

ಪ್ರಮುಖ ಮುಖ್ಯಾಂಶಗಳು
ಮಾಹಿತಿ ಹಕ್ಕು ಅಽನಿಯಮದಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಕಾಲಕ್ಕೆ ವಿಲೇವಾರಿ ಮಾಡುವ ಜವಾಬ್ದಾರಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಮೇಲಿದೆ ಎಂದು ಕಲಬುರಗಿ ಪೀಠದ ಮಾಹಿತಿ ಆಯುಕ್ತ ವೆಂಕಟಸಿಂಗ್ ಹೇಳಿದರು.
೫,೮೩೫ ಪ್ರಕರಣ ವಿಚಾರಣೆ
ಕಲಬುರಗಿ ಪೀಠದ ವ್ಯಾಪ್ತಿಯಲ್ಲಿ ೭,೫೪೧ ಆರ್‌ಟಿಐ ಅರ್ಜಿ ಬಾಕಿ ಇವೆ. ಜಿಲ್ಲೆವಾರು ನೋಡಿದರೆ ರಾಯಚೂರು ಜಿಲ್ಲೆಯಲ್ಲಿ ೨,೨೫೬, ಕಲಬುರಗಿ ೧,೫೩೧, ಬಳ್ಳಾರಿ ೯೩೮, ಕೊಪ್ಪಳ ೭೮೩, ಯಾದಗಿರಿ ೭೫೦, ವಿಜಯನಗರ ೭೩೬ ಹಾಗೂ ಬೀದರ್ ಜಿಲ್ಲೆಯಲ್ಲಿ ೫೪೭ ಅರ್ಜಿ ಬಾಕಿ ಇವೆ.| ವೆಂಕಟಸಿಂಗ್ ಮಾಹಿತಿ ಆಯುಕ್ತ, ಕಲಬುರಗಿ ಪೀಠ