ಹೊನ್ನಾಲದಮ್ಮ ದೇಗುಲದಲ್ಲಿ ಧಾರ್ಮಿಕ ಕೈಂಕರ್ಯ

ಕಾಜೂರು ಗ್ರಾಮದ ಶ್ರೀ ಹೊನ್ನಾದಲಮ್ಮ ದೇವಿ, ಅಮ್ಮಯಮ್ಮದೇವಿ ಚಿಕ್ಕಮ್ಮ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಕಾಜೂರು ಗ್ರಾಮದ ಶ್ರೀ ಹೊನ್ನಾದಲಮ್ಮ ದೇವಿ, ಅಮ್ಮಯಮ್ಮದೇವಿ ಚಿಕ್ಕಮ್ಮ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಜಾಜೂರು ಗ್ರಾಮ
  • ಹೊನ್ನಾಲದಮ್ಮ, ಅಮ್ಮಯ್ಯಜ್ಜಿ ಮತ್ತು ಚಿಕ್ಕಮ್ಮ ದೇವಿ ದೇವಾಲಯ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿಯ ಜಾಜೂರು ಗ್ರಾಮದಲ್ಲಿನ ಹೊನ್ನಾಲದಮ್ಮ, ಅಮ್ಮಯ್ಯಜ್ಜಿ ಮತ್ತು ಚಿಕ್ಕಮ್ಮ ದೇವಿ ದೇವಾಲಯಗಳಲ್ಲಿ ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.


ಜಾಜೂರು ಗ್ರಾಮ ದೇವತೆ ಹೊನ್ನಾಲದಮ್ಮ ದೇವಿ ಮತ್ತು ಅಮ್ಮಯ್ಯಜ್ಜಿ ದೇವಿ, ವೀರಭದ್ರೇಶ್ವರ ಸ್ವಾಮಿ, ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿ, ರಂಗನಾಥ ಸ್ವಾಮಿ ದೇವರಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿತು. ವರ್ಧಂತಿ ಮಹೋತ್ಸವಕ್ಕೆ ದೂರದ ಊರುಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net