ್ನು ಪಡೆಯಬಹುದು.
ಇಲ್ಲಿ ನೀಡಲಾಗುವ ವೈಯಕ್ತಿಕ ಆರೋಗ್ಯ ಪಾಸ್‌ಪೋರ್ಟ್‌ನಲ್ಲಿ ಸ್ತನ ಆರೋಗ್ಯದ ಅಪಾಯದ ವಿವರ, ಸ್ಕ್ರೀನಿಂಗ್ ಇತಿಹಾಸ, ಚಿಕಿತ್ಸಾ ಯೋಜನೆ, ತಡೆಗಟ್ಟುವ ಆರೋಗ್ಯ ತಪಾಸಣೆ ಹಾಗೂ ಮುಂದಿನ ಆರೈಕೆಯ ಶಿಫಾರಸುಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಲಿದೆ.