ಬಿಎಂಟಿಸಿ ಬಿಡಿಭಾಗ ಪೂರೈಕೆ ಹೆಸರಲ್ಲಿ ₹3.97 ಕೋಟಿ ಅಕ್ರಮ

ನಷ್ಟದಲ್ಲಿರುವ ಬಿಎಂಟಿಸಿ ಖಜಾನೆ ಅಧಿಕಾರಿಗಳಿಂದಲೇ ಕನ್ನ, 21 ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಎಫ್ಐಆರ್, ನಕಲಿ ಇನ್ವಾಯಿಸ್ ರಜುವಾತು ಪತ್ತೆ, ಬಿಡಿಭಾಗ ಪೂರೈಕೆ ಕಂಪನಿಗಳ ವಿರುದ್ಧವೂ ಪ್ರಕರಣ
BMTC
BMTC
Published on: 

ಬೆಂಗಳೂರು: ನಷ್ಟದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಬಿಡಿಭಾಗ ಪೂರೈಕೆ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿರುವ ಕುರಿತು ಬಿಎಂಟಿಸಿ ಭದ್ರತಾ ವಿಭಾಗದ ಅಧಿಕಾರಿ ಪರಿಮಳ ನಾಯ್ಕ ಎಂಬುವರು ವಿಲ್ಸ್‌ನ್ ಗಾರ್ಡ್‌ನ್ ಪೊಲೀಸ್ ಠಾಣೆಯಲ್ಲಿ 21 ಅಧಿಕಾರಿಗಳು, ಸಿಬ್ಬಂದಿ ಸೇರಿ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತಿದ್ದ ಕಂಪನಿಗಳ ವಿರುದ್ಧ ಎ್ಐಆರ್ ದಾಖಲಿಸಿರುವುದು ಬೆಳಕಿಗೆ ಬಂದಿದೆ.

ಬಿಎಂಟಿಸಿ ಬಸ್‌ಗಳಿಗೆ ಬಿಡಿಭಾಗ ಪೂರೈಕೆಮಾಡುತ್ತಿದ್ದ 5 ಕಂಪನಿಗಳ ಹೆಸರಿನಲ್ಲಿ 2,820 ಬಿಡಿಭಾಗ ಪೂರೈಸಿದ್ದಾಗಿ ಸುಳ್ಳು ದಾಖಲೆ ಸೃಷ್ಟಿಸಿ ಬಿಎಂಟಿಸಿಗೆ ಬರೋಬ್ಬರಿ 3,97,83.142 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಧಿಕಾರಿಗಳು ಮತ್ತು ಸಿಬ್ಬಂದಿ:

ಉಗ್ರಾಣ ಕೇಂದ್ರ-1 ಸಹಾಯಕ ರಕ್ಷಕ ನಾಗರಾಜ, ಎನ್.ಅಶೋಕ ಜೂನಿಯರ್ ಅಸಿಸ್ಟೆಂಟ್, ಎ.ಎಲ್.ಶಿಲ್ಪ ಸಹಾಯಕ ಉಗ್ರಣ ರಕ್ಷಕಿ, ಎನ್.ವಿಶ್ವನಾಥ್ ಸಹಾಯಕ ಉಗ್ರಣ ರಕ್ಷಕ, ಆರ್.ಎಂ. ಬಂಟನೂರ್ಕರ್ ಸಹಾಯಕ ಉಗ್ರಣ ಅಧಿಕಾರಿ , ಎಂ.ಎಲ್. ಛಾಯಾ ಸಹಾಯಕ ಉಗ್ರಣ ಅಧಿಕ್ಷಕಿ, ಎಸ್. ರೂಪ ಸಹಾಯಕ ಉಗ್ರಣ ರಕ್ಷಕಿ, ಜಿ.ಆರ್.ಅನೀತಾ , ಸಹಾಯಕ ಉಗ್ರಣ ರಕ್ಷಕಿ,

ಎಂ.ಎಸ್. ಪ್ರಕಾಶ್ ಟೆಕ್ನಿಷಿಯನ್ ಕೇಂದ್ರ ಉಗ್ರಾಣ, ರಮೇಶ್ ಸಹಾಯಕ ಉಗ್ರಣಾಧಿಕಾರಿ (ನಿವೃತ್ತ), ಎಲ್.ಡಿ. ವಿಶ್ವನಾಥ್. ಸಹಾಯಕ ಉಗ್ರಾಣ ರಕ್ಷಕ, ಪ್ರೇಮಾ ವೀರಕ್ತಮಠ ಸಹಾಯಕ ಉಗ್ರಣ ರಕ್ಷಕಿ, ಬಿ.ಆರ್. ಹೇಮಂತ್, ಸಹಾಯಕ ಉಗ್ರಾಣ ರಕ್ಷಕ, ಮೋಹನ್ ಕುಮಾರ್ ಸಹಾಯಕ ಉಗ್ರಣ ರಕ್ಷಕ, (ಪ್ರಸ್ತುತ ರಾಜೀನಾಮೆ ಸಲ್ಲಿಸಿರುತ್ತಾರೆ), ಸಿ.ವಿ.ಲೋಕೇಶ್ ಉಗ್ರಾಣ ಅಧಿಕ್ಷಕ, ಕೃಷ್ಣವೇಣಿ ಉಗ್ರಾಣ ರಕ್ಷಕಿ, ವಸಂತ ಬಾಯಿ ಉಗ್ರಾಣಾಧಿಕಾರಿ, ವಿದ್ಯಾ ವಿ. ರಾಯ್ಕರ್ ವಿಭಾಗೀಯ ಯಾಂತ್ರಿಕ ಅಭಿಯಂತರರು, ಎಂ.ಎಸ್. ಜಾನಕಿ ರಾಮ ಹಾಗೂ ಎಂ.ಎಸ್. ಗಜಾನನ ಇಂಜಿನಿಯರಿಂಗ್ ವಕ್ಸ್ ಮತ್ತು ಎಂಎಸ್ ಜಿ.ಎಸ್ ಆ್ಯಂಡ್ ಕಂಪನಿ ವಿರುದ್ಧ ನ.20ರಂದು ಪ್ರಕರಣ ದಾಖಲಾಗಿದೆ.

ಬಸ್‌ಗಳ ಬಿಡಿಭಾಗಗಳನ್ನು ಖರೀದಿ ಹೆಸರಿನಲ್ಲಿ ಖರೀದಿ ಆದೇಶ, ನಕಲಿ ಇನ್ವಾಯಿಸ್, ಸ್ವೀಕೃತಿ ದಾಖಲೆಗಳು, ಬೌತಿಕ ಪರಿಶೀಲನಾ ವರದಿ ಹಾಗೂ ಹಣ ಪಾವತಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಬಿಡಿಭಾಗಗಳನ್ನು ಸರಬರಾಜು ಮಾಡದಿದ್ದರೂ ಸರಬರಾಜು ಮಾಡಿರುವಂತೆ ದ್ವಾರಕಚೇರಿಯಲ್ಲಿ ಬಿಡಿಭಾಗಗಳ ಸ್ವೀಕರಿಸಿರುವ ಬಗ್ಗೆ ದಾಖಲೆಗಳು ನಮೂದಾಗದೆ ಇದ್ದರೂ ಸರಕು ತೆರಿಗೆ ಪಟ್ಟಿಯ ಮೇಲೆ ದ್ವಾರ ಕಚೇರಿಯ ಸೀಲ್, ಭದ್ರತಾ ಸಿಬ್ಬಂದಿಗಳ ನಕಲಿ ಸಹಿ ಮಾಡಲಾಗಿದೆ. ಉಗ್ರಾಣ ಸ್ವೀಕೃತಿಗಳನ್ನು ಸೃಷ್ಟಿಸಿ ನಕಲಿ ರಶೀಧಿಗಳ ಮೇಲೂ ಸಹ ವಿಭಾಗೀಯ ಯಾಂತ್ರಿಕ ಅಭಿಯಂತರ (ನಿವೃತ್ತ ಅಧಿಕಾರಿ)ಗಳ ಸಹಿ ಮಾಡಿರುವುದು ಪತ್ತೆಯಾಗಿವೆ.

6 ವರ್ಷದ ಅಕ್ರಮ ಬಯಲು

ಕಳೆದ 2021-22, 2023-24 ಹಾಗೂ 2025-26ರವರೆಗೆ ಹಂತ ಹಂತವಾಗಿ ಅಧಿಕಾರಿಗಳು ವ್ಯವಸ್ಥಿತ ಸಂಚು ರೂಪಿಸಿ, ಬಿಎಂಟಿಸಿ ಉಗ್ರಾಣ-1ಕ್ಕೆ ಪೂರೈಕೆಯಾಗಬೇಕಿದ್ದ ವಿವಿಧ ಮಾದರಿಯ ಟಾಟಾ. ಲೈಲ್ಯಾಂಡ್ ಮತ್ತು ಇಚರ್ ವಾಹಗಳ ಬಿಡಿಭಾಗಗಳನ್ನು ಇನ್ವೆಂಟರಿ ಸಮಯದಲ್ಲಿ ಯಾವುದೇ ದಾಖಲೆಗಳಿಲ್ಲದೇ ಸಂಸ್ಥೆ ಗಣಕಯಂತ್ರದಲ್ಲಿ ಚಾಲ್ತಿಯಲ್ಲಿರುವ ಮಾಸ್ಟರ್ ಎಂಬ ಶಿರೋ ನಾಮದಡಿಯಲ್ಲಿ ಬರುವ ಮೆಟೆರಿಯಲ್ಸ್ ಇಂಡೆಂಟ್‌ನಲ್ಲಿ 2820 ಸಂಖ್ಯೆಯ ಬಿಡಿಭಾಗಗಳ ಒಟ್ಟು 3,97,83,142 ರೂ. ಎತ್ತುವಳಿ ಮಾಡಿದ್ದಾರೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಲೆಕ್ಕತೋರಿಸಿದ್ದಾರೆ. 21 ಅಧಿಕಾರಿಗಳ ಪೈಕಿ ಕೆಲವರು ನಿವೃತ್ತಿ ಹೊಂದಿದ್ದಾರೆ. ಇನ್ನೂ ಕೆಲವರು ಈ ಹಿಂದೆ ನಡೆದ ಹಲವು ಪ್ರಕರಣದಲ್ಲಿ ಅಮಾನತುಗೊಂಡವರು ಇದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.