ವಸತಿ ನಿಲಯಕ್ಕೆ 5 ಕೋಟಿ, ಕೆರೆ ಯೋಜನೆಗೆ 145 ಕೋಟಿ; ಹಾವೇರಿ ಮೆಡಿಕಲ್ ಕಾಲೇಜಿಗೆ 'ಕನಕದಾಸ'ರ ಹೆಸರು: ಡಿಕೆಶಿ ಘೋಷಣೆ! DK Shivakumar

Participating in the birth anniversary celebrations of Saint Kanaka Dasa held at Kaginele, CM D.K. Shivakumar announced that the Haveri Medical College would be named after Kanaka Dasa, and declared substantial grants for the construction of a hostel and a project to fill a local lake.
ಕಾಗಿನೆಲೆಯಲ್ಲಿ ನಡೆದ ಸಂತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್, ಹಾವೇರಿ ಮೆಡಿಕಲ್ ಕಾಲೇಜಿಗೆ ಕನಕದಾಸರ ಹೆಸರಿಡುವ ಹಾಗೂ ವಸತಿ ನಿಲಯ ಮತ್ತು ಕೆರೆ ತುಂಬಿಸುವ ಯೋಜನೆಗಳಿಗೆ ಭರ್ಜರಿ ಅನುದಾನ ನೀಡುವ ಘೋಷಣೆ ಮಾಡಿದರು.
Published on: 

ಹಾವೇರಿ: ಹಾವೇರಿಯ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಂತ ಕನಕದಾಸರ ಹೆಸರಿಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಘೋಷಿಸಿದ್ದಾರೆ. ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಸತಿ ನಿಲಯ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕಾಗಿನೆಲೆಯಲ್ಲಿ ನಡೆದ ಕನಕದಾಸರ 539 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕ ಗುರುಪೀಠದ ಶ್ರೀಗಳು ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿ 5 ಕೋಟಿ ಅನುದಾನ ನೀಡುವುದಾಗಿ ಘೋಷಿಸಲಾಗಿದೆ. ಹಾಗೆಯೇ, ಹಾವೇರಿ ವೈದ್ಯಕೀಯ ಕಾಲೇಜಿಗೆ ಸಂತ ಕನಕದಾಸರ ಹೆಸರಿಡುವ ಮೂಲಕ ಅವರ ಹೆಸರು ಶಿಕ್ಷಣ ಕ್ಷೇತ್ರದಲ್ಲಿಯೂ ಶಾಶ್ವತವಾಗಿ ಉಳಿಯುವಂತೆ ಮಾಡಲಾಗುವುದು ಎಂದಿದ್ದಾರೆ.

ಕೆರೆ ಯೋಜನೆಗೆ 145 ಕೋಟಿ ನೀಡುತ್ತೇವೆ!

ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಸರ್ಕಾರ ಆದ್ಯತೆ ನೀಡಿದೆ. ಕ್ಷೇತ್ರದ ಸುಮಾರು 137 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 145 ಕೋಟಿಗೂ ಅಧಿಕ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಕನಕರ ಆದರ್ಶ ಇಂದಿಗೂ ದಾರಿದೀಪ

ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಬದಲು ಮಾನವೀಯತೆ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂತ ಕನಕದಾಸರು ಸುಮಾರು 500 ವರ್ಷಗಳ ಹಿಂದೆಯೇ ತಮ್ಮ ಕೀರ್ತನೆಗಳ ಮೂಲಕ ಜಾತಿ ವ್ಯವಸ್ಥೆ ಹಾಗೂ ಅಸಮಾನತೆಯನ್ನು ಪ್ರಶ್ನಿಸಿ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ ಎಂದರು.

ಎಲ್ಲಾ ಜಾತಿ, ಧರ್ಮ ಒಂದೇ!

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸೈನಿಕ ಅಧಿಕಾರಿಯಾಗಿದ್ದ ಕನಕದಾಸರು ತಮ್ಮ ಬದುಕನ್ನು ಭಕ್ತಿ, ಕೀರ್ತನೆ ಹಾಗೂ ಸಮಾಜದ ಶಾಂತಿಗಾಗಿ ಮುಡಿಪಾಗಿಟ್ಟರು. ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವೇ ಕನಕದಾಸರ ಭಕ್ತಿಗೆ ಒಲಿದು ಅವರ ಕಡೆಗೆ ತಿರುಗಿದ ಪ್ರಸಂಗ ಭಕ್ತಿಯ ಶಕ್ತಿಯನ್ನು ಸಾರುತ್ತದೆ. ಕನಕದಾಸರ ‘ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಸಂದೇಶ ಮತ್ತು ಬಸವಣ್ಣನವರ ‘ಇವನಾರವ ಇವನಾರವ ಎನ್ನದಿರಿ’ ಎಂಬ ವಚನದ ಆಶಯ ಒಂದೇ ಆಗಿದೆ.

ಯಾವುದೇ ಸಂತರು, ಶರಣರು ಅಥವಾ ದಾರ್ಶನಿಕರನ್ನು ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತಗೊಳಿಸಬಾರದು. ಧರ್ಮ ಯಾವುದೇ ಇರಲಿ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದೇ ಇರಲಿ ಭಕ್ತಿ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Also Read
ಸ್ತ್ರೀಯರಿಗೆ ಪ್ರತ್ಯೇಕ ಹೆಸರಿಲ್ಲ, ಎಲ್ಲರೂ 'ಬಿಬಿ'! ಮಹಿಳೆಯರ ಗುರುತನ್ನೇ ಅಳಿಸಲು ಹೊರಟ ತಾಲಿಬಾನ್ ಸರ್ಕಾರ! Taliban
Participating in the birth anniversary celebrations of Saint Kanaka Dasa held at Kaginele, CM D.K. Shivakumar announced that the Haveri Medical College would be named after Kanaka Dasa, and declared substantial grants for the construction of a hostel and a project to fill a local lake.

ತಾಯಿ ನೆನಪು ಭಕ್ತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ; ಈ ಮೂರರ ನೆನಪು ಮನುಷ್ಯತ್ವದ ಮೂಲವಾಗಿದೆ. ದೇವರ ಮುಂದೆ ಎಲ್ಲರೂ ಸಮಾನರು ಎಂಬ ಕನಕದಾಸರ ಚಿಂತನೆ ನನ್ನ ಬದುಕಿಗೂ ಮಾರ್ಗದರ್ಶನವಾಗಿದೆ. ಸಾರ್ವಜನಿಕ ಸೇವಕನಾಗಿ ಎಲ್ಲ ಜಾತಿ, ಧರ್ಮ ಮತ್ತು ಸಮುದಾಯದ ಜನರನ್ನು ಸಮಾನವಾಗಿ ಕಾಣುತ್ತಾ ಜನರ ಸೇವೆ ಮುಂದುವರಿಸುತ್ತೇನೆ. ಅಧಿಕಾರಿಗಳು ಕೂಡ ಜನಸಾಮಾನ್ಯರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂದರು.

ಅನ್ನಭಾಗ್ಯ ಯಶಸ್ವಿ ಯೋಜನೆ

ಸಮಾಜದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಕೋಟ್ಯಂತರ ಜನರಿಗೆ ಆಹಾರ ಭದ್ರತೆ ಒದಗಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನಸಾಮಾನ್ಯರ ಬದುಕಿಗೆ ನೆರವಾಗುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬಡವರ ಬದುಕಿನಲ್ಲಿ ಭದ್ರತೆ ಮತ್ತು ನೆಮ್ಮದಿ ಮೂಡಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.

Also Read
ಸ್ತ್ರೀಯರಿಗೆ ಪ್ರತ್ಯೇಕ ಹೆಸರಿಲ್ಲ, ಎಲ್ಲರೂ 'ಬಿಬಿ'! ಮಹಿಳೆಯರ ಗುರುತನ್ನೇ ಅಳಿಸಲು ಹೊರಟ ತಾಲಿಬಾನ್ ಸರ್ಕಾರ! Taliban
Participating in the birth anniversary celebrations of Saint Kanaka Dasa held at Kaginele, CM D.K. Shivakumar announced that the Haveri Medical College would be named after Kanaka Dasa, and declared substantial grants for the construction of a hostel and a project to fill a local lake.

ಕಾಗಿನೆಲೆ ಕೇವಲ ಧಾರ್ಮಿಕ ಕ್ಷೇತ್ರವಲ್ಲ, ಅದು ನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳವಾಗಿದೆ. ಇದನ್ನು ಜಾಗತಿಕ ಮಟ್ಟದ ಸಾಂಸ್ಕೃತಿಕ ಹಾಗೂ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಸರ್ಕಾರಕ್ಕಿದೆ. ಕಾಗಿನೆಲೆ ಮತ್ತು ಬಾಡ ಕ್ಷೇತ್ರದ ಅಭಿವೃದ್ಧಿಗೆ ಸುಮಾರು 34 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.