ಜ.3 ರಿಂದ ಬುಕ್ಕಾಂಬುದಿಯಲ್ಲಿ ರಂಭಾಪುರಿ ಜಗದ್ಗುರುಗಳ ಮೌನ ಅನುಷ್ಠಾನ; ಜ.7ಕ್ಕೆ ಜನ್ಮ ದಿನೋತ್ಸವ

ಜ.3 ರಿಂದ ಬುಕ್ಕಾಂಬುದಿಯಲ್ಲಿ ರಂಭಾಪುರಿ ಜಗದ್ಗುರುಗಳ ಮೌನ ಅನುಷ್ಠಾನ
ಜ.3 ರಿಂದ ಬುಕ್ಕಾಂಬುದಿಯಲ್ಲಿ ರಂಭಾಪುರಿ ಜಗದ್ಗುರುಗಳ ಮೌನ ಅನುಷ್ಠಾನ
Published on

ಪ್ರಮುಖ ಮುಖ್ಯಾಂಶಗಳು

  • ಜ.3 ರಿಂದ ಬುಕ್ಕಾಂಬುದಿಯಲ್ಲಿ ರಂಭಾಪುರಿ ಜಗದ್ಗುರುಗಳ ಮೌನ ಅನುಷ್ಠಾನ
  • ಜ.7ಕ್ಕೆ ಡಾ.ವೀರಸೋಮೇಶ್ವರ ಜಗದ್ಗುರುಗಳ ಜನ್ಮದಿನೋತ್ಸವ
  • ಶ್ರೀ ಉಜ್ಜಯಿನಿ, ಶ್ರೀ ಕಾಶೀ ಜಗದ್ಗುರುಗಳ ಸಾನ್ನಿಧ್ಯ

ಬೆಂಗಳೂರು:ರಂಭಾಪುರಿಡಾ.ವೀರಸೋಮೇಶ್ವರಜಗದ್ಗುರಗಳು ತಮ್ಮ ಜನ್ಮದಿನೋತ್ಸವದಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಅಜ್ಜಂಪುರ ತಾಲೂಕಿನ ತಪೋ ಕ್ಷೇತ್ರಬುಕ್ಕಾಂಬುದಿ ಬೆಟ್ಟದಲ್ಲಿ ಜ.3ರಿಂದ ಮೌನ ತಪೋನುಷ್ಠಾನಕೈಗೊಳ್ಳಲ್ಲಿದ್ದಾರೆ.

ಬುಕ್ಕಾಂಬುದಿಬೆಟ್ಟವು ಉಜ್ಜಯಿನಿ ಲಿಂಗೈಕ್ಯಜಗದ್ಗುರು ಸಿದ್ಧಲಿಂಗ ಭಗವತ್ಪಾದರತಪೋಭೂಮಿ. ಪೂಜ್ಯರ90ನೇ ಪುಣ್ಯಾರಾಧನೆಯನ್ನುಇದೇ ವೇಳೆ ಹಮ್ಮಿಕೊಳ್ಳಲಾಗಿದ್ದು,.3 ರಿಂದ7 ರವರೆಗೆ ನಡೆಯುವಬೆಳಗಿನ ಮೌನ ಅನುಷ್ಠಾನದಲ್ಲಿಭಕ್ತರಿಗೆ ಪ್ರವೇಶವಿರುವುದಿಲ್ಲ.ನಂತರ ಪ್ರತಿದಿನ9 ಗಂಟೆಯಿಂದನಡೆಯುವ ಸಾರ್ವಜನಿಕ ಇಷ್ಟಲಿಂಗಪೂಜೆಯಲ್ಲಿ ಭಕ್ತರು ಪಾಲ್ಗೊಳ್ಳಬಹುದು.

.2(ಶುಕ್ರವಾರ) ರಿಂದಜ.6 ರವರೆಗೆಬುಕ್ಕಾಂಬುದಿಯ ಶ್ರೀ ವಿರೂಪಾಕ್ಷೇಶ್ವರದೇವಾಲಯದ ಆವರಣದಲ್ಲಿ ಪ್ರತಿದಿನಸಂಜೆ 7.30ಕ್ಕೆಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗರಾಜದೇಶೀಕೇಂದ್ರ ಶಿವಾಚಾರ್ಯಭಗವತ್ಪಾದರ ಸಾನ್ನಿಧ್ಯದಲ್ಲಿಜನಜಾಗೃತಿ ಧರ್ಮ ಸಮಾರಂಭ ನಡೆಯಲಿದೆ.

.6ರಂದು ಸಂಜೆಶ್ರೀವಿರೂಪಾಕ್ಷೇಶ್ವರ ಸ್ವಾಮಿಮತ್ತು ವಿಭೂತಿ ಪುರುಷ ಶ್ರೀಸಿದ್ಧಲಿಂಗ ಭಗವತ್ಪಾದರ ಬೆಳ್ಳಿಮೂರ್ತಿಯಮೆರವಣಿಗೆ ನಡೆಯಲಿದೆ. .7ರಂದುಬೆಳಗ್ಗೆ 11 ಗಂಟೆಗೆಬುಕ್ಕಾಂಬುದಿ ಬೆಟ್ಟದಲ್ಲಿಶ್ರೀರಂಭಾಪುರಿ, ಶ್ರೀಉಜ್ಜಯಿನಿ ಮತ್ತು ಶ್ರೀ ಕಾಶೀಜಗದ್ಗುರುಗಳ ಸಾನ್ನಿಧ್ಯದಲ್ಲಿಪುಣ್ಯ ಸ್ಮರಣೋತ್ಸವ ಮತ್ತುಜನ್ಮದಿನೋತ್ಸವ ಕಾರ್ಯಕ್ರಮಜರುಗಲಿದ್ದು, ಶ್ರೀಕಾಶೀ ಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರು ಕಾರ್ಯಕ್ರಮಉದ್ಘಾಟಿಸಲಿದ್ದಾರೆ. ವಿವಿಧಮಠಗಳ ಶ್ರೀಗಳು, ಜನಪ್ರತಿನಿಧಿಗಳು,ರಾಜಕೀಯ ಗಣ್ಯರುಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net