ಎಸ್​ಐಆರ್​ ನೋಂದಣಿ ಪ್ರತಿಯೊಬ್ಬರ ಕರ್ತವ್ಯ

ಶಹಾಬಾದ್​ ನಗರಸಭೆ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್​ಐಆರ್​ ಸಭೆಯಲ್ಲಿ ಎಸಿ ಸಾಹಿತ್ಯಾ ಆಲದಕಟ್ಟಿ ಮಾತನಾಡಿದರು. ನೀಲಪ್ರಭ ಬಬಲಾದ, ಫಕ್ರೋದ್ದಿನ್​ ಸಾಬ್​ ಇತರರಿದ್ದರು.
ಶಹಾಬಾದ್​ ನಗರಸಭೆ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್​ಐಆರ್​ ಸಭೆಯಲ್ಲಿ ಎಸಿ ಸಾಹಿತ್ಯಾ ಆಲದಕಟ್ಟಿ ಮಾತನಾಡಿದರು. ನೀಲಪ್ರಭ ಬಬಲಾದ, ಫಕ್ರೋದ್ದಿನ್​ ಸಾಬ್​ ಇತರರಿದ್ದರು.
Published on
ಶಹಾಬಾದ್​: ಎಸ್​ಐಆರ್​ ನೋಂದಣಿ ಕೇವಲ ಅಧಿಕಾರಗಳ ಜವಾಬ್ದಾರಿಯಲ್ಲ. ಅದು ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದು ಗ್ರಾಮೀಣ ಮತಕ್ಷೇತ್ರ ಎಫ್​ಆರ್​ಒ ಹಾಗೂ ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ 66,078 ಮತದಾರರಿದ್ದು, 2919 ಜನ ಮೃತಪಟ್ಟಿದ್ದಾರೆ. 17,149 ಜನ ಬೇರೆಡೆ ಸ್ಥಳಾಂತರಗೊಂಡಿದ್ದು, 927 ಜನ ಬೇರೆಡೆ ಹೆಸರು ನೊಂದಾಯಿಸಿಕೊಂಡಿದ್ದಾರೆ. 1145 ಜನ ಗೈರಾಗಿದ್ದಾರೆ, ಇತರರು 66 ಜನರಿದ್ದು, ಒಟ್ಟು 43,236 ಜನ ನೋಂದಣಿ ಮಾಡಿಕೊಂಡಿದ್ದಾರೆ. ಈವರೆಗೂ ಶೇ.65.43 ನೋಂದಣಿ ಕಾರ್ಯ ಮುಗಿದಿದೆ ಎಂದರು.
ಪ್ರತಿ ಬೂತ್​ಗಳಲ್ಲಿ ಎಸ್​ಐಆರ್​ ನೋಂದಾಯಿತರ ಪಟ್ಟಿ ಪ್ರದರ್ಶಿಸಲಾಗುತ್ತಿದ್ದು, ಏನಾದರೂ ತಪ್ಪಾಗಿದ್ದರೆ, ಹೆಸರು ಬಿಟ್ಟು ಹೋದಲ್ಲಿ ಸರಿಪಡಿಸಿಕೊಳ್ಳಬಹುದು. ಆಕ್ಟೋಬರ್​ವರೆಗೆ ಎಸ್​ಐಆರ್​ ನೋಂದಣಿ ಪಟ್ಟಿ ಬರಲಿದ್ದು, ಕೈಬಿಟ್ಟ ಹೆಸರುಗಳನ್ನು ಮತ್ತೆ ಸೇರಿಸಬಹುದಾಗಿದೆ. ಎಸ್​ಐಆರ್​ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದ್ದು, ಯಾವುದೇ ಮೋಸ ನಡೆಯುತ್ತಿಲ್ಲವೆಂದು ಸ್ಪಷ್ಟಪಡಿಸಿದರು.
ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​, ತಹಸೀಲ್ದಾರ್​ ನೀಲಪ್ರಭ ಬಬಲಾದ, ಪೌರಾಯುಕ್ತ ಫಕ್ರೋದ್ದಿನ್​ ಸಾಬ್​, ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳ, ಜೆಡಿಎಸ್​ ತಾಲೂಕು ಅಧ್ಯಕ್ಷ ಸಾಬೀರ್​, ಬಿಎಸ್​ಪಿ ಮುಖಂಡ ಶೇಖ್​ ಬಾಬು ಉಸ್ಮಾನ್​, ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ಬಾಕ್ರೋದ್ದಿನ್​ ಸೇಠ, ಸಾಬೇರಾ ಬೇಗಂ, ರವಿ ರಾಠೋಡ್​, ಪಾರ್ವತಿ ಪವಾರ್​, ಡಾ.ಅಹ್ಮದ್​ ಪಟೇಲ್​, ಸೂರ್ಯಕಾಂತ ಕೋಬಾಳ, ಸಾಹೇಬಗೌಡ ಬೊಂಗುಂಡಿ, ಭೀಮಾಶಂಕರ ಕಾಂಬಳೆ, ಮಹಮದ್​ ಮಸ್ತಾನ್​, ಜಗನ್ನಾಥ್​ ಎಸ್​.ಎಚ್​. ಕನಕಪ್ಪ ದಂಡಗುಲಕರ್​, ಹಾಶಮ್​ ಖಾನ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net